ಗೋವಿನ ವಧೆ ಹಿಂದೂ ಮಹಿಳೆ ಅತ್ಯಾಚಾರಕ್ಕೆ ಸಮಾನ!

ಕೊಲ್ಕತ, ಜು, 03 : ಗೋವುಗಳನ್ನು ಕೊಲ್ಲುವುದು ಅಥವಾ ಕಳ್ಳ ಸಾಗಣೆ ಮಾಡುವುದು ಹಿಂದೂ ಹೆಣ್ಣು ಮಗಳನ್ನು ಅತ್ಯಾಚಾರ ಮಾಡಿದಂತೆ ಹಾಗೂ ಹಿಂದೂ ದೇವಾಲಯವನ್ನು ನಾಶ ಮಾಡುವಿಕೆಗೆ ಸಮಾನ ಎಂದು ಆರ್‌ಎಸ್‌ಎಸ್‌ ವಕ್ತಾರ ಜಿಶ್ನು ಬಸು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಾಂಗ್ಲಾದೇಶಕ್ಕೆ ಪ್ರವಾಸ ಹೋದ ಸಂದರ್ಭದಲ್ಲಿ ಬಿಎಸ್ಎಫ್ (Border Security Force) ಸೈನಿಕರಿಗೆ ಗೋ ಕಳ್ಳಸಾಗಾಣಿಕೆಯನ್ನು ತಡೆಯಬೇಕೆಂದು ಆದೇಶ ಹೊರಡಿಸಿದ್ದು, ಬಾಂಗ್ಲಾ ದೇಶದ ಜನರು ಗೋಮಾಂಸ ಸೇವಿಸುವುದನ್ನು ಬಿಡಬೇಕೆಂದು ಕರೆಕೊಟ್ಟಿದ್ದಾರೆ. ಬಾಂಗ್ಲಾದೇಶಕ್ಕೆ ಸಾಗಿಸಲಾಗುತ್ತಿರುವ ಗೋವುಗಳ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ![ಸಕಲವನ್ನೂ ನೀಡುವ ಗೋ ಮಾತೆಗೆ ನಮನ]

Killing Or Smuggling A Cow Is Equivalent To Raping A Hindu Girl : RSS Spokesman

ಪ್ರತಿವರ್ಷ ಭಾರತದಿಂದ ಸುಮಾರು 2 ಮಿಲಿಯನ್ ಜಾನುವಾರುಗಳು ಬಾಂಗ್ಲಾದೇಶಕ್ಕೆ ಕಳ್ಳಸಾಗಾಣಿಕೆ ಆಗುತ್ತದೆ. ಬಿಎಸ್ಎಫ್ ಸೈನಿಕರು 90,000 ಜಾನುವಾರುಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ 400 ಭಾರತ ಹಾಗೂ ಬಾಂಗ್ಲಾದೇಶದ ಕಳ್ಳಸಾಗಾಣಿಕೆದಾರರನ್ನು ಸೆರೆ ಹಿಡಿದಿದ್ದಾರೆ. ಜಾನುವಾರು ವಧೆ, ಹರಾಜು ಮಾಡುವ ಘಟಕಗಳು ಹಾಗೂ ಗೋಮಾಂಸ ಸಂಸ್ಕರಣೆ ಘಟಕ , ಚರ್ಮ ಸಂಸ್ಕರಣಾ ಘಟಕಗಳು, ಮೂಳೆ ಪುಡಿ ಮಾಡುವ ಕಾರ್ಖಾನೆಗಳು ರಾಷ್ಟ್ರದ 190 ಬಿಲಿಯನ್ ಆರ್ಥಿಕತೆಗೆ 3%ನಷ್ಟು ಕೊಡುಗೆ ನೀಡುತಿತ್ತು ಎಂದು ಅಂದಾಜಿಸಲಾಗಿದೆ.[ಗೋವು ಪಾಲನೆಯಿಂದ ಭೂಮಿಯ ಫಲವತ್ತತೆ]

ಬಾಂಗ್ಲಾದೇಶ ಗೋ ಮಾಂಸವನ್ನು ರಪ್ಫು ಮಾಡುವಲ್ಲಿ ಮುಂಚೂಣಿಯಲ್ಲಿದೆ. ಇದು ಅಂತರಾಷ್ಟ್ರೀಯ ಬೇಡಿಕೆಗಳನ್ನು 75% ಕಡಿದುಕೊಂಡಿದೆ. ಈ ಕಂಪನಿಯು ಸುಮಾರು 125 ಟನ್ ನಷ್ಟು ಗೋಮಾಂಸವನ್ನು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಒತ್ತಾಯಪೂರ್ವಕವಾಗಿ 2 ಸಂಸ್ಕರಣಾ ಘಟಕಗಳನ್ನು ಮುಚ್ಚಿದ ಪರಿಣಾಮ ಜಾನುವಾರುಗಳ ಬೆಲೆಯಲ್ಲಿ ಕಳೆದ 6 ತಿಂಗಳಿಗೆ ಹೋಲಿಸಿದರೆ 45% ಇಳಿಕೆಯಾಗಿದೆ ಎಂದು ಹೇಳಿದ್ದಾರೆ. ಹೆಚ್ಚಿದ ಬೇಡಿಕೆ ಅನ್ವಯ ಜಾನುವಾರುಗಳನ್ನು ನೇಪಾಳ, ಭೂತಾನ, ಮಯನ್ಮಾರ್‌ಗಳಿಂದ ಆಮದು ಮಾಡಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಆದರೆ ಭಾರತದ ಜಾನುವಾರುಗಳು ಉತ್ತಮ ಗುಣಮಟ್ಟದವು ಎಂದು ಸಯ್ಯದ್ ಹಸನ್ ಹಬೀಬ್ ಹೇಳಿದ್ದಾರೆ.

ಭಾರತವು ಸುಮಾರು 300 ಮಿಲಿಯನ್ ಜಾನುವಾರುಗಳಿಗೆ ತವರು ಮನೆಯಾಗಿದೆ. ಪ್ರಂಪಚದಲ್ಲಿ ಗೋಮಾಂಸವನ್ನು ರಫ್ತು ಮಾಡುವ ದೊಡ್ಡ ರಾಷ್ಟ್ರವಾಗಿದೆ ಹಾಗೂ 5ನೇ ದೊಡ್ಡ ಗ್ರಾಹಕ ದೇಶವಾಗಿದೆ. ಹಾಗಾಗಿ ಇದನ್ನು ತಡೆಗಟ್ಟಲು ಗೋ ಸಂರಕ್ಷಣಾ ಮತ್ತು ಗೋಮಾಂಸ ಮಾರಾಟ ನಿಷೇಧದಲ್ಲಿ ಗಣನೀಯ ಯಶಸ್ಸು ಅನಿವಾರ್ಯವಾಗಿದೆ.

ನನ್ನ ಧರ್ಮದಲ್ಲಿ ಗೋಮಾಂಸವನ್ನು ತಿನ್ನಲು ಮತ್ತು ಮಾರಾಟ ಮಾಡಲು ಅವಕಾಶ ಇದೆ. ಆದರೆ ಹಿಂದೂಗಳಿಗೆ ಆಗುವ ತೊಂದರೆಯಾದರು ಏನು? ಬಿಎಸ್ಎಫ್ ಸೈನಿಕರು ಬೇರೆಲ್ಲಾ ಪ್ರಾಣಿಗಳನ್ನು ಕೊಲ್ಲುತ್ತಾರೆ ಮತ್ತು ಹರಾಜು ಮಾಡುತ್ತಾರೆ. ಆದರೆ ಇದನ್ನು ಮಾತ್ರ ತಪ್ಪು ಎನ್ನುವುದು ಸರಿಯೇ? ಎಂದು ತರಫ್ ದಾರ್ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+