• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಸುದ್ದಿ ವಾಹಿನಿಗಳಿಗೆ ನಿಷೇಧ ವಿಧಿಸಿದ ಕೇರಳ ಗವರ್ನರ್‌, ಏನು ಕಾರಣ?

|
Google Oneindia Kannada News

ತಿರುವನಂತಪುರಂ, ನವೆಂಬರ್‌ 7: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ಕೊಚ್ಚಿಯಲ್ಲಿ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಎರಡು ಮಲಯಾಳಂ ಚಾನೆಲ್‌ಗಳಿಗೆ ನೀವು ಬರಬೇಡಿ ಹೊರನಡೆಯಿರಿ ಎಂದು ತಿಳಿಸಿದರು.

ಕೇರಳದ ಕೈರಾಲಿ ನ್ಯೂಸ್ ಮತ್ತು ಮೀಡಿಯಾ ಒನ್ ಚಾನೆಲ್‌ಗಳ ವರದಿಗಾರರನ್ನು ಸ್ಥಳದಿಂದ ತೊರೆಯುವಂತೆ ಹೇಳಿದ ರಾಜ್ಯಪಾಲರು, ಈ ಎರಡು ಚಾನೆಲ್‌ಗಳನ್ನು ನಾನು ಇನ್ನು ಮುಂದೆ ಹೇಳಿಕೆ ನೀಡುವುದಿಲ್ಲ, ಅವರು ರಾಜಕೀಯ ವ್ಯಕ್ತಿಗಳ ಪ್ರತಿನಿಧಿಗಳು ಎಂದು ಆರೋಪಿಸಿದರು.

ಎಪಿಜೆ ಅಬ್ದುಲ್ ಕಲಾಂ ವಿವಿಗೆ ಉಪಕುಲಪತಿ ನೇಮಿಸಿದ ಕೇರಳ ಗವರ್ನರ್‌ಎಪಿಜೆ ಅಬ್ದುಲ್ ಕಲಾಂ ವಿವಿಗೆ ಉಪಕುಲಪತಿ ನೇಮಿಸಿದ ಕೇರಳ ಗವರ್ನರ್‌

ಕೈರಾಲಿ ನ್ಯೂಸ್ ಮತ್ತು ಮೀಡಿಯಾ ಒನ್ ಚಾನೆಲ್‌ಗಳ ವರದಿಗಾರರನ್ನು ಹೊರಗೆ ಹೋಗುವಂತೆ ಸೂಚಿಸಿದ ಅವರು, ನಾನು ಮಾಧ್ಯಮವನ್ನು ಬಹಳ ಮುಖ್ಯವೆಂದು ಪರಿಗಣಿಸಿದ್ದೇನೆ. ನಾನು ಯಾವಾಗಲೂ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತೇನೆ. ಆದರೆ ಈಗ ಮಾಧ್ಯಮದ ಮುಖವಾಡ ಹೊಂದಿರುವವರಿಗೆ ನನ್ನ ಮನವೊಲಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅವರು ಮಾಧ್ಯಮವಲ್ಲ, ಅವರು ಮಾಧ್ಯಮವೆಂದು ವೇಷ ಹಾಕುತ್ತಿದ್ದಾರೆ. ಆದರೆ ಮೂಲತಃ ರಾಜಕೀಯ ವ್ಯಕ್ತಿಗಳ ಮಿತ್ರರು ಎಂದು ಹೇಳಿದರು.

ಇಲ್ಲಿ ನಿಜವಾಗಿಯೂ ಪಕ್ಷದ ಸದಸ್ಯರು ಇದ್ದಾರೆ. ಹಾಗಾಗಿ ಈ ವಾಹಿನಿಗಳ ಯಾರಾದರೂ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದರೆ ದಯವಿಟ್ಟು ಬಿಡಿ, ಕೈರಲಿ ಮತ್ತು ಮೀಡಿಯಾ ಒನ್ ಪ್ರತಿನಿಧಿಗಳು ಇದ್ದರೆ ನಾನು ಹೊರನಡೆಯುತ್ತೇನೆ. ಕೈರಲಿ ಮತ್ತು ಮೀಡಿಯಾ ಒನ್ ಇದ್ದರೆ ನಾನು ಮಾತನಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದೆ ಎಂದು ಹೇಳಿದರು.

ಕೇರಳ ಹಣಕಾಸು ಸಚಿವರನ್ನು ವಜಾಗೊಳಿಸುವಂತೆ ಸಿಎಂಗೆ ರಾಜ್ಯಪಾಲರ ಪತ್ರಕೇರಳ ಹಣಕಾಸು ಸಚಿವರನ್ನು ವಜಾಗೊಳಿಸುವಂತೆ ಸಿಎಂಗೆ ರಾಜ್ಯಪಾಲರ ಪತ್ರ

ರಾಜ್ಯಪಾಲರ ಅವರ ನಡವಳಿಕೆಯನ್ನು ಆಡಳಿತಾರೂಢ ಸಿಪಿಐ(ಎಂ) ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಫ್ಯಾಸಿಸ್ಟ್ ನೀತಿ ಎಂದು ಬಣ್ಣಿಸಿದರೆ, ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ಅವರ ತಪ್ಪನ್ನು ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯಪಾಲರ ಪ್ರಜಾಪ್ರಭುತ್ವ ವಿರೋಧಿ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿತು.

ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಅವರು, ಪತ್ರಿಕಾ ವಿಭಾಗವನ್ನು ನಿರ್ಬಂಧಿಸುವ ಮೂಲಕ ಗವರ್ನರ್‌ ಖಾನ್ ಜನರಿಗೆ ಮಾಹಿತಿಯ ಪ್ರಸಾರವನ್ನು ತಡೆಯುತ್ತಿದ್ದಾರೆ. ಇದು ಸ್ವೀಕಾರಾರ್ಹವಲ್ಲ, ಪ್ರಜಾಪ್ರಭುತ್ವ ವಿರೋಧಿ ಮತ್ತು ನ್ಯಾಯಸಮ್ಮತವಲ್ಲ. ಮಾಧ್ಯಮವನ್ನು ಹೊರಗಿಡುವುದು ಫ್ಯಾಸಿಸ್ಟ್ ಆಡಳಿತದ ಶೈಲಿಯಾಗಿದ್ದು, ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಮಾತ್ರವಲ್ಲ ಪತ್ರಿಕಾ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Kerala Governor bans 2 channels for his news conference

ಇದಕ್ಕೂ ಮೊದಲು ಅಕ್ಟೋಬರ್ 24 ರಂದು ರಾಜಭವನವು ಈ ಎರಡೂ ಚಾನೆಲ್‌ಗಳು ಸೇರಿದಂತೆ ನಾಲ್ಕು ಮಲಯಾಳಂ ಚಾನೆಲ್‌ಗಳನ್ನು ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿತು. ಈ ಹಿಂದೆಯೂ ರಾಜ್ಯಪಾಲರು ಇದೇ ನಿಲುವು ತಳೆದಿದ್ದರು. ಅವರನ್ನು ಟೀಕಿಸಿದವರನ್ನು ರಾಜಕೀಯ ಕಾರ್ಯಕರ್ತರು ಎಂದು ಕರೆಯುತ್ತಿದ್ದರು. ಇದು ಪ್ರಜಾಪ್ರಭುತ್ವ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಹೇಳಿದ್ದಾರೆ.

ಕೈರಲಿ ನ್ಯೂಸ್ ಆಡಳಿತಾರೂಢ ಸಿಪಿಐ (ಎಂ) ವಾಹಿನಿಯಾಗಿದೆ. ಅಲ್ಲದೆ, ಮಲಯಾಳಂನ ಉಪಗ್ರಹ ಚಾನೆಲ್ ಮೀಡಿಯಾ ಒನ್ ಭದ್ರತಾ ಕ್ಲಿಯರೆನ್ಸ್ ಸಮಸ್ಯೆಗಳ ಮೇಲೆ ಕೇಂದ್ರ ಸರ್ಕಾರದಿಂದ ನಿಷೇಧವನ್ನು ಎದುರಿಸುತ್ತಿದೆ. ನಿಷೇಧದ ವಿರುದ್ಧ ಮೀಡಿಯಾ ಒನ್ ಸಲ್ಲಿಸಿದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ವಾರ ಕಾಯ್ದಿರಿಸಿತ್ತು. ಮಾರ್ಚ್‌ನಲ್ಲಿ ಮಧ್ಯಂತರ ಆದೇಶದಲ್ಲಿ, ನ್ಯಾಯಾಲಯವು ತನ್ನ ಪ್ರಸಾರವನ್ನು ಮುಂದುವರಿಸಲು ಚಾನೆಲ್‌ಗೆ ಅನುಮತಿ ನೀಡಿತ್ತು.

English summary
Kerala Governor Arif Mohammad Khan told the two Malayalam channels at his press conference in Kochi on Monday that you should not come and walk away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X