Kerala blast: ಕೇರಳ ಸ್ಫೋಟ ಪ್ರಕರಣ: 12 ವರ್ಷದ ಬಾಲಕಿ ಸಾವು!
ಕೇರಳದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ ಮೂರಕ್ಕೆ ಏರಿದೆ. ಭಾನುವಾರ ನಡೆದ ಕ್ರಿಶ್ಚಿಯನ್ ಧಾರ್ಮಿಕ ಸಭೆಯೊಂದರಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡ 50 ಜನರ ಪೈಕಿ 12 ವರ್ಷದ ಬಾಲಕಿ ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಭಾನುವಾರ ನಡೆದ ಸ್ಪೋಟದಲ್ಲಿ ಬಾಲಕಿ ಕೇರಳದ ಎರ್ನಾಕುಲಂ ಜಿಲ್ಲೆಯ ಲಿಬಿನಾ ತೀವ್ರವಾಗಿ ಗಾಯಗೊಂಡಿದ್ದಳು. ಲಿಬಿನಾ ಅವರ ದೇಹದ ಶೇಕಡ 95 ರಷ್ಟು ಭಾಗ ತೀವ್ರವಾಗಿ ಸುಟ್ಟು ಹೋಗಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.

ಇದಕ್ಕೂ ಮೊದಲು ಸ್ಫೋಟಗಳಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದರು ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕ್ರಿಶ್ಚಿಯನ್ ಧಾರ್ಮಿಕ ಸಭೆಯೊಂದರಲ್ಲಿ ಈ ಸ್ಪೋಟ ಸಂಭವಿಸಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಮೂರು ದಿನಗಳ ಪ್ರಾರ್ಥನಾ ಸಭೆಯ ಮುಕ್ತಾಯದ ದಿನದಂದು ಅಲ್ಪಸಂಖ್ಯಾತ ಕ್ರಿಶ್ಚಿಯನ್ ಗುಂಪು ನೂರಾರು ಅನುಯಾಯಿಗಳು ಯೆಹೋವನ ಪ್ರಾರ್ಥನೆಗಾಗಿ ಒಟ್ಟುಗೂಡಿದಾಗ ಸ್ಫೋಟಗಳು ಸಂಭವಿಸಿದವು.
ದೇಶಾದ್ಯಂತ ಈ ಸ್ಪೋಟ ಆಘಾತ ಸೃಷ್ಟಿಸಿದೆ. ದೆಹಲಿ ಮತ್ತು ಮುಂಬೈಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಈ ಸರಣಿ ಸ್ಫೋಟದ ಗಂಟೆಗಳ ನಂತರ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಯೆಹೋವನ ಅನುಯಾಯಿ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಪೊಲೀಸರ ಮುಂದೆ ಶರಣಾಗಿದ್ದಾನೆ.
ಕೇರಳದ ಸ್ಫೋಟಗಳಲ್ಲಿ ಐಇಡಿ ಬಳಕೆ
ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಸ್ಫೋಟಕಗಳನ್ನು ಟಿಫಿನ್ ಬಾಕ್ಸ್‌ನಲ್ಲಿ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳ ಪ್ರಕಾರ ಸ್ಫೋಟಗಳು ನಡೆದಾಗ ಸಮಾವೇಶ ಕೇಂದ್ರದಲ್ಲಿ ಸುಮಾರು 2,000 ಜನರು ಇದ್ದರು. ಅಕ್ಟೋಬರ್ 27ರಂದು ಆರಂಭವಾದ ಮೂರು ದಿನವಾಗಿತ್ತು ಭಾನುವಾರ ಸಭೆಗೆ ಕೊನೆಯ ದಿನವಾಗಿತ್ತು.












Click it and Unblock the Notifications