'ಹಿಂದೂಗಳನ್ನು ಕೊಂದರೆ ಜಿಹಾದಿಗಳನ್ನು ಕೊಲ್ಲುವುದನ್ನು ನಿಲ್ಲಿಸುವುದಿಲ್ಲ' ಬಿಜೆಪಿ ಶಾಸಕ
ನವದೆಹಲಿ, ಅಕ್ಟೋಬರ್ 11: ವಿಎಚ್‌ಪಿ ಮತ್ತು ಇತರ ಸಂಘಟನೆಗಳು ಭಾನುವಾರ ಆಯೋಜಿಸಿದ್ದ 'ವಿರಾಟ್ ಹಿಂದೂ ಸಭಾ'ದ ಹಲವು ದ್ವೇಷದ ಭಾಷಣದ ವಿಡಿಯೋಗಳು ವೈರಲ್ ಆಗಿವೆ. ಅದರಲ್ಲಿ ಗಾಜಿಯಾಬಾದ್‌ನ ಲೋನಿಯ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್ ಅವರು ಜಿಹಾದಿಗಳು ಹಿಂದೂಗಳನ್ನು ಕೊಂದರೆ "ಜಿಹಾದಿಗಳನ್ನು" ಕೊಲ್ಲುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಈಶಾನ್ಯ ದೆಹಲಿಯ ಸುಂದರ್ ನಗರಿಯಲ್ಲಿ ಹಿಂದೂ ಯುವಕ ಮನೀಶ್ ಹತ್ಯೆಯ ವಿರುದ್ಧ ಭಾನುವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಿದ ಬಿಜೆಪಿ ಶಾಸಕ ನಂದ್ ಕಿಶೋರ್ ಅವರು ದ್ವೇಷದ ಭಾಷಣಗಳಿಗಾಗಿ ಸದ್ಯ ವಿವಾದ ಹುಟ್ಟುಹಾಕಿದ್ದಾರೆ.
ಈವೆಂಟ್‌ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಗುರ್ಜರ್ ಅವರು ತಮ್ಮ ಫೈರ್‌ಬ್ರಾಂಡ್ ಶೈಲಿಯಲ್ಲಿ ಭಾಷಣ ಮಾಡಿದ್ದಾರೆ. "ಸಿಎಎ ಕುರಿತು ದೆಹಲಿಯಲ್ಲಿ ಗಲಭೆಗಳು ನಡೆದವು. ಜಿಹಾದಿಗಳು ಹಿಂದೂಗಳನ್ನು ಕೊಲ್ಲಲು ಪ್ರಾರಂಭಿಸಿದರು. ನೀವು ಅಲ್ಲಿದ್ದಿರಿ. ನೀವು ನಮ್ಮನ್ನು ಒಳಗೆ ಬಿಟ್ಟಿದ್ದೀರಿ. ಆದರೆ ನಾನು 2.5 ಲಕ್ಷ ಜನರೊಂದಿಗೆ ದೆಹಲಿಯನ್ನು ಪ್ರವೇಶಿಸಿದ್ದೇನೆ ಎಂದು ಆರೋಪಿಸಲಾಗಿದೆ" ಎಂದು ಅವರು ಹೇಳಿದರು.

'ಹಿಂದೂಗಳನ್ನು ಕೊಂದರೆ ಜಿಹಾದಿಗಳನ್ನು ಕೊಲ್ಲುತ್ತೇವೆ'
'ನಾವು ಜನರಿಗೆ ವಿವರಿಸಲು ಅಲ್ಲಿಗೆ ಹೋಗಿದ್ದೆವು. ಆದರೆ ನಾವು ಜಿಹಾದಿಗಳನ್ನು ಕೊಂದಿದ್ದೇವೆ ಎಂದು ಪೊಲೀಸರು ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ' ಎಂದು ಗುರ್ಜರ್ ವಿಡಿಯೊದಲ್ಲಿ ಹೇಳುವುದನ್ನು ಕೇಳಬಹುದು. ಹಿಂದೂಗಳನ್ನು ಕೊಂದರೆ "ಜಿಹಾದಿಗಳನ್ನು" ಕೊಲ್ಲುವುದನ್ನು ನಾವು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಗುರ್ಜರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೊಗಳಲ್ಲಿ "ತಪ್ಪಾಗಿ ಅರ್ಥೈಸಲಾಗಿದೆ" ಎಂದು ಹೇಳಿದರು. ಇನ್ನೊಂದು ವಿಡಿಯೊದಲ್ಲಿ ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಸಮುದಾಯವನ್ನು "ಸಂಪೂರ್ಣ ಬಹಿಷ್ಕಾರ" ಕ್ಕೆ ಕರೆ ನೀಡುವುದನ್ನು ಕೇಳಬಹುದು.
ಕಾರ್ಯಕ್ರಮ ಸಂಘಟಕರ ವಿರುದ್ಧ ಎಫ್‌ಐಆರ್
ಈ ಭಾಷಣದಿಂದಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಕಾರ್ಯಕ್ರಮದ ಇತರ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರಿಂದ ಅನುಮತಿ ಪಡೆಯದಿದ್ದಕ್ಕಾಗಿ ಸಂಘಟಕರ ವಿರುದ್ಧ ಐಪಿಸಿ ಸೆಕ್ಷನ್ 18 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಶಹದ್ರಾ) ಆರ್ ಸತ್ಯಸುಂದರಂ ಹೇಳಿದ್ದಾರೆ.
ಆದರೆ ಕಾರ್ಯಕ್ರಮಕ್ಕೆ ನಗರ ಪೊಲೀಸರಿಂದ ಅನುಮತಿ ಪಡೆದಿಲ್ಲ ಎಂಬ ಹೇಳಿಕೆಯನ್ನು ವಿಎಚ್‌ಪಿ ತಳ್ಳಿಹಾಕಿದೆ. ನಾವು ಕಾರ್ಯಕ್ರಮಕ್ಕೆ ಒಪ್ಪಿಗೆ ಪಡೆಯದೇ ಹೋದಲ್ಲಿ ದಿಲ್ಶಾದ್ ಗಾರ್ಡನ್‌ನಲ್ಲಿರುವ ಕಾರ್ಯಕ್ರಮದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಹೇಗೆ ಸಾಧ್ಯ ಎಂದು ಅವರು ಹೇಳಿದರು. ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆಗಳು ಮತ್ತು ಶಿಫಾರಸುಗಳ ನಂತರ ನಾವು ದಿಲ್ಶಾದ್ ಗಾರ್ಡನ್‌ನ ರಾಮಲೀಲಾ ಮೈದಾನದಲ್ಲಿ ಸ್ಥಳವನ್ನು ನಿಗದಿಪಡಿಸಿದ್ದೇವೆ ಎಂದಿದ್ದಾರೆ. "ನಾವು ಮೊದಲು ಮನೀಶ್ ಅವರ (ಈಶಾನ್ಯ ದೆಹಲಿಯಲ್ಲಿ ಕೊಲ್ಲಲ್ಪಟ್ಟ ವ್ಯಕ್ತಿ) ಮನೆಯ ಬಳಿ ಸಭೆ ಆಯೋಜಿಸಲು ಯೋಜಿಸಿದ್ದೆವು. ಆದರೆ ಪೊಲೀಸರ ಕೋರಿಕೆಯ ಮೇರೆಗೆ, ಸ್ಥಳವನ್ನು ರಾಮಲೀಲಾ ಮೈದಾನಕ್ಕೆ ಬದಲಾಯಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ದೆಹಲಿಯ ಸುಂದರ್ ನಗರಿಯಲ್ಲಿ ಮನೀಶ್‌ನನ್ನು ಇರಿದು ಹತ್ಯೆ ಮಾಡಲಾಗಿತ್ತು. ದೆಹಲಿ ಪೊಲೀಸರು ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಾದ ಆಲಂ, ಬಿಲಾಲ್ ಮತ್ತು ಫೈಜಾನ್ ಅವರನ್ನು ಬಂಧಿಸಿದ್ದಾರೆ ಮತ್ತು ಹಳೆ ವೈಷಮ್ಯದಿಂದ ಮನೀಶ್‌ನನ್ನು ಕೊಂದಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications