ನರ್ಸಿಂಗ್ ವಿದ್ಯಾರ್ಥಿನಿಗೆ ಔಷಧ ನೀಡಿ ಗ್ಯಾಂಗ್ ರೇಪ್

Kolkata Trainee nurse drugged in car gang-raped,
ಕೋಲ್ಕತಾ, ಅ.29: ನರ್ಸಿಂಗ್ ವಿದ್ಯಾರ್ಥಿನಿಗೆ ಲಿಫ್ಟ್ ನೀಡುವ ನೆಪದಲ್ಲಿ ಕರೆದೊಯ್ದು, ಮಾರ್ಗ ಮಧ್ಯೆ ಆಕೆಗೆ ಮತ್ತಬರಿಸುವ ಔಷಧ ನೀಡಿದ ದುಷ್ಕರ್ಮಿಗಳು ಹಾಡಹಗಲೇ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ಕನಿಷ್ಠ 3 ಅತ್ಯಾಚಾರಿಗಳು ಸೋನಾಗಚ್ಚಿ ಬಳಿ ಆಕೆಯ ಮೇಲೆ ಈ ಪೈಶಾಚಿಕ ಕೃತ್ಯವೆಸಗಿದ್ದಾರೆ ಎಂದು ತಡ ವರದಿಗಳು ತಿಳಿಸಿವೆ.

ಕಳೆದ 2 ತಿಂಗಳಲ್ಲಿ ಕೋಲ್ಕತಾದಲ್ಲಿ ವರದಿಯಾಗಿರುವ 48ನೆಯ ಲೈಂಗಿಕ ಕಿರುಕುಳ ಪ್ರಕರಣ ಇದಾಗಿದೆ. ಕೋಲ್ಕತಾದಲ್ಲಿ ಹೊರವಲಯಗಳಲ್ಲಿ ಸಾರ್ವಜನಿಕ ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಗಮನಾರ್ಹವಾಗಿದೆ.

ಈ ಪ್ರಕರಣದಲ್ಲೂ ಹಾಗೆಯೇ ಆಗಿದೆ. ಭಾನುವಾರ ಬೆಳಗ್ಗೆ 11 ಗಂಟೆಯಲ್ಲಿ ಸಕಾಲಕ್ಕೆ ಬಸ್ ಬಾರದೇ ಇದ್ದಾಗ ಬಾಧಿತ ನರ್ಸಿಂಗ್ ವಿದ್ಯಾರ್ಥಿನಿ ಕಣ್ಣೆದುರಿಗಿದ್ದ ಟ್ಯಾಕ್ಸಿ ಹತ್ತಿದ್ದಾಳೆ. ರಾಜರಹತ್ ಆಸ್ಪತ್ರೆಯಲ್ಲಿ ಎಂದಿನಂತೆ ತರಬೇತಿ ಮುಗಿದ ಬಳಿಕ ಸದರಿ ನರ್ಸಿಂಗ್ ವಿದ್ಯಾರ್ಥಿನಿಯು ಬಿಧಾನನಗರ ರೈಲ್ವೆ ನಿಲ್ದಾಣಕ್ಕೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದಳು. ಆ ವೇಳೆ ನ್ಯಾನೋ ಕಾರೊಂದರಲ್ಲಿ ಬಂದ ದುಷ್ಕರ್ಮಿಗಳು ಯುವತಿಯ ಬಳಿ ಬಂದು ಲಿಫ್ಟ್ ಕೊಡುವುದಾಗಿ ಹೇಳಿದ್ದಾರೆ.

ಕಾರಿನ ಹಿಂಬದಿಯಲ್ಲಿ ಇನ್ನೂ ಒಬ್ಬ ಪ್ರಯಾಣಿಕರು ಇರುವುದನ್ನು ಗಮನಿಸಿದ ಯುವತಿ ಹೆಚ್ಚು ಆಲೋಚನೆ ಮಾಡದೆ ಕಾರು ಹತ್ತಿ, ಚಾಲಕನ ಪಕ್ಕ ಕುಳಿತಿದ್ದಾಳೆ. ಅದಾದನಂತರ ಐದು ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿದೆ. ಅದಾದ ನಂತರ ಗಿರೀಶ್ ಪಾರ್ಕ್ ಬಳಿ ರೂಮಿನಲ್ಲಿ ತಾನಿರುವುದು ಆಕೆಯ ಗಮನಕ್ಕೆ ಬಂದಿದೆ. ಅಲ್ಲಿಂದ ಮುಂದೆ ರಾತ್ರಿನ 8 ಗಂಟೆಯ ವರೆಗೂ ಕಿರಾತಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಪಲ್ಲಬ್ ಕಾಂತಿ ಘೋಷ್ ತಿಳಿಸಿದ್ದಾರೆ.

ಆರೋಪಿಗಳೆಲ್ಲಾ 25-30 ವರ್ಷದ ವಯಸ್ಸಿನವರಿರಬಹುದು. ತಡ ರಾತ್ರಿ ಬಹಿರ್ದೆಸೆಗೆ ಹೋಗಬೇಕೆಂದು ನೆಪ ಹೇಳಿ ಅಲ್ಲಿಂದ ಪರಾರಿಯಾದೆ ಎಂದು ಬಾಧಿತ ಯುವತಿ ತಿಳಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+