ತನ್ನೂರಿಗೆ ವಂದೇ ಭಾರತ್ ಸ್ಟಾಪ್ ಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋದ ವ್ಯಕ್ತಿ: ಆಗಿದ್ದೇನು?

ನವದೆಹಲಿ, ಜುಲೈ. 17: ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿನ ನಿಲುಗಡೆಗೆ ಅನುಮತಿ ನೀಡುವಂತೆ ದಕ್ಷಿಣ ರೈಲ್ವೆಗೆ ನಿರ್ದೇಶನ ನೀಡುವಂತೆ ಕೇರಳದ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಈ ಅಸಾಮಾನ್ಯ ಮನವಿಯಿಂದ ಸಿಟ್ಟಾದ ಸುಪ್ರೀಂ ಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಅರ್ಜಿಯಿಂದ ಕೋಪಗೊಂಡ ನ್ಯಾಯಮೂರ್ತಿಗಳು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದ್ದು, ಅವರು ಸುಪ್ರೀಂ ಕೋರ್ಟ್ ಅನ್ನು ಅಂಚೆ ಕಚೇರಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರು 39 ವರ್ಷದ ಕೇರಳ ವಕೀಲರೊಬ್ಬರ ಅರ್ಜಿಯ ವಿಚಾರಣೆ ನಡೆಸುತ್ತಿದ್ದರು.

Vande Bharat Stop in Tirur

ವಕೀಲರು ಅರರ್ಜಿಯಲ್ಲಿ ತಮ್ಮ ತವರು ಜಿಲ್ಲೆಯ ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆಯನ್ನು ನಿಗದಿಪಡಿಸಲು ನ್ಯಾಯಾಲಯಕ್ಕೆ ಆದೇಶ ನೀಡಬೇಕು ಎಂದು ಕೋರಿದ್ದರು. ಇದಕ್ಕೆ "ವಂದೇ ಭಾರತ್ ರೈಲು ಎಲ್ಲಿ ನಿಲ್ಲುತ್ತದೆ ಎಂಬುದನ್ನು ನಾವು ನಿರ್ಧರಿಸಬೇಕೆಂದು ನೀವು ಬಯಸುತ್ತೀರಾ..? ನಾವು ಮುಂದೆ ದೆಹಲಿ - ಮುಂಬೈ ರಾಜಧಾನಿ ನಿಲ್ದಾಣವನ್ನು ನಿಗದಿಪಡಿಸಬೇಕೇ..? ಇದು ನೀತಿ ವಿಷಯವಾಗಿದೆ, ಅಧಿಕಾರಿಗಳ ಬಳಿಗೆ ಹೋಗಿ"ಎಂದು ಸಿಜೆಐ ಅರ್ಜಿದಾರ ಪಿಟಿ ಶೀಜಿಶ್ ಅವರಿಗೆ ಛೀಮಾರಿ ಹಾಕಿದ್ದಾರೆ.

ಆದರೆ, ಈ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕನಿಷ್ಠ ಸರ್ಕಾರವನ್ನು ಕೇಳಬೇಕು ಎಂದು ಅರ್ಜಿದಾರರು ವಾದಿಸಿದರು, ಆದರೆ ಸಿಜೆಐ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಹೊಸ 'ವಂದೇ ಭಾರತ'ಕ್ಕೆ ತಿರೂರಿನಲ್ಲಿ ನಿಲುಗಡೆ ನೀಡುವ ಪ್ರಸ್ತಾವನೆ ಇದ್ದರೂ ವಿನಾಕಾರಣ ನಿಲುಗಡೆ ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಮಲಪ್ಪುರಂ ಜಿಲ್ಲೆ ಜನನಿಬಿಡ ಪ್ರದೇಶವಾಗಿದ್ದು, ಅನೇಕ ಜನರು ತಮ್ಮ ಪ್ರಯಾಣದ ಉದ್ದೇಶಗಳಿಗಾಗಿ ರೈಲು ಸೇವೆಗಳನ್ನು ಅವಲಂಬಿಸಿದ್ದರೂ, ಜಿಲ್ಲೆಗೆ ನಿಲುಗಡೆಯನ್ನು ನಿಗದಿಪಡಿಸಲಾಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

Vande Bharat Stop in Tirur

ಮಲಪ್ಪುರಂ ಜಿಲ್ಲೆಯ ಪರವಾಗಿ ತಿರೂರ್‌ಗೆ ನಿಲುಗಡೆ ನೀಡಲಾಯಿತು. ಆದರೆ ಭಾರತೀಯ ರೈಲ್ವೇಯು ಆ ನಿಲ್ದಾಣವನ್ನು ಬಿಟ್ಟಿದೆ. ಬದಲಿಗೆ ರಾಜಕೀಯ ಕಾರಣಗಳಿಗಾಗಿ ಪಾಲಕ್ಕಾಡ್ ಜಿಲ್ಲೆಯ ಮತ್ತೊಂದು ರೈಲು ನಿಲ್ದಾಣ ಶೋರ್ನೂರ್ ಅನ್ನು ನಿಗದಿಪಡಿಸಲಾಗಿದೆ. ಇದು ತಿರುರ್‌ನಿಂದ ಸರಿಸುಮಾರು 56 ಕಿಮೀ ದೂರದಲ್ಲಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ತಿರೂರ್ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡದಿರುವುದು ಮಲಪ್ಪುರಂ ಜನರಿಗೆ ಮಾಡಿದ ಅನ್ಯಾಯವಾಗಿದೆ. ಆದ್ದರಿಂದ, ತಮ್ಮ ವಿನಂತಿ ಮತ್ತು ಬೇಡಿಕೆಗಳನ್ನು ನಿರ್ಲಕ್ಷಿಸುವುದು ದೊಡ್ಡ ಪೂರ್ವಾಗ್ರಹಕ್ಕೆ ಕಾರಣವಾಗುತ್ತದೆ ಎಂದು ಅವರು ವಾದಿಸಿದ್ದಾರೆ. ಆದರೆ, ನ್ಯಾಯಾಲಯವು, "ರೈಲಿಗೆ ನೀಡಬೇಕಾದ ನಿಲುಗಡೆಗಳು ರೈಲ್ವೇ ನಿರ್ಧರಿಸಬೇಕಾದ ವಿಷಯವಾಗಿದೆ. ನಿರ್ದಿಷ್ಟ ರೈಲು ನಿರ್ದಿಷ್ಟ ನಿಲ್ದಾಣದಲ್ಲಿ ನಿಲ್ಲಬೇಕು ಎಂದು ಒತ್ತಾಯಿಸಲು ಯಾವುದೇ ವ್ಯಕ್ತಿಗೆ ಪಟ್ಟಭದ್ರ ಹಕ್ಕಿಲ್ಲ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪ್ರತಿ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿ ಅಥವಾ ಸಾರ್ವಜನಿಕ ಉತ್ಸಾಹವುಳ್ಳ ವ್ಯಕ್ತಿಗಳು ತಮ್ಮ ಆಯ್ಕೆಯ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಒತ್ತಾಯಿಸಲು ಪ್ರಾರಂಭಿಸಿದರೆ, ಹೈಸ್ಪೀಡ್ ರೈಲುಗಳನ್ನು ಸ್ಥಾಪಿಸುವ ಉದ್ದೇಶವೇ ಕಳೆದುಹೋಗುತ್ತದೆ. ವಿಶೇಷವಾಗಿ ವಂದೇ ಭಾರತ್ ರೈಲಿನಂತಹ ಹೈಸ್ಪೀಡ್ ಎಕ್ಸ್‌ಪ್ರೆಸ್ ರೈಲುಗಳಿಗೆ ರೈಲ್ವೆ ನಿಲುಗಡೆಗಳನ್ನು ವೈಯಕ್ತಿಕ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಆಧಾರದ ಮೇಲೆ ನೀಡಲಾಗುವುದಿಲ್ಲ. ಸಾರ್ವಜನಿಕರ ಬೇಡಿಕೆಯ ಮೇರೆಗೆ ನಿಲುಗಡೆಗಳನ್ನು ಒದಗಿಸಿದರೆ, ಎಕ್ಸ್‌ಪ್ರೆಸ್ ರೈಲು ಎಂಬ ಪದವು ತಪ್ಪು ನಾಮಕರಣವಾಗುತ್ತದೆ" ನ್ಯಾಯಾಲಯ ತಿಳಿಸಿದೆ.

ರೈಲ್ವೇ ರೈಲುಗಳಿಗೆ ನಿಲುಗಡೆ ನೀಡುವ ವಿಷಯದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತಿಲ್ಲ ಮತ್ತು ಅದು ಸಂಪೂರ್ಣವಾಗಿ ರೈಲ್ವೆಯ ವಿವೇಚನೆ ಮತ್ತು ಅಧಿಕಾರ ವ್ಯಾಪ್ತಿಯಲ್ಲಿದೆ ಎಂಬ ಅಭಿಪ್ರಾಯದ ಮೇಲೆ ಎರ್ನಾಕುಲಂನಲ್ಲಿರುವ ಕೇರಳದ ಹೈಕೋರ್ಟ್ ಈ ಹಿಂದೆ ಅರ್ಜಿಯನ್ನು ವಜಾಗೊಳಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+