ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಗಂಟೆ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಿದ್ದೇಕೆ?

|
Google Oneindia Kannada News

ತಿರುವನಂತಪುರಂ, ನವೆಂಬರ್‌ 2: ಶ್ರೀಪದ್ಮನಾಭಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಾಟ್ಟು ಮೆರವಣಿಗೆಯು ಮಂಗಳವಾರ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾಗಿತು. ಮೆರವಣಿಗೆಗೆ ಸಾಂಪ್ರದಾಯಿಕ ಇದು ಮಾರ್ಗವಾಗಿರುವುದರಿಂದ ಆ ಅವಧಿಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.

ಮೆರವಣಿಗೆಯ ಸುಗಮ ಸಂಚಾರಕ್ಕಾಗಿ, ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರ (ನವೆಂಬರ್ 1) ಐದು ಗಂಟೆಗಳ ಕಾಲ ಅಂದರೆ, ಸಂಜೆ 4 ರಿಂದ ರಾತ್ರಿ 9 ರವರೆಗೆ ಮುಚ್ಚಲಾಗಿತ್ತು.

ಕೆಎಸ್‌ಆರ್‌ಟಿಸಿಯಿಂದ ಗೋವಾ, ಕೇರಳಕ್ಕೆ ಪ್ಯಾಕೇಜ್ ಟೂರ್‌ಕೆಎಸ್‌ಆರ್‌ಟಿಸಿಯಿಂದ ಗೋವಾ, ಕೇರಳಕ್ಕೆ ಪ್ಯಾಕೇಜ್ ಟೂರ್‌

ಶತಮಾನಗಳ ಹಿಂದಿನ ಆಚರಣೆಗಳ ಪ್ರಕಾರ, ಶ್ರೀಪದ್ಮನಾಭಸ್ವಾಮಿ ದೇವಸ್ಥಾನದಿಂದ ದೇವತೆಗಳನ್ನು ಪವಿತ್ರ ಸ್ನಾನಕ್ಕಾಗಿ ಸಮುದ್ರಕ್ಕೆ ಕೊಂಡೊಯ್ಯಲಾಗುತ್ತದೆ. ಮಾರ್ಗವು ವಿಮಾನ ನಿಲ್ದಾಣದ ರನ್‌ವೇ ಮೂಲಕ ಹಾದು ಹೋಗುವುದರಿಂದ ಇದು ಮೆರವಣಿಗೆಯ ಸಾಂಪ್ರದಾಯಿಕ ಮಾರ್ಗವಾಗಿರುವುದರಿಂದ ಆ ಅವಧಿಯವರೆಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗುತ್ತದೆ.

ವಿಮಾನ ನಿಲ್ದಾಣವು ಪ್ರತಿ ವರ್ಷ ಸಾಂಪ್ರದಾಯಿಕ ಆರಾಟ್ಟು ಮೆರವಣಿಗೆಯ ಸಮಯದಲ್ಲಿ ತನ್ನ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ (ಆರಾಟ್ಟು- ದೇವತೆಯ ಧಾರ್ಮಿಕ ಸ್ನಾನ). ಈ ಅವಧಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಆಯಾ ವಿಮಾನಯಾನ ಸಂಸ್ಥೆಗಳಿಂದ ಇತರ ಸಮಯದಲ್ಲಿ ನೀಡಲಾಗುತ್ತದೆ.

ತಿರುವನಂತಪುರ: ಬ್ರೇಕ್ ಅಪ್ ನಿರಾಕರಿಸಿದ್ದಕ್ಕೆ ಗೆಳತಿ ಕೊಟ್ಟಳು ವಿಷ- ವಿದ್ಯಾರ್ಥಿ ಸಾವುತಿರುವನಂತಪುರ: ಬ್ರೇಕ್ ಅಪ್ ನಿರಾಕರಿಸಿದ್ದಕ್ಕೆ ಗೆಳತಿ ಕೊಟ್ಟಳು ವಿಷ- ವಿದ್ಯಾರ್ಥಿ ಸಾವು

ಈ ಶತಮಾನದಷ್ಟು ಹಳೆಯದಾದ ವಿಷ್ಣು ದೇವಾಲಯವನ್ನು ಸಾಂಪ್ರದಾಯಿಕವಾಗಿ ದೇವಾಲಯದ ಉತ್ತರಾಧಿಕಾರಿಗಳಾದ ಮಾಜಿ ತಿರುವಾಂಕೂರು ದೊರೆ ಮಾರ್ತಾಂಡ ವರ್ಮ ಅವರು ವರ್ಷಗಟ್ಟಲ ಕಾಲ ನಿರ್ವಹಿಸುತ್ತಿದ್ದರು. ಈ ಮೆರವಣಿಗೆಯ ಸಮಯದಲ್ಲಿ ವಿಷ್ಣುವಿನ ವಿಗ್ರಹವನ್ನು ತಿರುವನಂತಪುರಂನ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಶಂಕುಮುಖಂ ಸಮುದ್ರ ದಂಡೆಗೆ ಕೊಂಡೊಯ್ಯಲಾಗುತ್ತದೆ. 1932ರಿಂದಲೂ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಮೊದಲೇ ದೇವರಿಗೆ ವರ್ಷಕ್ಕೆ ಎರಡು ಬಾರಿ ಪವಿತ್ರ ಸ್ನಾನ ಮಾಡಿಸಲಾಗುತ್ತದೆ.

ವರ್ಷಕ್ಕೆ ಎರಡು ಬಾರಿ ಹಬ್ಬ

ವರ್ಷಕ್ಕೆ ಎರಡು ಬಾರಿ ಹಬ್ಬ

ಈ ಹಬ್ಬಕ್ಕಾಗಿ ಅದನ್ನು ಮುಚ್ಚುವ ಮೊದಲು ವಿಮಾನ ನಿಲ್ದಾಣವು ಏರ್‌ಮೆನ್‌ಗಳಿಗೆ ಸೂಚನೆಯನ್ನು ನೀಡುತ್ತದೆ. ಏಕೆಂದರೆ ಇದು ವರ್ಷಕ್ಕೆ ಎರಡು ಬಾರಿ ನಡೆಯುತ್ತದೆ. ಮೊದಲು ಮಾರ್ಚ್ ಮತ್ತು ಏಪ್ರಿಲ್ ನಡುವೆ ಪಂಗುನಿ ಹಬ್ಬಕ್ಕಾಗಿ ಮತ್ತು ನಂತರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಆಲ್ಪಾಸಿ ಆಚರಿಸಲು ವಿಮಾನ ನಿಲ್ದಾಣವನ್ನು ಮುಚ್ಚಲಾಗುತ್ತದೆ.

ರನ್‌ವೇ ಮೂಲಕ ಶಂಕುಮುಖಂ ಸಮುದ್ರಕ್ಕೆ ಹೋಗುತ್ತಾರೆ

ರನ್‌ವೇ ಮೂಲಕ ಶಂಕುಮುಖಂ ಸಮುದ್ರಕ್ಕೆ ಹೋಗುತ್ತಾರೆ

ಈ ಮೆರವಣಿಗೆಗಾಗಿ ನೂರಾರು ಜನರು ಮತ್ತು ನಾಲ್ಕು ಆನೆಗಳೊಂದಿಗೆ ಗರುಡ ವಾಹನಗಳಲ್ಲಿ ಪುರೋಹಿತರು ವಿವಿಧ ಶೈಲಿಯ ಹೊದಿಕೆಗಳಿಂದ ಪದ್ಮನಾಭಸ್ವಾಮಿಯನ್ನು ಅಲಂಕರಿಸಲ್ಪಟ್ಟಿರುತ್ತಾರೆ. ನರಸಿಂಹ ಮೂರ್ತಿ ಮತ್ತು ಕೃಷ್ಣ ಸ್ವಾಮಿಗಳ ಉತ್ಸವ ವಿಗ್ರಹವನ್ನು ಹೊತ್ತುಕೊಂಡು ಈ ಉದ್ದದ ರನ್‌ವೇ ಮೂಲಕ ಶಂಕುಮುಖಂ ಸಮುದ್ರಕ್ಕೆ ತೆರಳುತ್ತಾರೆ. ಈ ಕಡಲತೀರದಲ್ಲಿ ದೇವರಿಗೆ ಪವಿತ್ರ ಸ್ನಾನದ ನಂತರ ವಿಗ್ರಹಗಳನ್ನು ಸಾಂಪ್ರದಾಯಿಕ ಪಂಜುಗಳಿಂದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಹಿಂತಿರುಗಿಸಲಾಗುತ್ತದೆ. ಇದು ಉತ್ಸವದ ಮುಕ್ತಾಯವನ್ನು ಸೂಚಿಸುತ್ತದೆ.

ದ್ರಾವಿಡ ಶೈಲಿಯ ವಾಸ್ತುಶಿಲ್ಪದ ದೇವಸ್ಥಾನ

ದ್ರಾವಿಡ ಶೈಲಿಯ ವಾಸ್ತುಶಿಲ್ಪದ ದೇವಸ್ಥಾನ

ಕೇರಳ ರಾಜ್ಯದ ರಾಜಧಾನಿಯಾಗಿರುವ ತಿರುವನಂತಪುರಂನ ಪೂರ್ವದ ಕೋಟೆಯ ಒಳಗೆ ಇರುವ ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನವು ವಿಷ್ಣು ದೇವರಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನವು ಕೇರಳ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ದೇವಸ್ಥಾನವಾಗಿದೆ. ಇದನ್ನು ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನ ಎಂದು ಗುರುತಿಸಲ್ಪಟ್ಟಿದೆ.

ವಿಷ್ಣುವಿಗೆ ಸಮರ್ಪಿತ ದಿವ್ಯದೇಸಮ್‌ಗಳಲ್ಲಿ ಒಂದು

ವಿಷ್ಣುವಿಗೆ ಸಮರ್ಪಿತ ದಿವ್ಯದೇಸಮ್‌ಗಳಲ್ಲಿ ಒಂದು

ಪದ್ಮನಾಭಸ್ವಾಮಿ ದೇವಸ್ಥಾನದ ಇತಿಹಾಸವು 8ನೇ ಶತಮಾನದ ಕಾಲಕ್ಕೆ ಸೇರಿದ್ದಾಗಿದೆ. ಇದು ಭಾರತದಲ್ಲಿರುವ ವಿಷ್ಣುವಿಗೆ ಸಮರ್ಪಿಸಲಾದ ದೇವಾಲಯಗಳಲ್ಲಿ ಅಥವಾ ದಿವ್ಯ ದೇಸಮ್‌ಗಳಲ್ಲಿ ಒಂದಾಗಿದೆ. ದಿವ್ಯ ದೇಸಮ್‌ಗಳೆಂದರೆ ವಿಷ್ಣು ದೇವರ ಪವಿತ್ರ ನೆಲೆಬೀಡುಗಳಾಗಿದ್ದು ಅವುಗಳನ್ನು ತಮಿಳು ಅಳ್ವಾರ್‌ಗಳ (ಸಂತರ) ಕೆಲಸಗಳಲ್ಲಿ ನಮೂದಿಸಲಾಗಿದೆ. ಈ ದೇವಸ್ಥಾನದ ಪ್ರಮುಖ ದೇವರು ಸರ್ಪದ ಮೇಲೆ ಒರಗಿದ ಮಲಗಿರುವ ಅನಂತ, ವಿಷ್ಣು ದೇವರಾಗಿದ್ದಾರೆ.

English summary
Alpasi Aarattu Procession of Sri Padmanabhaswamy Temple passed through Thiruvananthapuram International Airport on Tuesday. The airport was closed for that period as it was the traditional route for the procession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X