ಕೇರಳದಲ್ಲಿ ಸಿಪಿಐಎಂ ಕಾರ್ಯಕರ್ತನ ಹತ್ಯೆ: ಬಿಜೆಪಿ ಕೈವಾಡ ಶಂಕೆ
ಕಾಸರಗೋಡು, ಆಗಸ್ಟ್ 06: ಕೇರಳದ ಕಾಸರಗೋಡಿನಲ್ಲಿ ಸಿಪಿ ಐಎಂ(ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)) ಕಾರ್ಯಕರ್ತರೊಬ್ಬರು ಬರ್ಬರವಾಗಿ ಹತ್ಯೆಯಾದ ಘಟನೆ ಭಾನುವಾರ ರಾತ್ರಿ 11 ಗಂಟೆಯ ಸಮಯಕ್ಕೆ ನಡೆದಿದೆ.
ಕಾಸರಗೋಡು ಜಿಲ್ಲೆಯ ಕಂಜೇಶ್ವರಂ ನ ಅಬೂಬಕರ್ ಸಿದಿಕ್ ಎಂಬ ಸಿಪಿಐಎಂ ಕಾರ್ಯಕರ್ತನ ಮೇಲೆ ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಆಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.
ಈ ಘಟನೆಯ ಪ್ರಮುಖ ಆರೋಪಿಯನ್ನು ಬಿಜೆಪಿ ಕಾರ್ಯಕರ್ತ ಅಸ್ಲಾಂ ಎಂದು ಗುರುತಿಸಲಾಗಿದ್ದು, ಘಟನೆಗೆ ರಾಜಕೀಯ ಭಿನ್ನಾಭಿಪ್ರಾಯವೇ ಕಾರಣ ಎನ್ನಲಾಗುತ್ತಿದೆ.

ಸಿದಿಕ್ ಹತ್ಯೆಯಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂದು ಸಿಪಿಐಎಂ ಶಾಸಕ ಶಮ್ಶೀರ್ ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಯಾವುದೇ ಆರೋಪಿಗಳನ್ನು ಬಂಧಿಸಿದ ಕುರಿತು ಮಾಹಿತಿ ಲಭ್ಯವಾಗಿಲ್ಲ.
Kerala: CPI(M) worker was stabbed to death in Kasaragod district allegedly by BJP workers, last night (Earlier visuals) pic.twitter.com/igZRIhpW6s
— ANI (@ANI) August 6, 2018












Click it and Unblock the Notifications