Get Updates
Get notified of breaking news, exclusive insights, and must-see stories!

Kerala Kumbh Mela: ಪುಟ್ಟ ಬಾಲಕಿಗೆ ನಮಸ್ಕರಿಸಿದ ಹಿರಿಯ ಸನ್ಯಾಸಿ; ಇದುವೇ ನಿಜವಾದ ಸಂಸ್ಕೃತಿ ಎಂದ ನೆಟ್ಟಿಗರು

ಕೇರಳ: ಧರ್ಮ ಮತ್ತು ಸಂಸ್ಕೃತಿಯ ಸಮ್ಮಿಲನಕ್ಕೆ ಸಾಕ್ಷಿಯಾಗಿರುವ ಕೇರಳದ ಕುಂಭಮೇಳದಲ್ಲಿ (Mahamaham) ನಡೆದ ಘಟನೆಯೊಂದು ನೋಡುಗರ ಕಣ್ಮನ ಸೆಳೆದಿದೆ. ಸಾಮಾನ್ಯವಾಗಿ ಭಕ್ತರು ಸನ್ಯಾಸಿಗಳಿಂದ ಆಶೀರ್ವಾದ ಪಡೆಯುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಹಿರಿಯ ಸನ್ಯಾಸಿ ಪುಟ್ಟ ಬಾಲಕಿಯೊಬ್ಬಳಿಗೆ ನಮಸ್ಕಾರ ಮಾಡಿ ಅವಳಿಂದ ಆಶೀರ್ವಾದ ಪಡೆದು, ಹೆಣ್ಣುಮಗುವಿಗೆ ನೀಡಬೇಕಾದ ಗೌರವವನ್ನು ಎತ್ತಿ ಹಿಡಿದಿದ್ದಾರೆ.

ವೈರಲ್ ಆದ ಭಾವನಾತ್ಮಕ ಕ್ಷಣ

ಕೇರಳದ ಮಲಪ್ಪುರಂ ಜಿಲ್ಲೆಯ ತಿರುನಾವಯದಲ್ಲಿರುವ ಭರತಪುಳ ನದಿ ತೀರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಈ ದೃಶ್ಯ ಕಂಡುಬಂದಿದೆ. ಕೇಸರಿ ವಸ್ತ್ರಧಾರಿ ಸಾಧುವೊಬ್ಬರು ಯಾತ್ರಾರ್ಥಿಗಳ ನಡುವೆ ನಡೆದು ಹೋಗುತ್ತಿದ್ದ ಪುಟ್ಟ ಬಾಲಕಿಯೊಬ್ಬಳಿಗೆ ನಮಸ್ಕಾರ ಮಾಡಿ ಅವಳಿಂದ ಆಶೀರ್ವಾದ ಪಡೆದು, ಅವಳಿಗೆ ಹಣ ನೀಡಿರುವ ಘಟನೆ ನಡೆದಿದೆ. ಆಕೆಯ ಮುಗ್ಧತೆಯಲ್ಲಿ ಸಾಕ್ಷಾತ್ ದೇವಿಯನ್ನು ಕಂಡರೋ ಏನೋ, ತಕ್ಷಣವೇ ಆಕೆಗೆ ಸಾಧು ನಮಸ್ಕರಿಸಿದರು. ಈ ಘಟನೆ ನೆರೆದಿದ್ದ ಭಕ್ತರನ್ನೇಲ್ಲ ಆಶ್ಚರ್ಯಚಕಿತರನ್ನಾಗಿಸಿತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kerala Kumbh Mela

ಹೆಣ್ಣುಮಗುವೇ ದೇವತೆಯ ಸ್ವರೂಪ

ಹಿಂದೂ ಧರ್ಮದಲ್ಲಿ ಹೆಣ್ಣುಮಕ್ಕಳನ್ನು 'ಕನ್ಯಾ' ಅಥವಾ 'ಶಕ್ತಿ'ಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಬಾಲಕಿಯರ ಪಾದ ಪೂಜೆ ಮಾಡುವ ಸಂಪ್ರದಾಯವಿದೆ. ಆದರೆ, ಸಾರ್ವಜನಿಕವಾಗಿ, ಅದೂ ಕುಂಭಮೇಳದಂತಹ ಬೃಹತ್ ಜನಸ್ತೋಮದ ನಡುವೆ, ಒಬ್ಬ ತ್ಯಾಗಿ ಸನ್ಯಾಸಿ ಮಗುವಿಗೆ ತಲೆಬಾಗಿ ಗೌರವ ಸೂಚಿಸಿದ್ದು ಸನಾತನ ಧರ್ಮದ ಶ್ರೇಷ್ಠ ಮೌಲ್ಯಗಳನ್ನು ಸಾರುವಂತಿದೆ. "ದೈವತ್ವವು ಕೇವಲ ವಿಗ್ರಹಗಳಲ್ಲಿ ಮಾತ್ರವಲ್ಲ, ಮಗುವಿನ ನಗುವಿನಲ್ಲೂ ಇದೆ," ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

271 ವರ್ಷಗಳ ನಂತರ ಮರುಕಳಿಸಿದ ವೈಭವ

ದಕ್ಷಿಣದ ಕುಂಭಮೇಳ ಎಂದೇ ಕರೆಯಲ್ಪಡುವ ಈ 'ಮಹಾಮಘಂ ಮಹೋತ್ಸವ'ವು ಸುಮಾರು 271 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಆಯೋಜನೆಗೊಂಡಿದೆ. ಉತ್ತರ ಭಾರತದ ಪ್ರಯಾಗ್ರಾಜ್ ಕುಂಭಮೇಳದ ಮಾದರಿಯಲ್ಲೇ ಜುನಾ ಅಖಾಡದ ಸಾಧು-ಸಂತರು ಇದರಲ್ಲಿ ಪಾಲ್ಗೊಂಡಿದ್ದಾರೆ. ಭರತಪುಳ ನದಿ ತೀರದಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿ ಧನ್ಯತಾ ಭಾವ ಮೆರೆದಿದ್ದಾರೆ.

ಭಕ್ತರ ಭಕ್ತಿ ಪರಾಕಾಷ್ಠೆಯ ನಡುವೆ, ಸನ್ಯಾಸಿಯೊಬ್ಬರು ಬಾಲಕಿಗೆ ನೀಡಿದ ಈ ಗೌರವವು ಮೇಳದ ಪ್ರಮುಖ ಆಕರ್ಷಣೆಯಾಗಿ ಉಳಿಯಿತು. ಇದು ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಿಗೆ ಹೆಣ್ಣುಮಕ್ಕಳನ್ನು ಗೌರವಿಸುವ ಭಾರತೀಯ ಪರಂಪರೆಯ ಜೀವಂತ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+