ಮಣಿ ದೇಹದಲ್ಲಿ ಕೀಟನಾಶಕ ಸೇರಿದ್ದು ಹೇಗೆ? ಸಿಬಿಐ ತನಿಖೆಯಾಗ್ಲಿ

Posted By:
Subscribe to Oneindia Kannada

ಕೊಚ್ಚಿ, ಮಾರ್ಚ್ 21: ಬಹುಭಾಷಾ ನಟ, ಜಾನಪದ ಗಾಯಕ, ಮಿಮಿಕ್ರಿ ಕಲಾವಿದ ಕಲಾಭವನ್ ಮಣಿ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ. ಮಣಿ ಅವರದ್ದು ಸಹಜ ಸಾವಲ್ಲ, ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಕೇರಳದ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ಈ ನಡುವೆ ಮಣಿ ಅವರದ್ದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರ ಮೃತದೇಹದಲ್ಲಿ ಮಿಥೈಲ್ ಅಲ್ಕೋಹಾಲ್ ಅಂಶ ಅಧಿಕವಾಗಿರುವುದು ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯನ್ನು ತ್ರಿಸ್ಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನಡೆಸಲಾಯಿತು.

ರಾಸಾಯನಿಕ ಪತ್ತೆ: ವಿಸೇರಾದಲ್ಲಿ ಕ್ಲೋರೊಪೈರಿಫೋಸ್(Chlorpyrifos) ಇರುವುದು ಪತ್ತೆಯಾಗಿದೆ. ಈ ಬಗ್ಗೆ ಕೊಚ್ಚಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಇದು ವಿಷಕಾರಿ ಕೀಟನಾಶಕವಾಗಿದೆ. ಈ ಕೀಟನಾಶಕ ಹೇಗೆ ಮೃತದೇಹದ ವಿಸೇರಾ ಸ್ಯಾಂಪಲ್ ನಲ್ಲಿ ಸೇರಲು ಸಾಧ್ಯವಾಯಿತು ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.[ಬಹುಭಾಷಾ ನಟ ಮಣಿ ಸಾವು, ಪೊಲೀಸ್ ತನಿಖೆಗೆ]

ಮಣಿ ಅವರು ಕರಳು ಹಾಗೂ ಕಿಡ್ನಿ ವೈಫಲ್ಯದಿಂದ ಅಮೃತಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಮಾರ್ಚ್ 6ರಂದು ಮೃತಪಟ್ಟಿದ್ದರು. (ಪಿಟಿಐ)

ಪೊಲೀಸರಿಂದ ನಾಲ್ಕು ಜನರ ಬಂಧನ

ಪೊಲೀಸರಿಂದ ನಾಲ್ಕು ಜನರ ಬಂಧನ

ಕೊಚ್ಚಿ ಪೊಲೀಸರಿಂದ ನಾಲ್ಕು ಜನರ ಬಂಧನವಾಗಿದೆ. ಎಲ್ಲರೂ ನಟ ಮಣಿ ಅವರ ಗೆಳೆಯರು ಎಂಬುದು ಗಮನಾರ್ಹ. ಮಣಿ ಅವರ ಪತ್ನಿ ಡಾಕ್ಟರ್ ನಿಮ್ಮಿ, ಸೋದರ ಆರ್ ಎಲ್ ವಿ ರಾಮಕೃಷ್ಣನ್ ಅವರು ಮಣಿ ಅವರ ಗೆಳೆಯರ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಮೃತ ದೇಹದಲ್ಲಿ ಮಿಥೇಲ್ ಆಲ್ಕೋಹಾಲ್ ಅಂಶ ಅಧಿಕವಾಗಿರುವುದರಿಂದ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.

ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ

ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ

ಬಿಜೆಪಿ ರಾಜ್ಯಾಧ್ಯಕ್ಷ ಕೆ ರಾಜಶೇಖರನ್ ಅವರು ಮಾತನಾಡಿ, ಮಣಿ ಅವರ ಸಾವಿನ ನಿಗೂಢತೆ ಬಯಲಾಗಬೇಕಿದೆ. ಮಣಿ ಅವರು ಅನಾರೋಗ್ಯ ಪೀಡಿತರಾಗಿದ್ದು ನಿಜವಾದರೂ, ವಿಷಕಾರಿ ಅಂಶ ದೇಹದಲ್ಲಿ ಸೇರಲು ಹೇಗೆ ಸಾಧ್ಯವಾಯಿತು. ಇಷ್ಟು ದಿನವಾದರೂ ತನಿಖೆ ಪ್ರಗತಿ ಕಾಣುತ್ತಿಲ್ಲ. ರಾಜಕೀಯ ರಂಗಕ್ಕೆ ಮಣಿ ಅವರು ಪ್ರವೇಶಿಸುವ ಸಂದರ್ಭದಲ್ಲಿ ದುರಂತ ನಡೆದಿರುವುದು ಸಹಜವಾಗಿ ಅನುಮಾನ ಮೂಡಿಸಿದೆ ಎಂದಿದ್ದಾರೆ.

ಮಣಿ ಸಾವಿನ ತನಿಖೆ ಎತ್ತ ಸಾಗಿದೆ

ಮಣಿ ಸಾವಿನ ತನಿಖೆ ಎತ್ತ ಸಾಗಿದೆ

ಕಲಾಭವನ್ ಮಣಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಮಿಮಿಕ್ರಿ, ಜಾನಪದ ಗಾಯನ ಒಲಿದಿತ್ತು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಮಣಿ, ಆಟೋರಿಕ್ಷಾ ಚಾಲಕನಿಂದ ಬೇಡಿಕೆಯ ವಿಲನ್ ಆಗಿ ತೆರೆಯಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಗಳಿಸಿದ್ದರು. ಈಗ ಅವರ ಗೆಳೆಯರು, ಬ್ಯಾಂಕ್ ಬ್ಯಾಲೆನ್ಸ್, ವಿಸೇರಾ ವರದಿ, ಕೀಟನಾಶಕ ಸಿಕ್ಕಿದ್ದು ಹೇಗೆ? ಎಂಬ ಎಲ್ಲಾ ಅಂಶವನ್ನು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಕ್ರೈಂ ವಿಭಾಗದ ಎಸ್ ಪಿ ಉನ್ನಿ ರಾಜನ್ ಹೇಳಿದ್ದಾರೆ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಾವಿನ ಕಥೆ

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಾವಿನ ಕಥೆ

ಕನ್ನಡ, ಮಲಯಾಳಂ, ತಮಿಳು, ತೆಲುಗು ಸೇರಿದಂತೆ 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಮಣಿ ಅವರು ವಾಸಂತಿಯುಂ ಲಕ್ಷ್ಮಿಯುಂ ಪಿನ್ನೆ ನ್ಯಾನುಂ ಚಿತ್ರದಲ್ಲಿ ಅಂಧ ಗಾಯಕನಾಗಿ ಕಾಣಿಸಿಕೊಂಡು ಕೇರಳ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದೇ ಪಾತ್ರವನ್ನು ಕನ್ನಡ ಆವೃತ್ತಿ(ನನ್ನ ಪ್ರೀತಿಯ ರಾಮು) ಯಲ್ಲಿ ದರ್ಶನ್ ತೂಗುದೀಪ ಅವರು ನಟಿಸಿದ್ದರು.

ರಾಜಕೀಯ ರಂಗ ಪ್ರವೇಶಕ್ಕೆ ಸಿದ್ಧತೆ ನಡೆದಿತ್ತು

ರಾಜಕೀಯ ರಂಗ ಪ್ರವೇಶಕ್ಕೆ ಸಿದ್ಧತೆ ನಡೆದಿತ್ತು

ಪಶು ವೈದ್ಯೆ ಡಾ. ನಿಮ್ಮಿಯನ್ನು ಮದುವೆಯಾಗಿದ್ದ ಮಣಿ ಅವರಿಗೆ ಶ್ರೀಲಕ್ಷ್ಮಿ ಎಂಬ ಹೆಸರಿನ ಮಗಳಿದ್ದಾರೆ. ಆಟೋರಿಕ್ಷಾ ಚಾಲಕನಾಗಿ ವೃತ್ತಿ ಬದುಕು ಕಂಡುಕೊಂಡಿದ್ದರು. ಕಲಾಭವನ ನಾಟಕ ತಂಡದ ಮೂಲಕ ಹಲವಾರು ಶೋಗಳನ್ನು ನೀಡಿ ಜನಪ್ರಿಯತೆ ಗಳಿಸಿ ನಂತರ ಚಿತ್ರರಂಗದಲ್ಲಿ ಮಿಂಚಿದ್ದರು. 2016ರ ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಎ ಡಿಎಫ್ ಪರ ಸ್ಪರ್ಧಿಸುವಂತೆ ಅವರಿಗೆ ಆಫರ್ ಬಂದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The mystery over the death of leading south Indian actor Kalabhavan Mani continues with police on Sunday saying they were yet to confirm whether it was a murder or suicide case, even as the state BJP demanded a Central Bureau of Investigation (CBI) probe into it.
Please Wait while comments are loading...