ಕೇವಲ ಡಿಪ್ಲೊಮಾ ಓದಿ ಮರ್ಸಿಡಿಸ್-ಬೆಂಝ್ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಅತುಲ್ ಕೃಷ್ಣ ಯಶೋಗಾಥೆ ಇದು

ವಿದೇಶದಲ್ಲಿ ಒಂದೊಳ್ಳೆ ಕೆಲಸ ಪಡೆದುಕೊಳ್ಳಬೇಕು ಎಂಬುದು ಇಂದಿನ ಅನೇಕ ಭಾರತದ ಯುವಜನರ ಕನಸಾಗಿರುತ್ತದೆ. ಆದರೆ ಆ ಕನಸನ್ನ ನನಸಾಗಿಸಲು ಅವರಲ್ಲಿ ಅಪಾರ ತಾಳ್ಮೆ, ಸತತ ಪ್ರಯತ್ನ ಮತ್ತು ಎದುರಾಗುವ ಅಡೆತಡೆಗಳನ್ನಾ ಮೆಟ್ಟಿ ನಿಲ್ಲುವ ಛಲ ಬೇಕಾಗುತ್ತದೆ. ಈ ಮಾತಿಗೆ ಒಂದು ಒಳ್ಳೆಯ ಉದಾಹರಣೆಯೆಂದರೆ ಕೇರಳದ ಯುವಕ ಅತುಲ್‌ ಕೃಷ್ಣ.

ಕೇವಲ ಡಿಪ್ಲೊಮಾ ಓದಿರುವ ಅತುಲ್‌, ವಾಹನಗಳ ಮೇಲೆ ತಮಗಿರುವ ಪ್ರೀತಿಯನ್ನೇ ಬಂಡವಾಳವಾಗಿಸಿಕೊಂಡು, ಬರೋಬ್ಬರಿ ಒಂದೂವರೆ ವರ್ಷಗಳ ಕಠಿಣ ಶ್ರಮದ ಮೂಲಕ ಜರ್ಮನಿಯ ಪ್ರತಿಷ್ಠಿತ 'ಮರ್ಸಿಡಿಸ್-ಬೆಂಝ್' (Mercedes-Benz) ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಸಾಧನೆ ಮಾಡಿದ್ದಾರೆ. ಅವರು ತಮ್ಮ ಕನಸಿನ ಮರ್ಸಿಡಿಸ್-ಬೆಂಝ್ ಉದ್ಯೋಗ ಪಡೆದ ಮಾಹಿತಿ ಇಲ್ಲಿದೆ.

Kerala Diploma Holder Secures His Dream Mercedes-Benz Job In Germany After 1 5 Years Preparation

ಆಟೋಮೊಬೈಲ್ ವೃತ್ತಿಜೀವನದತ್ತ ಒಲವು ಮೂಡಿದ್ದು ಹೇಗೆ?

ಅತುಲ್ ಕೃಷ್ಣ ಅವರು ಕೇರಳದಲ್ಲಿ ತಮ್ಮ ಡಿಪ್ಲೊಮಾ ಶಿಕ್ಷಣವನ್ನ ಪೂರೈಸಿದರು. ಆ ಸಮಯದಲ್ಲಿಯೇ ಅವರಿಗೆ ವಾಹನಗಳ ಬಗ್ಗೆ ತೀವ್ರ ಆಸಕ್ತಿ ಮೂಡತೊಡಗಿತು. ಒಮ್ಮೆ ವೋಕ್ಸ್‌ವ್ಯಾಗನ್ ಸರ್ವೀಸ್ ಸೆಂಟರ್ ಒಂದನ್ನ ನೋಡಿದಾಗ, ಆ ಕಂಪನಿ ಮತ್ತು ಅದರ ಹಿಂದಿನ ಆಟೋಮೊಬೈಲ್ ಜಗತ್ತಿನ ಬಗ್ಗೆ ಅವರಲ್ಲಿ ಕುತೂಹಲ ಹೆಚ್ಚಾಯಿತು. ನಂತರ ಜರ್ಮನ್ ಆಟೋಮೊಬೈಲ್ ಪರಿಸರ ವ್ಯವಸ್ಥೆ ಮತ್ತು ಅಲ್ಲಿನ ವಿವಿಧ ಬ್ರಾಂಡ್‌ಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಶುರುಮಾಡಿದರು.

ಈ ಕುತೂಹಲವೇ ಮುಂದೆ ಜರ್ಮನಿಯಲ್ಲಿಯೇ ತಮ್ಮ ಭವಿಷ್ಯವನ್ನ ರೂಪಿಸಿಕೊಳ್ಳಬೇಕು, ಆಟೋಮೊಬೈಲ್ ವೃತ್ತಿಜೀವನ ಕಟ್ಟಿಕೊಳ್ಳಬೇಕು ಎಂಬ ಗುರಿಯಾಗಿ ಬದಲಾಯಿತು.

ವಿದೇಶದಲ್ಲಿ ಉದ್ಯೋಗ ಹುಡುಕಾಟ ಶುರು

ಜರ್ಮನಿಯತ್ತ ಮುಖ ಮಾಡುವ ನಿರ್ಧಾರ ಮಾಡಿದ ನಂತರ, ಅತುಲ್ ಹಲವು ಏಜೆನ್ಸಿಗಳನ್ನ ಸಂಪರ್ಕಿಸಿದರು. ಆದರೆ, ಅಲ್ಲಿ ಸಂವಹನದ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಿತು. ಸರಿಯಾದ ಪ್ರತಿಕ್ರಿಯೆ ಸಿಗದೆ ಅನಿಶ್ಚಿತತೆ ಕಾಡತೊಡಗಿತು. ವಿದೇಶದಲ್ಲಿ ಉದ್ಯೋಗ ಪಡೆಯಲು ಯೋಜಿಸುವಾಗ ಸ್ಪಷ್ಟವಾದ ಮಾರ್ಗದರ್ಶನ ನೀಡುವವರ ಅವಶ್ಯಕತೆ ಇರುತ್ತದೆ ಎಂಬುದನ್ನು ಅರಿತ ಅವರು, ಬೇರೆ ದಾರಿಗಳನ್ನ ಹುಡುಕಲು ಆರಂಭಿಸಿದರು.

ಆ ಹೊತ್ತಿಗೆ ಅವರಿಗೆ ಇನ್‌ಸ್ಟಾಗ್ರಾಮ್ ಜಾಹೀರಾತಿನ ಮೂಲಕ ಮೇಧಾವಿ ಶೈನ್ ಸೆಂಟರ್ ಪರಿಚಯವಾಯಿತು. ಅಲ್ಲಿಂದ ಅವರ ಕನಸಿನ ಪ್ರಯಾಣಕ್ಕೆ ಒಂದು ಸ್ಪಷ್ಟವಾದ ಹಾದಿ ಸಿಕ್ಕಿತು.

ವಿದೇಶದಲ್ಲಿ ಉದ್ಯೋಗ ಪಡೆಯಲು ಕೇವಲ ಆಸೆ ಇದ್ದರೆ ಸಾಲದು, ಭಾಷೆ ಮತ್ತು ಕೌಶಲ್ಯ ಅತ್ಯಗತ್ಯ. ಮೇಧಾವಿ ಶೈನ್ ಸೆಂಟರ್ ಮೂಲಕ ಅತುಲ್ ತಮ್ಮ ಜರ್ಮನ್ ಭಾಷೆ ಕಲಿಕೆ ಮತ್ತು ಕೌಶಲ್ಯವನ್ನ ಬಲಪಡಿಸಿಕೊಂಡರು. ಮೆಕಾಟ್ರಾನಿಕ್ಸ್ ಟೆಕ್ನಿಷಿಯನ್ ಕೌಶಲ್ಯಗಳ ತರಬೇತಿ ಪಡೆದರು.

ಜರ್ಮನ್ ಆಟೋಮೊಬೈಲ್ ಉದ್ಯಮದ ನಿರೀಕ್ಷೆಗಳು ಮತ್ತು ಅಲ್ಲಿನ ಸಂಸ್ಕೃತಿಗೆ ಒಗ್ಗಿಕೊಳ್ಳುವ ಬಗ್ಗೆಯೂ ತರಬೇತಿ ಪಡೆದರು. ಭಾಷೆ ಕಲಿಯುವುದು ಮತ್ತು ಅದನ್ನು ನಿರಂತರವಾಗಿ ಅಭ್ಯಾಸ ಮಾಡುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಆದರೆ, 1.5 ವರ್ಷಗಳ ಕಾಲ ತಾಳ್ಮೆಯಿಂದ ಒಂದೊಂದೇ ಹೆಜ್ಜೆ ಮುಂದಿಡುತ್ತಾ ಅವರು ಯಶಸ್ವಿಯಾದರು.

ಅತುಲ್ ಕೃಷ್ಣ ಸಾಧನೆ: 'ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್' ನೆನಪಿಸಿದ ಕ್ಷಣ

ಸುದೀರ್ಘ ಶ್ರಮದ ನಂತರ ಮರ್ಸಿಡಿಸ್-ಬೆಂಝ್ ಕಂಪನಿಯಿಂದ ಆಫರ್ ಲೆಟರ್ ಸಿಕ್ಕಾಗ, ಅತುಲ್ ಕೃಷ್ಣ ಸಾಧನೆ ಅವರಿಗೆ ನಂಬಲು ಅಸಾಧ್ಯವಾಗಿತ್ತು. "ನಾನು ತಕ್ಷಣ ಎಂಜಾಯ್‌ ಮಾಡಲಿಲ್ಲ, ಬದಲಿಗೆ ಆ ಕ್ಷಣವನ್ನ ಅರಗಿಸಿಕೊಳ್ಳುತ್ತಿದ್ದೆ. ಇದು ನನಗೆ ಪ್ರಖ್ಯಾತ ಹಾಲಿವುಡ್ ಸಿನಿಮಾ 'ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್' ಕಥೆಯನ್ನ ನೆನಪಿಸಿತು. ಎಷ್ಟೇ ಕಷ್ಟ ಬಂದರೂ ಗುರಿಯ ಮೇಲಿನ ನಂಬಿಕೆ ಕಳೆದುಕೊಳ್ಳಬಾರದು ಎಂಬುದನ್ನು ಇದು ನನಗೆ ಕಲಿಸಿತು" ಎನ್ನುತ್ತಾರೆ ಅತುಲ್.

ಪ್ರಸ್ತುತ ಜರ್ಮನಿಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸುತ್ತಿರುವ ಅವರು, ಅಲ್ಲಿನ ತಂತ್ರಜ್ಞಾನ ಮತ್ತು ಕೆಲಸದ ಶೈಲಿಯನ್ನ ಕಲಿಯುವ ಉತ್ಸಾಹದಲ್ಲಿದ್ದಾರೆ. ಭವಿಷ್ಯದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ, ತಾವೇ ಸ್ವಂತವಾಗಿ ಒಂದು ಕಾರನ್ನ ವಿನ್ಯಾಸಗೊಳಿಸುವ ಕನಸನ್ನೂ ಅವರು ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+