ಮುಂದಿನ ಚಕ್ರ ಇಲ್ಲದ ಸೈಕಲ್‌ನಲ್ಲಿ ಕೇರಳದಿಂದ ನೇಪಾಳಕ್ಕೆ 11,000 ಕಿ.ಮೀ ಯುವಕನ ಸವಾರಿ: ಕಾರಣವೇನು?

ಯುವ ಪೀಳಿಗೆಯನ್ನು ಮಾದಕವ್ಯಸನ ಎನ್ನುವ ಮಹಾಮಾರಿಯಿಂದ ರಕ್ಷಿಸಲು ಕೇರಳದ ಯುವಕನೊಬ್ಬ ಸಾಹಸದ ಮಾರ್ಗವೊಂದನ್ನಾ ಆಯ್ಕೆ ಮಾಡಿಕೊಂಡಿದ್ದಾನೆ. ಮುಂಭಾಗದ ಚಕ್ರವೇ ಇಲ್ಲದ ಸೈಕಲ್ ಏರಿರುವ ಈತ, ಬರೋಬ್ಬರಿ 11,000 ಕಿಲೋಮೀಟರ್ ದೂರದ ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪುವ ಬೃಹತ್ ಗುರಿ ಹೊಂದಿದ್ದಾನೆ. ಆತನ ಈ ಸಾಹಸದ ಹಿಂದಿರುವ ಉದ್ದೇಶ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೇರಳ ಮೂಲದ ಸೈಕ್ಲಿಸ್ಟ್ ಆಗಿರುವ ಸನೀದ್ ಎಂಬ ಯುವಕನೇ ಈ ಅದ್ಭುತ ಸಾಹಸಕ್ಕೆ ಕೈಹಾಕಿರುವ ವ್ಯಕ್ತಿ. ಅವರು ತಮ್ಮ ಒಂಟಿ ಚಕ್ರದ ಸೈಕಲ್ ಯಾನದ ಮೂಲಕ ಕೇರಳದಿಂದ ಹೊರಟು ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಲಿದ್ದಾರೆ. ಇತ್ತೀಚೆಗಷ್ಟೇ ತಮಿಳುನಾಡಿನ ತಿರುಚ್ಚಿರಾಪಳ್ಳಿ ಮೂಲಕ ಅವರು ಸಾಗುತ್ತಿರುವಾಗ ಸ್ಥಳೀಯರು ಅವರನ್ನ ಗಮನಿಸಿದ್ದಾರೆ.

Kerala

ಸೈಕಲ್‌ನ ಮುಂಭಾಗದ ಚಕ್ರವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಕೇವಲ ಹಿಂದಿನ ಚಕ್ರದ ಸಹಾಯದಿಂದಲೇ ಅವರು ಬ್ಯಾಲೆನ್ಸ್ ಮಾಡಿಕೊಂಡು ಪ್ರಯಾಣ ಮುಂದುವರಿಸಿದ್ದಾರೆ. ಸೈಕಲ್‌ಗೆ ಕೇರಳ ಟು ನೇಪಾಳ ಎಂಬ ಬೋರ್ಡ್ ಅನ್ನ ಸಹ ಹಾಕಿಕೊಂಡಿದ್ದಾರೆ.

'ಡ್ರಗ್ಸ್ ಬೇಡ' ಎಂಬ ಜಾಗೃತಿ ಅಭಿಯಾನ

ಸಾಮಾನ್ಯವಾಗಿ ಎರಡು ಚಕ್ರವಿರುವ ಸೈಕಲ್‌ನಲ್ಲಿಯೇ ದೂರದ ಊರುಗಳಿಗೆ ಪ್ರಯಾಣಿಸುವುದು ಕಷ್ಟ. ಅಂಥದ್ದರಲ್ಲಿ ಮುಂಭಾಗದ ಚಕ್ರವಿಲ್ಲದೆ 11,000 ಕಿಲೋಮೀಟರ್ ಸಾಗುವುದು ಸಾಮಾನ್ಯ ಮಾತಲ್ಲ. ಈ ಹಾದಿಯನ್ನ ಸನೀದ್ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವೆಂದರೆ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು.

ಯುವಜನತೆ ಮಾದಕವ್ಯಸನಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುವ ಬದಲು, ವಿಭಿನ್ನವಾದ, ಒಳ್ಳೆಯ ಆಸಕ್ತಿಗಳನ್ನ ಬೆಳೆಸಿಕೊಳ್ಳಬೇಕು ಎಂಬುದು ಅವರ ಕಳಕಳಿ. "ನನ್ನ ಈ ಕಠಿಣ ಪ್ರಯಾಣದಿಂದ ಪ್ರೇರಣೆಗೊಂಡು ಒಬ್ಬನೇ ಒಬ್ಬ ವ್ಯಕ್ತಿ ಡ್ರಗ್ಸ್ ಚಟವನ್ನ ಬಿಟ್ಟರೆ, ಅದೇ ನನ್ನ ಪಾಲಿಗೆ ನಿಜವಾದ ವಿಶ್ವ ದಾಖಲೆ" ಎಂದು ಸನೀದ್ ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸನೀದ್ ಹಿನ್ನೆಲೆ

ಸನೀದ್ ಕೇವಲ ಸೈಕ್ಲಿಸ್ಟ್ ಮಾತ್ರವಲ್ಲ, ಅವರು ಸಿವಿಲ್ ಇಂಜಿನಿಯರಿಂಗ್ ಹಾಗೂ ಇಂಟೀರಿಯರ್ ಡಿಸೈನಿಂಗ್ ವ್ಯಾಸಂಗ ಮಾಡಿದ್ದಾರೆ. ಜೊತೆಗೆ ವೃತ್ತಿಪರ ಬೈಕ್ ಸ್ಟಂಟ್ ಪರ್ಫಾರ್ಮರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದು 12 ವರ್ಷಗಳಿಂದ ಸ್ಟಂಟ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಇವರು, ಪರೇಡ್ ಸ್ಟಂಟ್‌ಗಳಿಗಾಗಿ ಭಾರತೀಯ ಸೇನಾ ಸಿಬ್ಬಂದಿಗೂ ತರಬೇತಿ ನೀಡಿದ ಹೆಗ್ಗಳಿಕೆ ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಈ ರೀತಿ ಸೈಕಲ್ ಸವಾರಿ ಮಾಡುತ್ತಿಲ್ಲ. ಈ ಹಿಂದೆಯೂ ಮುಂಭಾಗದ ಚಕ್ರವಿಲ್ಲದ ಸೈಕಲ್ ಮೂಲಕ ಕೇರಳದಿಂದ ಕಾಶ್ಮೀರದವರೆಗೂ ಯಶಸ್ವಿಯಾಗಿ ಪ್ರಯಾಣಿಸಿದ್ದರು.

ಒಂಟಿ ಚಕ್ರದಲ್ಲಿ ಬ್ಯಾಲೆನ್ಸ್ ಮಾಡುವುದು ಅತ್ಯಂತ ತ್ರಾಸದಾಯಕ ಕೆಲಸ. ಅದರಲ್ಲೂ ಜೋರಾಗಿ ಗಾಳಿ ಬೀಸುವಾಗ ಸೈಕಲ್ ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ ಎಂದು ಸನೀದ್ ಹೇಳುತ್ತಾರೆ. ಸುರಕ್ಷತೆಯ ದೃಷ್ಟಿಯಿಂದ ಅವರು ಹೆಲ್ಮೆಟ್, ಗ್ಲೌಸ್ ಸೇರಿದಂತೆ ಅಗತ್ಯವಾದ ಎಲ್ಲಾ ಸೇಫ್ಟಿ ಗೇರ್‌ಗಳನ್ನ ಧರಿಸಿಯೇ ಪ್ರಯಾಣಿಸುತ್ತಾರೆ. ಹವಾಮಾನ ಮತ್ತು ರಸ್ತೆಯ ಪರಿಸ್ಥಿತಿಗೆ ಅನುಗುಣವಾಗಿ ಪ್ರತಿದಿನ 50 ರಿಂದ 60 ಕಿಲೋಮೀಟರ್ ಕ್ರಮಿಸುತ್ತಾರೆ. ತಮ್ಮ ಹಿಂದಿನ ಯಾನಗಳಲ್ಲಿ ಒಂದೇ ದಿನದಲ್ಲಿ ಗರಿಷ್ಠ 150 ಕಿಲೋಮೀಟರ್ ವರೆಗೂ ಸವಾರಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+