Get Updates
Get notified of breaking news, exclusive insights, and must-see stories!

ಕೋಲ್ಕತ್ತ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಪಶ್ಚಿಮ ಬಂಗಾಳ ಆಡಳಿತದಲ್ಲಿ ಒಂದು ಕರಾಳ ಅಧ್ಯಾಯ

ಪಶ್ಚಿಮ ಬಂಗಾಳದ ಕೋಲ್ಕತ್ತದ ಆರ್‌. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕಠೋರ ನಿಲುವನ್ನು ತೆಗೆದುಕೊಂಡಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರ ವಿಫಲವಾಗಿರುವುದು ಇದಕ್ಕೆ ಕಾರಣ.

Kolkata Doctor Rape And Murder A Dark Chapter In West Bengals Governance

ಆರ್‌. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರತಿಭಟನಾನಿರತರ ಗುಂಪು ಆಸ್ಪತ್ರೆಯಲ್ಲಿ ದಾಂಧಲೆ ಮಾಡಲು ಅವಕಾಶ ಕೊಟ್ಟಿದ್ದು ಹೇಗೆ?.

ತಡರಾತ್ರಿ ಕೃತ್ಯ ನಡೆದರೂ ಸಹ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದರು.

ಸಂತ್ರಸ್ತೆಯ ಶವವನ್ನು ನೋಡಲು ಪೋಷಕರಿಗೆ ಅವಕಾಶ ಮಾಡಿಕೊಡಲು ವಿಳಂಬ ಮಾಡಲಾಯಿತು. ಎಫ್‌ಐಆರ್ ದಾಖಲಿಸಲು ಸಹ ತಡ ಮಾಡಲಾಯಿತು.

ಸುಪ್ರೀಂಕೋರ್ಟ್ ಈ ಪರಿಶೀಲನಾ ಅಂಶಗಳನ್ನು ಉಲ್ಲೇಖಿಸಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸರಿಗೆ ಛೀಮಾರಿ ಹಾಕಿತು. ಸವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ಘಟನೆಯ ಬಳಿಕ ಆಸ್ಪತ್ರೆ ಆಡಳಿತ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಗಂಭೀರವಾದ ಕಾಳಜಿಯನ್ನು ವ್ಯಕ್ತಪಡಿಸಿತು.

ಅಪರಾಧ ಮತ್ತು ನಂತರದ ಪರಿಣಾಮಗಳು

ಸಂತ್ರಸ್ತೆ, ಯುವ ವೈದ್ಯೆಯ ಶವ ಅನುಮಾಸ್ಪದ ರೀತಿಯಲ್ಲಿ ಪತ್ತೆಯಾಯಿತು. ಪ್ರಾಥಮಿಕ ಹಂತದಲ್ಲಿ ಆತ್ಮಹತ್ಯೆ ಎಂದು ಅನ್ನಿಸಿತು. ಬಳಿಕ ವಿವರಗಳು ಹೊರ ಬಂದವು, ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ತಿಳಿಯಿತು. ಕಾಲೇಜು ಪ್ರಿನ್ಸಿಪಾಲ್ ಸಂದೀಪ್ ಘೋಷ್ ಅತ್ಯಾಚಾರ & ಕೊಲೆ ಆರೋಪ ತಳ್ಳಿಹಾಕಿ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟರು, ಈ ನಡೆ ಈಗ ಭಾರೀ ಟೀಕೆಗಳಿಗೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿ ಸಂಶಯಾಸ್ಪದ ನಡೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಾಗಿರುವ ಮಮತಾ ಬ್ಯಾನರ್ಜಿ ಈ ಘಟನೆಯ ಸಂಪೂರ್ಣ ಜವಾವ್ದಾರಿ ಹೊರಬೇಕಿದೆ. ಗಂಭೀರ ಸಮಸ್ಯೆಯ ಬಗ್ಗೆ ಮಾತನಾಡಬೇಕಾದ ಮಮತಾ ತಮ್ಮ ಆಡಳಿತದ ವೈಫಲ್ಯದ ವಿರುದ್ಧವೇ ಪ್ರತಿಭಟನೆ ಆರಂಭಿಸಿದರು, ಇದು ಹಲವರ ಹುಬ್ಬೇರಿಸಿತು, ಟೀಕೆಗಳಿಗೆ ದಾರಿ ಮಾಡಿಕೊಟ್ಟಿತು.

ಘಟನೆಯ ಕುರಿತು ಮಮತಾ ಬ್ಯಾನರ್ಜಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಕರೆ ನೀಡಿದರು. ಇದು 14 ವರ್ಷದಿಂದ ರಾಜ್ಯದ ಮುಖ್ಯಸ್ಥರಾಗಿರುವ ಮತ್ತು ಈ ಹಿಂದೆ ಕೇಂದ್ರ ಸಚಿವರಾಗಿದ್ದ ಅವರ ಅನುಭವನ್ನು ವಿರೋಧಿಸುವಂತೆ ಮಾಡಿತು. ಸಿಬಿಐ ತನಿಖೆಯನ್ನು ತ್ವರಿತವಾಗಿ, ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಟೀಕಾಕಾರರು ಒತ್ತಾಯಿಸಿದರು. ಕಾಲಮಿತಿಯಲ್ಲಿ ತನಿಖೆಗೆ ಬೇಡಿಕೆ ಇಡದ ನಡೆ ಸಂತ್ರಸ್ತೆಗೆ ನ್ಯಾಯ ಕೊಡಿಸುವ ಬದಲು ರಾಜಕೀಯಗೊಳಸಲಾಗುತ್ತಿಗೆ ಎಂಬ ಟೀಕೆಗೆ ಕಾರಣವಾಯಿತು.

ಸಮರ್ಥಿಸಿಕೊಳ್ಳಲು ಹೋಗಿ ಆರೋಪ ಎದುರಿಸಿದ ಮಮತಾ

ತಮ್ಮ ಸಹೋದ್ಯೋಗಿಗೆ ನ್ಯಾಯ ಕೊಡಿಸುವಂತೆ ವೈದ್ಯರು ನಡೆಸುತ್ತಿದ್ದ ಶಾಂತಿಯುತ ಧರಣಿ, ತಡರಾತ್ರಿ ಆಸ್ಪತ್ರೆ ಆವರಣದಲ್ಲಿ ನಡೆದ ದಾಂಧಲೆ ಪ್ರಕರಣದ ಬಳಿಕ ಈ ಘಟನೆಯ ಕರಾಳ ಪರಿಸ್ಥಿತಿಯನ್ನು ತೆರೆದಿಟ್ಟಿತು. ರಾಜ್ಯದ ಆಡಳಿತ ಪಕ್ಷ ಟಿಎಂಸಿಯವರು ಈ ಘಟನೆ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ನಂಬಿದರು. ಈ ದಾಂಧಲೆ ಅತ್ಯಾಚಾರ & ಕೊಲೆ ಪ್ರಕರಣದ ತನಿಖೆಯ ಹಾದಿ ತಪ್ಪಿಸುವ ಪ್ರಮುಖ ಸಾಕ್ಷ್ಯಗಳ ನಾಶಕ್ಕೆ ಕಾರಣವಾಯಿತು ಎಂಬ ಆರೋಪವಿದೆ. ಟಿಎಂಸಿ ನಾಯಕರ ಆಪ್ತ ವಲಯದಲ್ಲಿದ್ದರು ದಾಂಧಲೆಯಲ್ಲಿ ಪಾಲ್ಗೊಂಡ ಕುರಿತು ಸಿಸಿಟಿವಿ ದೃಶ್ಯಾವಳಿಗಳೇ ಹೇಳುತ್ತಿವೆ, ಇದು ಸಮರ್ಥನೆ ಮಾಡಿಕೊಳ್ಳಲು ಹೋಗಿ ಆರೋಪ ಎದುರಿಸುವಂತೆ ಮಾಡಿತು.

ಬೆಳೆಯುತ್ತಿರುವ ಸಂಶಯಗಳು ಮತ್ತು ಬಹುದೊಡ್ಡ ಪ್ರಶ್ನೆಗಳು

ಘಟನೆ ಕುರಿತು ಇಂದಿಗೂ ಹಲವಾರು ಉತ್ತರವಿಲ್ಲದ ಪ್ರಶ್ನೆಗಳಿವೆ, ಇವು ತನಿಖೆಯ ಮೇಲೆ ಕರಿನೆರಳು ಕಾಣುವಂತೆ ಮಾಡಿದೆ. ಸಂತ್ರಸ್ತೆಯ ಶವವನ್ನು ಪೋಷಕರಿಗೆ ತಕ್ಷಣ ಏಕೆ ತೋರಿಸಲಿಲ್ಲ?, ವಿಳಂಬ ಮಾಡಲು ಆದೇಶ ನೀಡಿದವರು ಯಾರು?. ಘಟನಾ ಸ್ಥಳದಲ್ಲಿ ಇದ್ದ ಬೆಚ್ಚಿ ಬೀಳಿಸುವ ಅಪರಾಧದ ಸ್ವರೂಪ ಎಂಥಹದ್ದು?. ಘಟನೆ ನಡೆದ ವಿಭಾಗದಲ್ಲಿ ತಕ್ಷಣ ತುರ್ತು ನಿರ್ವಹಣೆ ಕಾಮಗಾರಿ ಕೈಗೊಂಡಿದ್ದು ಏಕೆ?, ಆರೋಪಿ ಬಂಧನ ಸೇರಿ ಹಲವು ವಿಚಾರದಲ್ಲಿ ಸಂಜಯ್ ರಾಯ್ ಸೇರಿದಂತೆ ಹಲವರ ಷಡ್ಯಂತ್ರ ಅಡಗಿದೆ ಎಂದು ಸಂತ್ರಸ್ತೆ ಪೋಷಕರು ನಂಬಿದ್ದಾರೆ.

ಈ ವಿಚಾರದಲ್ಲಿ ಮೆಡಿಕಲ್ ಮಾಫಿಯಾ ಭಾಗಿಯಾಗಿದೆಯೇ?. ಇಡೀ ಘಟನೆಯನ್ನು ಮುಚ್ಚಿ ಹಾಕಲು ರಾಜ್ಯದ ಪ್ರಭಾವಿಗಳು, ಶಕ್ತಿಯುತ ಸಂಘಟಿತ ಪ್ರಯತ್ನ ನಡೆಸಿದ್ದಾರೆಯೇ?, ಭ್ರಷ್ಟಾಚಾರ ಮತ್ತು ಘಟನೆ ಕುರಿತು ದಾರಿ ತಪ್ಪಿಸಲು ಯತ್ನಿಸಿದ ಪ್ರಿನ್ಸಿಪಾಲ್ ವಿರುದ್ಧವೂ ಕ್ರಮ ಕೈಗೊಳ್ಳಲು ಏಕೆ ಹಿಂಜರಿಯಲಾಗುತ್ತಿದೆ? ಎಂಬುದು ಘಟನೆ ಕುರಿತ ಎದ್ದಿರುವ ಪ್ರಶ್ನೆ, ಸಂಶಯಗಳಾಗಿವೆ.

ಹೊಣೆಗಾರಿಕೆಗಾಗಿ ಕರೆ

ಕೋಲ್ಕತ್ತದ ಆರ್‌. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಈಗ ಕೇವಲ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸೀಮಿತವಾಗಿಲ್ಲ. ದೇಶವೇ ಘಟನೆಯನ್ನು ನೋಡುತ್ತಿದೆ. ಪಶ್ಚಿಮ ಬಂಗಾಳ ರಾಜ್ಯದ ಕಾನೂನು ಮತ್ತು ಆಡಳಿತದಲ್ಲಿ ಗಂಭೀರವಾದ ನ್ಯೂನ್ಯತೆಗಳನ್ನು ತೆರೆದಿಟ್ಟಿದೆ, ಇದು ಮಮತಾ ಬ್ಯಾನರ್ಜಿ ಆಡಳಿತ ವಿಚಾರದಲ್ಲಿ ವಿಫಲವಾಗಿದ್ದಾರೆ ಎಂದು ಹೇಳುತ್ತಿರುವವರಿಗೆ ಈಗ ಅವರು ಕಠಿಣ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳುವಂತಾಗಿದೆ.

ಘಟನೆ ಅಂತಿಮ ಚಿತ್ರಣ

ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತು ಈ ಘಟನೆ ಸುತ್ತಲೂ ನಡೆದ ಕೆಲವು ಘಟನೆಗಳು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಶ್ನಿಸುವಂತಾಗಿದೆ. ಮಹಿಳಾ ಸುರಕ್ಷತೆ, ಆಡಳಿತದಲ್ಲಿರುವವರ ಬದ್ಧತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಸಂತ್ರಸ್ತೆಗೆ ಮಾತ್ರವಲ್ಲ ಆಕೆಯ ಕುಟುಂಬಕ್ಕೆ ಸಹ ನ್ಯಾಯ ಸಿಗಬೇಕಿದೆ. ಆಡಳಿತವಲ್ಲಿ ವಿಫಲವಾಗಿ ಸಂತ್ರಸ್ತೆಯನ್ನು ರಕ್ಷಿಸುವ ಬದಲು ಪ್ರಭಾವಿಗಳನ್ನು ರಕ್ಷಿಸುವವರಿಗೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಸಿಗುವ ನ್ಯಾಯ ಪಾಠವಾಗಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+