ಸೋನಿಯಾ ಗಾಂಧಿ ಏಕೆ ಪ್ರಧಾನಿ ಆಗಲಿಲ್ಲ? ಅವರೇ ಕೊಟ್ಟಿದ್ದಾರೆ ಉತ್ತರ

Recommended Video

      ಸೋನಿಯಾ ಗಾಂಧಿ ಏಕೆ ಭಾರತದ ಪ್ರಧಾನಿ ಆಗಲಿಲ್ಲ? ಇಲ್ಲಿದೆ ಉತ್ತರ | Oneindia Kannada

      ನನ್ನ ಮಿತಿಗಳು ಗೊತ್ತಿದ್ದವು. ಅವರು ನನಗಿಂತ ಒಳ್ಳೆ ಅಭ್ಯರ್ಥಿ ಎಂಬುದು ನನಗೆ ಗೊತ್ತಿತ್ತು. ಆದ್ದರಿಂದಲೇ 2004ರಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆರಿಸಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಶುಕ್ರವಾರ ಹೇಳಿದ್ದಾರೆ.

      ಇಂಡಿಯಾ ಟುಡೇ ಕಾನ್ ಕ್ಲೇವ್ ನಲ್ಲಿ ಮಾತನಾಡಿದ ಅವರು, ನನ್ನ ಮಿತಿಗಳು ಗೊತ್ತಿವೆ. ನನಗಿಂತ ಮನಮೋಹನ್ ಸಿಂಗ್ ಉತ್ತಮ ಪ್ರಧಾನಿ ಆಗಬಲ್ಲರು ಎಂಬುದು ಗೊತ್ತಿತ್ತು ಎಂದು ಅವರು ಹೇಳಿದ್ದಾರೆ. "ನೀವೇಕೆ ಪ್ರಧಾನಿ ಆಗಲಿಲ್ಲ?" ಎಂಬ ಪ್ರಶ್ನೆಗೆ ಉತ್ತರಿಸಿದರು.

      ಸೋನಿಯಾ ಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರದಿಂದ ಸಂಸದೆ ಆಗಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಮಾತನಾಡಿದ ಅವರು, ಅದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಪಕ್ಷವು ನಿರ್ಧಾರ ಕೈಗೊಳ್ಳಲಿದೆ ಎಂದು ಉತ್ತರಿಸಿದ್ದಾರೆ.

      Knew Manmohan Singh would be a better PM than me: Sonia Gandhi

      ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ಹತ್ತೊಂಬತ್ತು ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರ ಸ್ಥಾನವನ್ನು ರಾಹುಲ್ ಗಾಂಧಿ ಅಲಂಕರಿಸಿದ್ದಾರೆ. "ರಾಹುಲ್ ಗಾಂಧಿ ಅವರಿಗೆ ನಿಮ್ಮ ಸಲಹೆ ಏನು?" ಎಂಬ ಪ್ರಶ್ನೆಗೆ ಉತ್ತರಿಸಿ, ರಾಹುಲ್ ಗೆ ತನ್ನ ಜವಾಬ್ದಾರಿ ಗೊತ್ತಿದೆ. ಅಗತ್ಯ ಬಂದಾಗ ನಾನಿದ್ದೇನೆ. ನಾನಾಗಿಯೇ ಯಾವುದೇ ಸಲಹೆ ನೀಡಲ್ಲ. ಹಿರಿಯರು ಹಾಗೂ ಹೊಸ ಮುಖಗಳೊಂದಿಗೆ ಪಕ್ಷವನ್ನು ಮತ್ತೆ ಕಟ್ಟಲು ರಾಹುಲ್ ಬಯಸಿರುವುದಾಗಿ ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+