Get Updates
Get notified of breaking news, exclusive insights, and must-see stories!

ಕೇದರನಾಥ ಯಾತ್ರಾರ್ಥಿಗಳ ದೈನಂದಿನ ಮಿತಿ, ಪಾಲಿಸಬೇಕಾದ ಕೋವಿಡ್ ನಿಯಮಗಳು ಇಲ್ಲಿವೆ

ಕೇದಾರನಾಥ ಮೇ 6: ಶುಕ್ರವಾರ ಬೆಳಗ್ಗೆ ಕೇದಾರನಾಥ ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಪತ್ನಿ ಗೀತಾ ಧಾಮಿ ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ಧಾಮದ ಬಾಗಿಲು ತೆರೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಇಂದು ವೈದಿಕ ಪಠಣದೊಂದಿಗೆ ವರ್ಷಗಳ ಹಿಂದಿನ ಸಾಂಪ್ರದಾಯಿಕ ಆಚರಣೆಯ ನಂತರ ದೇವಾಲಯದ ಬಾಗಿಲು ತೆರೆಯಲಾಯಿತು. ಈ ವಿಶೇಷ ದಿನಕ್ಕಾಗಿ ದೇವಾಲಯವನ್ನು 15 ಕ್ವಿಂಟಾಲ್ ಹೂವುಗಳಿಂದ ಅಲಂಕರಿಸಲಾಗಿದೆ. ಕಳೆದ ವರ್ಷ ನವೆಂಬರ್ 6 ರಂದು ದೇವಾಲಯದ ದ್ವಾರಗಳು ಆರು ತಿಂಗಳ ಕಾಲ ಚಳಿಗಾಲಕ್ಕಾಗಿ ಮುಚ್ಚಲ್ಪಟ್ಟಿದ್ದವು. ಆರು ತಿಂಗಳ ಬಳಿಕ ಇಂದು ಕೇದಾರನಾಥ ದೇವಾಲಯವನ್ನು ತೆರೆಯಲಾಗಿದೆ.

ಮಂದಾಕಿನಿ ನದಿಯ ದಂಡೆಯ ಮೇಲಿರುವ ಕೇದಾರನಾಥ ದೇವಾಲಯವು ಯಮುನೋತ್ರಿ, ಗಂಗೋತ್ರಿ ಮತ್ತು ಬದರಿನಾಥವನ್ನು ಒಳಗೊಂಡಿರುವ ನಾಲ್ಕು ಪುರಾತನ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದರಿಂದ ಇದನ್ನು 'ಚಾರ್ ಧಾಮ್' ಎಂದು ಕರೆಯಲಾಗುತ್ತದೆ. ಎಂಟನೇ ಶತಮಾನದಲ್ಲಿ ಜಗದ್ ಗುರು ಆದಿ ಶಂಕರಾಚಾರ್ಯರಿಂದ ನಿರ್ಮಿಸಲ್ಪಟ್ಟ ಕೇದಾರನಾಥ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ ಎಂದು ನಂಬಲಾಗುತ್ತದೆ.

Kedarnath Dham opens from May 6: Check daily limit for pilgrims, other Covid rules

ಉತ್ತರಕಾಶಿ ಜಿಲ್ಲೆಯ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ಪೋರ್ಟಲ್‌ಗಳನ್ನು ತೆರೆಯುವುದರೊಂದಿಗೆ ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಮೇ 3 ರಂದು ವಾರ್ಷಿಕ ಚಾರ್‌ಧಾಮ ಯಾತ್ರೆ ಪ್ರಾರಂಭವಾಯಿತು. ಬದರಿನಾಥ ದೇವಾಲಯದ ಪೋರ್ಟಲ್‌ಗಳು ಮೇ 8 ರಂದು ತೆರೆಯಲ್ಪಡುತ್ತವೆ. ಈ ತಿಂಗಳ ಆರಂಭದಲ್ಲಿ ರಾಜ್ಯ ಸರ್ಕಾರವು ಚಾರ್ ಧಾಮ್‌ಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿದೆ.

Kedarnath Dham opens from May 6: Check daily limit for pilgrims, other Covid rules

ಪ್ರತಿದಿನ ಒಟ್ಟು 15,000 ಯಾತ್ರಾರ್ಥಿಗಳಿಗೆ ಬದರಿನಾಥ, 12,000 ಕೇದಾರನಾಥ, 7,000 ಗಂಗೋತ್ರಿ ಮತ್ತು 4,000 ಯಮುನೋತ್ರಿಯಲ್ಲಿ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. 45 ದಿನಗಳ ಕಾಲ ಈ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಯಾತ್ರಾರ್ಥಿಗಳು COVID-19 ಪರೀಕ್ಷಾ ವರದಿ ಅಥವಾ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಲ್ಲ. ಚಾರ್ ಧಾಮ್‌ಗಳು ದೇಶ ಮತ್ತು ವಿದೇಶಗಳಿಂದ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರನ್ನು ಸೆಳೆಯುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+