ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನುಮಂತನ ರಾಕ್ಷಸ ಎಂದ ಕೇಜ್ರಿವಾಲ್‌ಗೆ ಮಂಗಳಾರತಿ

|
Google Oneindia Kannada News

ನವದೆಹಲಿ, ಫೆಬ್ರವರಿ , 16: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಯಾಕೆ ಈ ಬಗೆಯ ಕೆಲಸಗಳನ್ನು ಮಾಡಿಕೊಳ್ಳುತ್ತಾರೋ? ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಟ್ವೀಟ್ ಮಾಡಿರುವ ಕೇಜ್ರಿವಾಲ್ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಹನುಮಂತನ ಚಿತ್ರ ಇರುವಂತೆ ಇರುವ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಹಾಕಿದ ಕೇಜ್ರಿವಾಲ್ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಎದುರಿಗೆ ನಿಂತಿರುವ ಮೋದಿ ಎದುರು ಬರುವ ಹನುಮಂತನ ಆಕಾರದ ವ್ಯಕ್ತಿಯನ್ನು ರಾಕ್ಷಸನ ರೀತಿ ಚಿತ್ರಿಸಿರುವುದು ವಿವಾದ ಹುಟ್ಟುಹಾಕಿದೆ. [ರಾಹುಲ್‌ ಗಾಂಧಿಗೆ ಅಮಿತ್ ಶಾ ಎಸೆದ 8 ಪ್ರಶ್ನೆ]

ಹನುಮಂತ ಲಂಕೆಗೆ ಬೆಂಕಿ ಹಚ್ಚಿ ಬರುವಂತಹ ಪ್ರಕರಣವನ್ನು ಇಟ್ಟುಕೊಂಡು ಸಿದ್ಧವಾಗಿರುವ ವ್ಯಂಗ್ಯ ಚಿತ್ರದಲ್ಲಿ ಕಂಡುಬರುವ ಶಬ್ದ ಆಕ್ರೋಶಕ್ಕೆ ಕಾರಣವಾಗಿದೆ. "Done Sir, all attention is on JNU now" ಮಾಡಿ ಮುಗಿಸಿದ್ದೇನೆ ಸರ್, ಎಲ್ಲರ ಚಿತ್ತ ಜೆಎನ್ ಯು ಕಡೆ ನೆಟ್ಟಿದೆ. ಈ ಗಲಾಟೆಯಲ್ಲಿ ಉಳಿದ ವಿಚಾರಗಳು ಯಾರ ತಲೆಗೂ ಹೋಗಲ್ಲ ಎಂಬ ಮಾತನ್ನು ಚಿತ್ರ ಪ್ರತಿಬಿಂಬಿಸುತ್ತಿದ್ದು ನರೇಂದ್ರ ಮೋದಿಗೆ ಹನುಮಂತನ ವೇಷದ ರಾಕ್ಷಸ ಹೇಳುವಂತೆ ಚಿತ್ರವಿದೆ.

ಇನ್ನು ಕಳಪೆ ಮಟ್ಟಕ್ಕೆ ಇಳಿಯಲು ಸಾಧ್ಯವೆ?

ಇನ್ನು ಕಳಪೆ ಮಟ್ಟಕ್ಕೆ ಇಳಿಯಲು ಸಾಧ್ಯವೆ?

ಭಗವಾನ್ ಹನುಮಂತನ ಚಿತ್ರವನ್ನು ಬಳಸಿಕೊಂಡು ಟ್ವೀಟ್ ಮಾಡಿದ ಅರವಿಂದ್ ಕೇಜ್ರಿವಾಲ್ ಇನ್ನು ಕೆಳಮಟ್ಟಕ್ಕೆ ಇಳಿಯಲು ಸಾಧ್ಯವೇ?

ಅರವಿಂದ್ ಕೇಜ್ರಿವಾಲ್ ಲಂಕೆ ಸುಡಬೇಕಿದೆ?

ಅರವಿಂದ್ ಕೇಜ್ರಿವಾಲ್ ಲಂಕೆ ಸುಡಬೇಕಿದೆ?

ಅರವಿಂದ್ ಕೇಜ್ರಿವಾಲ್ ಅವರ ಲಂಕಾ ಮನೋಭಾವನ್ನು ಮೊದಲು ಸುಟ್ಟುಹಾಕಬೇಕಿದೆ.

ಕೇಜ್ರಿವಾಲ್ ಬಂಧನವಾಗಲಿ

ಕೇಜ್ರಿವಾಲ್ ಬಂಧನವಾಗಲಿ

ಕಮಲೇಶ್ ತಿವಾರಿಗೆ ಒಂದು ನ್ಯಾಯ, ಅರವಿಂದ್ ಕೇಜ್ರಿವಾಲ್ ಗೆ ಒಂದು ನ್ಯಾಯವೇ? ಕೇಜ್ರಿವಾಲ್ ಅವರನ್ನು ಸಹ ಎನ್ ಎಸ್ ಎ ಅಡಿ ಕೂಡಲೇ ಬಂಧಿಸಬೇಕು.

ನಿಜವಾದ ಅಸಹಿಷ್ಣುತೆ

ನಿಜವಾದ ಅಸಹಿಷ್ಣುತೆ ಅಂದರೆ ಏನು ಎಂಬುದಕ್ಕೆ ಕೇಜ್ರಿವಾಲ ಬಳಿ ತಕ್ಕ ಉತ್ತರ ಸಿಗಬಹುದು. ಇಂಥ ಟ್ವೀಟ್ ಗಳು ಅವರ ಮಾನಸಿಕ ಸ್ಥಿತಿಯ ಬಗ್ಗೆ ಅನುಮಾನವನ್ನು ಹುಟ್ಟುಹಾಕುತ್ತವೆ.

ಭಾರತವನ್ನು ದೂರಿದ್ದು ಸಾಕು

ಭಾರತವನ್ನು ದೂರುವುದು, ಮೋದಿಯನ್ನು ದೂರುವುದು ಸಾಕು.. ಈಗ ಮತ್ತೆ ಹಿಂದೂಗಳನ್ನು ದೂರುವುದಕ್ಕೂಇದೀಗ ಶುರುವಿಟ್ಟುಕೊಂಡಿದ್ದಾರೆ.

ಕೇಜ್ರಿವಾಲರ ಕೊನೆಗಾಲ ಹತ್ತಿರ

ಹನುಮಾನ ಅರವಿಂದ್ ಕೇಜ್ರಿವಾಲರ ಲಂಕಾ ಸಾಮ್ರಜ್ಯವನ್ನು ಸುಡುವ ಕಾಲ ಬಹಳ ದೂರವಿಲ್ಲ.

ಇದೇ ನಮ್ಮ ಪ್ರತಿಕ್ರಿಯೆ

ಅರವಿಂದ್ ಕೇಜ್ರಿವಾಲ್ ಮಾಡಿರುವ ಟ್ವೀಟ್ ಗೆ ಇದೇ ನಮ್ಮ ಪ್ರತಿಕ್ರಿಯೆ.

English summary
Delhi Chief Minister Arvind Kejriwal on Tuesday stoked controversy after tweeting a poster which has irked many. After tweeting the poster, Twitter reacted with anger and said that it has hurt the Hindu sentiments. The poster depicts Lord Hanuman as a 'Rakshas' .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X