Get Updates
Get notified of breaking news, exclusive insights, and must-see stories!

ಕೇರಳವನ್ನು 'ಕೇರಳಂ' ಮಾಡುವ ಪಟ್ಟು ಬಿಡುತ್ತಿಲ್ಲ ಪಿಣರಾಯಿ ವಿಜಯನ್; ಸಿಗುತ್ತಾ ಗೆಲುವು?

ತಿರುವನಂತಪುರಂ, ಜೂನ್. 25: ಕೇರಳ ವಿಧಾನಸಭೆಯು ಜೂನ್ 24 ರಂದು ಸರ್ವಾನುಮತದ ನಿರ್ಣಯದಲ್ಲಿ ರಾಜ್ಯದ ಹೆಸರನ್ನು 'ಕೇರಳ'ದಿಂದ 'ಕೇರಳಂ' ಎಂದು ಬದಲಾಯಿಸುವ ಸಾಂವಿಧಾನಿಕ ತಿದ್ದುಪಡಿಯನ್ನು ಪ್ರಸ್ತಾಪಿಸುವ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿದೆ.

ರಾಜ್ಯದ ಹೆಸರು ಬದಲಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ್ದಾರೆ. ಕೇರಳ ವಿಧಾನಸಭೆಯು ಈ ಎರಡನೇ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿದೆ. ರಾಜ್ಯದ ಹೆಸರನ್ನು ಅಧಿಕೃತವಾಗಿ 'ಕೇರಳಂ' ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದೆ. ಸರಿಸುಮಾರು ಒಂದು ವರ್ಷದ ನಂತರ ಕೇಂದ್ರವು ತಿದ್ದುಪಡಿಗಾಗಿ ಅದನ್ನು ಹಿಂದಿರುಗಿಸುವ ಮೊದಲು ಇದೇ ರೀತಿಯ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.

Kerala Assembly passes resolution to rename Kerala to Keralam

ಕಳೆದ ವರ್ಷವೂ ನಡೆದಿತ್ತು ಮರುನಾಮಕರಣದ ಪ್ರಸ್ತಾಪ

ವಿಧಾನಸಭೆಯ ನಿರ್ಣಯವನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಕಳೆದ ವರ್ಷ ಆಗಸ್ಟ್‌ನಲ್ಲಿ, ಕೇಂದ್ರ ಗೃಹ ಸಚಿವಾಲಯವು ಕೊನೆಯ ನಿರ್ಣಯವನ್ನು ಪರಿಶೀಲಿಸಿತು. ಕೇರಳ ಸರ್ಕಾರವು ರಾಜ್ಯದ ಹೆಸರನ್ನು ಬದಲಾಯಿಸಲು "ತಕ್ಷಣದ ಕ್ರಮಗಳನ್ನು" ಕೋರಿದ ನಂತರ ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿತ್ತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ಬದಲಾಯಿಸುವಂತೆ ಕೇಂದ್ರ ಸರ್ಕಾರವನ್ನು ಕೋರುವ ನಿರ್ಣಯವನ್ನು ಪ್ರಸ್ತಾಪಿಸಿದರು. ಭಾರತೀಯ ಸಂವಿಧಾನದ 3 ನೇ ವಿಧಿಯನ್ನು ಬೊಟ್ಟು ಮಾಡಿದ್ದಾರೆ.

Kerala Assembly passes resolution to rename Kerala to Keralam

ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯವನ್ನು ಮಲಯಾಳಂನಲ್ಲಿ 'ಕೇರಳಂ' ಎಂದು ಕರೆಯಲಾಗಿದೆ ಮತ್ತು ಮಲಯಾಳಂ ಭಾಷಿಕರ ಅಖಂಡ ಕೇರಳದ ಬೇಡಿಕೆ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದಿಂದಲೂ ಪ್ರಬಲವಾಗಿದೆ. ಆದರೆ ಸಂವಿಧಾನದ ಮೊದಲ ಶೆಡ್ಯೂಲ್‌ನಲ್ಲಿ ನಮ್ಮ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ ಎಂದು ಹೇಳಿದ್ದಾರೆ.

"ಸಂವಿಧಾನದ 3 ನೇ ಪರಿಚ್ಛೇದದ ಅಡಿಯಲ್ಲಿ ಅದನ್ನು 'ಕೇರಳಂ' ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲಿ ಅದನ್ನು 'ಕೇರಳಂ' ಎಂದು ಮರುನಾಮಕರಣ ಮಾಡಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಸಭೆಯು ಕೇಂದ್ರವನ್ನು ಕೋರುತ್ತದೆ" ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉಲ್ಲೇಖಿಸಿದ್ದಾರೆ.

ಕೇರಳವನ್ನು ಕೇರಳಂ ಎನ್ನಲು ಎಲ್ಲಾ ಪಕ್ಷಗಳ ಒಪ್ಪಿಗೆ

ಆಡಳಿತಾರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷ ಯುಡಿಎಫ್ ಎರಡೂ ಸದಸ್ಯರು ನಿರ್ಣಯವನ್ನು ಬೆಂಬಲಿಸಿದ್ದಾರೆ. ಯುಡಿಎಫ್ ಶಾಸಕ ಎನ್ ಶಂಸುದ್ದೀನ್ ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಆದರೆ, ಸರ್ಕಾರ ಅವುಗಳನ್ನು ತಿರಸ್ಕರಿಸಿತು. ನಂತರ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿತು ಎಂದು ಸ್ಪೀಕರ್ ಎಎನ್ ಶಂಸೀರ್ ಘೋಷಿಸಿದ್ದಾರೆ.

ಸ್ವಾತಂತ್ರ್ಯದ ನಂತರ ಭಾರತದಲ್ಲಿ ನೂರಕ್ಕೂ ಹೆಚ್ಚು ನಗರಗಳು ಮತ್ತು ಹಲವಾರು ರಾಜ್ಯಗಳು ತಮ್ಮ ಹೆಸರನ್ನು ಬದಲಾಯಿಸಿಕೊಂಡಿವೆ. 2000 ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯವನ್ನು ಬೇರ್ಪಡಿಸಲು ಕಾರಣವಾದ ಉತ್ತರಾಖಂಡ ಆಂದೋಲನ ಚಳವಳಿಯನ್ನು ಗೌರವಿಸಿ 2007 ರಲ್ಲಿ ಉತ್ತರಾಂಚಲ್ ಉತ್ತರಾಖಂಡವಾಯಿತು.

ಒರಿಸ್ಸಾ (ಹೆಸರಿನ ಬದಲಾವಣೆ) ಕಾಯಿದೆಯನ್ನು ಅನುಸರಿಸಿ 2011 ರಲ್ಲಿ ಒಡಿಶಾ ಎಂದು ಮರುನಾಮಕರಣ ಮಾಡಲಾಯಿತು. 2006 ರಲ್ಲಿ, ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶವು ಪುದುಚೇರಿ ಆಯಿತು. ಕೆಲವು ರಾಜಧಾನಿ ನಗರಗಳು ಕೂಡ ಮರುನಾಮಕರಣಗೊಂಡಿವೆ. ಮುಂಬೈ ಎಂದು ಮರುನಾಮಕರಣಗೊಂಡ ಬಾಂಬೆ ಮತ್ತು ಚೆನ್ನೈ ಆಗಿ ಮಾರ್ಪಟ್ಟಿರುವ ಮದ್ರಾಸ್ ಕೂಡ ಈ ಸಾಲಿನಲ್ಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+