JNU: ರಾಹುಲ್‌ ಗಾಂಧಿಗೆ ಅಮಿತ್ ಶಾ ಎಸೆದ 8 ಪ್ರಶ್ನೆ

Subscribe to Oneindia Kannada

ನವದೆಹಲಿ, ಫೆಬ್ರವರಿ, 15: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್, ಎಡರಂಗ ಮತ್ತು ಪೊಲೀಸ್ ಅಧಿಕಾರಿಗಳ ವಿವಿಧ ಬಗೆಯ ಹೇಳಿಕೆಗೆ ಸಾಕ್ಷಿಯಾಗುತ್ತಿದೆ.

ದೇಶದ್ರೋಹದ ಘೋಷಣೆ ಕೂಗಿದ್ದಾರೆ ಎಂಬ ಆಧಾರದಲ್ಲಿ ಶುರುವಾದ ವಿವಾದ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರದ ವೇದಿಕೆಯಾಗಿ ಮಾರ್ಪಾಡಾಗಿದೆ. ರಾಹುಲ್ ಗಾಂಧಿ ಅತ್ತ ಕಾಂಗ್ರೆಸ್ ನಾಯಕತ್ವ ವಹಿಸಿ ಪ್ರತಿಭಟನಾಕಾರರಪರವಾಗಿ ನಿಂತಿದ್ದರೆ ಇತ್ತ ಬಿಜೆಪಿಯ ಅಮಿತ್ ಶಾ, ರಾಜನಾಥ್ ಸಿಂಗ್ ತಮ್ಮ ನಿಲುವನ್ನು ಪ್ರಕಟ ಮಾಡುತ್ತಿದ್ದಾರೆ.[ಅಫ್ಜಲ್ ಗುರು ಪರ ವಿವಾದ: ನ್ಯಾಯಾಂಗ ಸಮಿತಿ ತನಿಖೆ, ಕನ್ಹಯ್ಯಾ ಡಿಬಾರ್]

ಪ್ರತಿಭಟನಾಕಾರರ ಪರ ಮಾತಾಡಿದ ಧರಣಿ ಕುಳಿತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಶ್ನೆಗಳ ಅಸ್ತ್ರ ಎಸೆದಿದ್ದಾರೆ. ಯಾವುದೇ ಬಗೆಯ ರಾಷ್ಟ್ರವಿರೋಧಿ ಚಟುವಟಿಕೆಗೆ ದೇಶದಲ್ಲಿ ಅವಕಾಶವಿಲ್ಲ. ಭಯೋತ್ಪಾದಕರ ಪರ ವಹಿಸುವುದನ್ನು ಯಾವ ನಾಗರಿಕನೂ ಅಂಗೀಕರಿಸುವುದಿಲ್ಲ. ರಾಷ್ಟ್ರದ ಪ್ರತಿಷ್ಠಿತ ವಿಶ್ವವಿದ್ಯಾಲಯಲ್ಲಿ ಭಾರತ- ವಿರೋಧಿ ಘೊಷಣೆಗಳನ್ನು ಕೂಗಲಾಗಿದೆ ಎಂಬ ಬಗ್ಗೆ ಸಾಕಷ್ಟು ಮಾಹಿತಿ ಇದೆ ಎಂದಿರುವ ಶಾ ಪ್ರಶ್ನೆಗಳಿಗೆ ಉತ್ತರಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ ಎಂದು ಸವಾಲು ಎಸೆದಿದ್ದಾರೆ.[ಸಂಸತ್ ದಾಳಿ ಇತಿಹಾಸ]

ಪ್ರಶ್ನೆ 1

ಪ್ರಶ್ನೆ 1

ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವುದು ಸರಿಯೆ? ಇದನ್ನು ನೀವು ಒಪ್ಪುತ್ತೀರಾ?

ಪ್ರಶ್ನೆ 2

ಪ್ರಶ್ನೆ 2

ಭಾರತದ ದೇಶ ಇನ್ನೊಂದು ಸಾರಿ ವಿಭಜನೆಯಾಗಲು ನೀವು ಬಯಸುತ್ತೀರಾ?

ಪ್ರಶ್ನೆ 3

ಪ್ರಶ್ನೆ 3

ದೇಶದ್ರೋಹಿ ಚಟುವಟಿಕೆ ಮಾಡಿದವರ ವಿರುದ್ಧ ಯಾವ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬಾರದೆ?[ಡಿ.13ರ ಸಂಸತ್ ದಾಳಿಯನ್ನು ಮರೆಯಲು ಸಾಧ್ಯವೇ?]

ಪ್ರಶ್ನೆ 4

ಪ್ರಶ್ನೆ 4

ಅಫ್ಜಲ್‌ ಗುರುವಿನ ವೈಭವೀಕರಣವನ್ನು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳ ಘೋಷಣೆಗಳನ್ನು ಬೆಂಬಲಿಸುವುದು ನಿಮ್ಮ ದೇಶಭಕ್ತಿಯೇ? ಸಿಯಾಚಿನ್‌ನಲ್ಲಿ ಹುತಾತ್ಮರಾದ ಸೈನಿಕರಿಗೆ ಯಾವ ಸ್ಥಾನ ಕೊಡುತ್ತೀರಿ?

ಪ್ರಶ್ನೆ 5

ಪ್ರಶ್ನೆ 5

1975ರ ಕಾಲದ ತುರ್ತು ಪರಿಸ್ಥಿತಿ ಹೇರಿಕೆ ನಿಮ್ಮ ಪ್ರಕಾರ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿದ ಕ್ರಮವೇ?

ಪ್ರಶ್ನೆ 6

ಪ್ರಶ್ನೆ 6

ಇಂದಿರಾ ಗಾಂಧಿ ಮತ್ತು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನಡುವೆ ಸಾಮ್ಯತೆ ಇದೆಯೇ?

ಪ್ರಶ್ನೆ 7

ಪ್ರಶ್ನೆ 7

ಇಂಥವರಿಗೆ ಬೆಂಬಲ ನೀಡುವುದನ್ನು ದೇಶ ಪ್ರೇಮ ಎಂದು ಕರೆಯಬೇಕೆ? ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲುವುದು ಸರಿಯೇ?

ಪ್ರಶ್ನೆ 8

ಪ್ರಶ್ನೆ 8

ಸಿಯಾಚಿನ್ ನಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ಹನುಮಂತಪ್ಪ ಮತ್ತು ಈ ಬಗೆಯ ಘೋಷಣೆ ಕೂಗುವವರನ್ನು ಒಂದೇ ರೀತಿಯಲ್ಲಿ ಕಾಣುತ್ತೀರಾ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Launching a scathing attack on Congress vice president Rahul Gandhi for his stand on the Jawaharlal Nehru University (JNU) row, Bharatiya Janata Party president Amit Shah on Monday framed 8 questions for him and Congress president Sonia Gandhi to answer.
Please Wait while comments are loading...