ಕೇರಳ ನರಬಲಿ ಹಿಂದಿದ್ದು ಶ್ರೀದೇವಿ ಅಲ್ಲ 'ಮೂದೇವಿ': ಆರೋಪಿ ಹೀಗೆ ಮಾಡೋದಾ?
ತಿರುವನಂತಪುರಂ ಅಕ್ಟೋಬರ್ 14: ಕೇರಳ ನರಬಲಿ ಪ್ರಕರಣ ವಿಚಾರಣೆ ಬಳಿಕ ಹಲವಾರು ವಿಚಾರಗಳು ಬಹಿರಂಗಗೊಂಡಿದ್ದು ಹಲವು ಟ್ವಿಸ್ಟ್ ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಮಾಸ್ಟರ್ ಮೈಂಡ್ ಮೊಹಮ್ಮದ್ ಶಫಿ ವಿಚಾರಣೆ ಬಳಿಕ ಹಲವಾರು ವಿಚಾರಗಳು ಬೆಳಕಿಗೆ ಬಂದಿವೆ. ಅಷ್ಟಕ್ಕೂ ನರಬಲಿ ಪ್ರಕರಣದಲ್ಲಿ ಶಫಿ ಆಡಿದ ಆಟ ಒಂದಲ್ಲಾ ಎರಡಲ್ಲ. ವಿಚಾರಣೆಯೂದ್ದಕ್ಕೂ ಪೊಲೀಸರೇ ಈತನ ಕಥೆ ಕೇಳಿ ದಂಗಾಗಿದ್ದಾರೆ. ಬಗೆದಷ್ಟು ಹೊಸ ವಿಚಾರಗಳು ಹೊರ ಬರುತ್ತಿವೆ. ಕೇರಳ ನರಬಲಿ ಪ್ರಕರಣದಲ್ಲಿ ಮೂವರು ಆರೋಪಿಗಳಲ್ಲಿ ಪ್ರಮುಖ ಆರೋಪಿ ಈ ಮೊಹಮ್ಮದ್ ಶಫಿ. ಇನ್ನಿಬ್ಬರು ಹೇರ್‌ಕಟ್ಟಿಂಗ್ ಮಾಡುತ್ತಿದ್ದ ಭಗವಲ್ ಸಿಂಗ್ ಮತ್ತು ಅವರ ಪತ್ನಿ ಲೈಲಾ.
ಈ ಮೊಹಮ್ಮದ್ ಶಫಿಗೂ ದಂಪತಿಗಳಿಗೂ ಪರಿಚಯವಾಗಿದ್ದು ಹೇಗೆ ಅನ್ನೋದೇ ಒಂದು ದೊಡ್ಡ ಟ್ವಿಸ್ಟ್. ಅಂದಹಾಗೆ ಶಫಿ ಹಾಗೂ ದಂಪತಿಗೆ ಪರಿಚಯವೇ ಇರಲಿಲ್ಲ. ಆರೋಪಿ ಶಫಿ ಸಾಮಾಜಿಕ ಜಾಲತಾಣದ ಮೂಲಕ ಭಗವಲ್ ಸಿಂಗ್ ಅವರಿಗೆ ಪರಿಚಯವಾಗಿದ್ದ. ಪರಿಚಯವಾಗಿದ್ದು ಶಫಿ ಅಂತೇಳಿ ಅಲ್ಲ. ಬದಲಿಗೆ ತಾನು ಶ್ರೀದೇವಿ ಎಂದು ಹೇಳಿ.

ಕೇರಳ ನರಬಲಿ ಹಿಂದಿದ್ದು ಶ್ರೀದೇವಿ ಅಲ್ಲ 'ಮೂದೇವಿ'!
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯಂತೆ ಪೋಸ್ ನೀಡಿ ಆರೋಪಿ ಭಗವಲ್ ಸಿಂಗ್ ಜೊತೆ ಸ್ನೇಹ ಬೆಳೆಸಿದ್ದ ಆರೋಪಿ ಶಪಿ. ಶಫಿ ಅವರ ಖಾತೆಯನ್ನು "ಶ್ರೀದೇವಿ" ಎಂದು ಹೆಸರಿಸಿಕೊಂಡಿದ್ದ. ತನ್ನ ಡಿಪಿಗೆ ಹೂವುಗಳ ಫೋಟೋಗಳನ್ನು ಹಾಕಿಕೊಂಡಿದ್ದ. ಇದನ್ನು ನೋಡಿ ಸಿಂಗ್ ಅದೇನಾಯ್ತೋ ಏನೋ ಶ್ರೀದೇವಿ ಹೆಸರಿನ ಖಾತೆಗೆ ಪದೇ ಪದೇ ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ಮಸೇಜ್‌ನಲ್ಲಿ ಇಬ್ಬರ ಪರಿಚಯವಾಗಿದೆ. ಇಬ್ಬರು ಭೇಟಿಯಾಗಲು ನಿರ್ಧರಿಸಿದ್ದಾರೆ. ಹೆಣ್ಣು ಅಂದುಕೊಂಡು ಮೆಸೇಜ್ ಮಾಡಲು ಆರಂಭಿಸಿದ್ದ ಸಿಂಗ್ ಗೆ ಶಫಿ ಮಲ್ಮಲ್ ಟೋಪಿ ಹಾಕಿದ್ದ. ಭೇಟಿ ವೇಳೆ ಪವಿತ್ರ ವ್ಯಕ್ತಿಯಂತೆ ವೇಷ ಧರಿಸಿ ದಂಪತಿಗಳನ್ನು ದುರದೃಷ್ಟದಿಂದ ಮುಕ್ತಗೊಳಿಸಲು ಮತ್ತು ಆರ್ಥಿಕ ಸಮೃದ್ಧಿಗೆ ಪೂಜೆ ಮತ್ತು ಆಚರಣೆಗಳನ್ನು ನಡೆಸಲು ಸೂಚಿಸಿದ್ದಾನೆ.

ಶಫಿ ಹೇಳಿದ ಎಲ್ಲಾ ಕೆಲಸವನ್ನು ಮಾಡಲು ಅಸ್ತು ಎಂದಿದ್ದ ದಂಪತಿ
ಆರೋಪಿ ಸಿಂಗ್ ಅನ್ನ ಯಾಮಾರಿಸಿದ್ದ ಶಫಿ ಒಂದೇ ಭೇಟಿಗೆ ತನ್ನ ಮೇಲೆ ನಂಬಿಕೆ ಹುಟ್ಟಿಸಿಕೊಂಡಿದ್ದ. ತಾನು ಹೇಳಿದಂತೆ ನಡೆದುಕೊಂಡರೆ ಜೀವನದಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ಸಿಂಗ್ ಮುಂದೆ ನೌಟಂಕಿಯಾಟವಾಡಿದ್ದ. ಇದನ್ನು ನಂಬಿದ್ದ ಸಿಂಗ್ ತನ್ನ ಪತ್ನಿಯೊಂದಿಗೆ ಸಮಾಲೋಚನೆ ನಡೆಸಿದ್ದಾನೆ. ಸಿಂಗ್ ದಂಪತಿ ಅದೆಷ್ಟು ಶಫಿಯನ್ನು ನಂಬಿದ್ದರು ಅಂದರೆ ಶಫಿ ಹೇಳಿದ ಎಲ್ಲಾ ಕೆಲಸವನ್ನು ಮಾಡಲು ತಯಾರಿದ್ದರು.
ಸಿಂಗ್ ಹಾಗೂ ಪತ್ನಿ ಲೈಲಾ ತಮ್ಮ ಜೀವನದಲ್ಲಿ ಆರ್ಥಿಕ ಮಟ್ಟ ಸುಧಾರಣೆಯಾಗಲು ಶಫಿ ಕೊಟ್ಟ ಆ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡು ಅದನ್ನು ಮಾಡಲು ನಿರ್ಧರಿಸಿದ್ದಾರೆ. ಅದರ ಪರಿಣಾಮವೇ ಈ ನರಬಲಿ. ಪ್ರಕರಣದ ಮಾಸ್ಟರ್ ಮೈಂಡ್ ಶಫಿ ದಂಪತಿಗೆ ಮಾನವ ಬಲಿ ನೀಡಲು ಸೂಚನೆ ನೀಡಿದ್ದ. ಅದಕ್ಕೆ ಬೇಕಾದ ತಯಾರಿ ಕೂಡ ತಾನೇ ಮಾಡಿಕೊಡುವುದಾಗಿ ಹೇಳಿದ್ದ. ಹೀಗಾಗಿ ದಂಪತಿ ಹಿಂದು ಮುಂದು ಯೋಚನೆ ಮಾಡದೇ ಬಲಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಆರಂಭದಲ್ಲಿ ರೋಸ್ಲಿ ಎಂಬ ಮಹಿಳೆ ನಾಪತ್ತೆ
ಇದಕ್ಕಾಗಿ ಜೂನ್ 8 ರಂದು ರಾತ್ರಿ ಕಾಲಡಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ರೋಸ್ಲಿ (49) ಅವರನ್ನು ನಂಬಿಸಿ ಯಾಮಾರಿಸಿ ಅಪಹರಣ ಮಾಡಿದ್ದ ಈ ಶಫಿ. ಮರುದಿನವೇ ದಂಪತಿಗಳೊಂದಿಗೆ ಆಕೆಯ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಲಾಗಿದೆ. ಬಳಿಕ ಆಕೆಯ ರಕ್ತವನ್ನು ಮನೆಗೆ ಚಿಮ್ಮಿಸಲಾಗಿದೆ. ನಾಲ್ಕು ದಿಕ್ಕುಗಳಲ್ಲಿ ಆಕೆಯ ದೇಹದ ಭಾಗಗಳನ್ನು ಮಾಟಮಂತ್ರದ ಮೂಲಕ ಹೂಳಲಾಗಿದೆ.
ಆದರೆ ದಂಪತಿಗಳ ಆರ್ಥಿಕ ಸ್ಥಿತಿ ಏನೂ ಶಫಿ ಹೇಳಿದಂತೆ ಬದಲಾಗಲಿಲ್ಲ. ಪುನ: ದಂಪತಿ ಶಫಿಯನ್ನು ಸಂಪರ್ಕಿಸಿದ್ದಾರೆ. ಆದರೆ ಪಾಪಿ ಶಫಿ ಮತ್ತೊಂದು ಬಲಿ ನೀಡಲು ದಂಪತಿಗೆ ಸೂಚಿಸಿದ್ದಾನೆ. ಶಫಿ ಮಾತು ಕೇಳಿ ದಂಪತಿ ಅದನ್ನೂ ಮಾಡಿದ್ದಾರೆ. ಸೆಪ್ಟೆಂಬರ್ 26 ರಂದು ಪದ್ಮಾ ಎಂಬ ಮಹಿಳೆಯನ್ನು ಅಪಹಾರಿಸಿ ದಂಪತಿಗಳು ಆಕೆಯ ಬಲಿಯನ್ನೂ ಕೊಟ್ಟಿದ್ದಾರೆ. ಇದೆಷ್ಟು ಕ್ರೂರವಾಗಿತ್ತು ಅಂದರೆ ಪದ್ಮಾ ಅವರ ದೇಹವನ್ನು 56 ತುಂಡುಗಳಾಗಿ ಕತ್ತರಿಸಲಾಗಿದೆ. ಆಕೆಯ ದೇಹವನ್ನು ಗುರುತಿಸಲು ಮಗನಿಗೆ ಸಾಧ್ಯವಾಗಲಿಲ್ಲ.

ಪದ್ಮಾ ಎಂಬ ಮಹಿಳೆ ನಾಪತ್ತೆ
ಪದ್ಮಾ ಎಂಬ ಮಹಿಳೆಯ ದೇಹ ಅತ್ಯಂತ ಕ್ರೂರವಾಗಿ ಕೊಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪದ್ಮಾ ಬಳಿ ಬಳಿಕ ಆಕೆಯ ದೇಹದ ಕೆಲ ಭಾಗಗಳನ್ನು ಸೇವಿಸುವಂತೆಯೂ ಶಫಿ ದಂಪತಿಗೆ ಸೂಚಿಸಿದ್ದನು. ಆತನ ಸೂಚನೆಯಂತೆ ದಂಪತಿ ಪದ್ಮಾಳ ದೇಹದ ಕೆಲ ಮಾಂಸದ ತುಂಡುಗಳನ್ನು ಬೇಯಿಸಿ ತಿಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೆ ಆಕೆಯ ದೇದ ರಕ್ತವನ್ನು ಮನೆಯಲ್ಲಿ ಚಿಮ್ಮಿಸಿ ಮಾಟಮಂತ್ರ ಮಾಡಿರುವುದು ಬಹಿರಂಗಗಗೊಂಡಿದೆ. ಸದ್ಯ ಆರೋಪಿ ಶಫಿ, ಸಿಂಗ್ ಹಾಗೂ ಲೈಲಾ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಸದ್ಯ ಇವರ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದು ಹಲವಾರು ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications