ಕೇರಳ ಪ್ರವಾಹ: ರಕ್ಷಣಾ ಸಿಬ್ಬಂದಿಯನ್ನೇ ಯಾಮಾರಿಸಿದ ಪುಂಡ ಯುವಕ
ತಿರುವನಂತಪುರಂ, ಆಗಸ್ಟ್ 22: ಕೇರಳ ಪ್ರವಾಹದಿಂದ ಜನರು ತತ್ತರಿಸಿಹೋಗಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಹಗಲಿರುಳೆನ್ನದೆ, ಊಟ-ತಿಂಡಿ ಬಿಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಒಬ್ಬೊಬ್ಬರನನ್ನು ರಕ್ಷಿಸುವುದಕ್ಕೂ ತಮ್ಮ ಪ್ರಾಣವನ್ನೇ ಪಣವಿಟ್ಟಂತೆ ರಕ್ಷಣಾ ಸಿಬ್ಬಂದಿ ಕಷ್ಟಪಡುತ್ತಿದ್ದರೆ ಪುಂಡನೊಬ್ಬ ಇಂಥ ಸಂಕಷ್ಟದ ಸಮಯದಲ್ಲೂ ಪುಂಡಾಟ ಮಾಡಿದ ಘಟನೆ ನಡೆದಿದೆ.
ತನ್ನ ಕೆಂಪು ಶರ್ಟ್ ಅನ್ನು ಬಿಚ್ಚಿ ಹೆಲಿಕಾಪ್ಟರ್ ಗೆ ಕಾಣುವಂತೆ ಅದನ್ನು ಬೀಸುತ್ತ ಸಹಾಯಕ್ಕಾಗಿ ವ್ಯಕ್ತಿಯೊಬ್ಬ ಮೊರೆ ಇಟ್ಟಿದ್ದಾನೆ. ಯಾರೋ ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆಂದು ರಕ್ಷಣಾ ಸಿಬ್ಬಂದಿ ಕಷ್ಟಪಟ್ಟು ಆತನಿರುವ ಸ್ಥಳಕ್ಕೆ ಬಂದರೆ, ತನ್ನ ಜೇಬಿನಲ್ಲಿದ್ದ ಮೊಬೈಲ್ ತೆಗೆದುಕೊಂಡು, ಸೆಲ್ಫಿ ಕ್ಲಿಕ್ಕಿಸಿ, ರಕ್ಷಣಾ ಸಿಬ್ಬಂದಿ ಬಳಿ ವಾಪಸ್ ಹೋಗುವಂತೆ ಹೇಳಿದ್ದಾನೆ.

ತಾನು ಸೇಫ್ ಆಗಿದ್ದೀನಿ. ನಿಮ್ಮ ಜೊತೆ ಸೆಲ್ಫಿ ಬೇಕಿತ್ತು, ಅದಕ್ಕೇ ಈ ನಾಟ ಮಾಡಿದೆ ಎಂದು ಅವರ ಬಳಿ ಹೇಳಿಕೊಂಡಿದ್ದಾನೆ! ಯಾರೋ ಸಂತ್ರಸ್ತರನ್ನು ರಕ್ಷಿಸಲು ಹೊರಟಿದ್ದ ರಕ್ಷಣಾ ಸಿಬ್ಬಂದಿ ಈತನಿರುವ ಸ್ಥಳಕ್ಕೆ ತೆರಳಿದ ಕಾರಣ ಸಮಯ ವ್ಯರ್ಥವಾಗಿದೆ. ಇಂಥ ಸಂಕಷ್ಟದಲ್ಲೂ ಸ್ವಲ್ಪವೂ ಗಾಂಭೀರ್ಯವಿಲ್ಲದೆ ವರ್ತಿಸುವ ಇಂಥವರಿಗೆ ಏನೆನ್ನಬೇಕು?












Click it and Unblock the Notifications