ಬಿಎಸ್ವೈಗೆ ಮತ್ತೊಂದು ರಿಲೀಫ್: 4 ಖಾಸಗಿ ದೂರು ರದ್ದು
ಬೆಂಗಳೂರು, ನವೆಂಬರ್, 30: ಮಾಜಿ ಮುಖ್ಯಮಂತ್ರಿ, ಸಂಸದ, ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತಷ್ಟು ರಿಲೀಫ್ ಸಿಕ್ಕಿದೆ. ಯಡಿಯೂರಪ್ಪ ಮೇಲೆ ಪ್ರಾಸಿಕ್ಯೂಷನ್ ನಡೆಸಲು ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದು ಮಾಡಿದ ಹಿನ್ನೆಲೆಯಲ್ಲಿ ಬಿಎಸ್ ವೈ ವಿರುದ್ಧ ದಾಖಲಾಗಿದ್ದ ನಾಲ್ಕು ಖಾಸಗಿ ದೂರುಗಳನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಅಕ್ರಮ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಸಿರಾಜಿನ್ ಬಾಷಾ ನಾಲ್ಕು ದೂರುಗಳನ್ನು ದಾಖಲಿಸಿದ್ದರು. ಬಿಎಸ್ ವೈ ವಿರುದ್ಧದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಹಾಗಾಗಿ ಬಿಎಸ್ ವೈ ವಿರುದ್ಧದ ದೂರುಗಳನ್ನು ರದ್ದುಗೊಳಿಸಬೇಕೆಂದು ವಕೀಲ ಸಿವಿ ನಾಗೇಶ್ ಲೋಕಾಯುತ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.[ಯಡಿಯೂರಪ್ಪಗೆ ರಿಲೀಫ್ ನೀಡಿದ 5 ಪ್ರಕರಣಗಳು ಯಾವುವು?]

ಬಿಎಸ್ ವೈ ಪರ ವಕೀಲರಾದ ಸಿವಿ ನಾಗೇಶ್ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ, ಗವರ್ನರ್ ಅನುಮತಿ ಇಲ್ಲದೆ ಕೇಸ್ ದಾಖಲಿಸುವಂತಿಲ್ಲ. ಹಾಗಾಗಿ ಬಿಎಸ್ ಯಡಿಯೂರಪ್ಪ ವಿರುದ್ಧದ ನಾಲ್ಕು ದೂರುಗಳನ್ನು ರದ್ದುಗೊಳಿಸಿರುವುದಾಗಿ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶರು ಸ್ಪಷ್ಟ ಆದೇಶ ನೀಡಿದ್ದಾರೆ.[ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಲು ಇಲ್ಲಿ ಸಹಿ ಹಾಕಿ]
ಬಿಎಸ್ ವೈಗೆ ಸುತ್ತಿಕೊಂಡಿದ್ದ ಒಂದೊಂದೆ ಪ್ರಕರಣಗಳು ಇದೀಗ ಮುಕ್ತಿ ಕಾಣುತ್ತಿವೆ. ಇದೆಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಯಡಿಯೂರಪ್ಪ ಡಿ ನೋಟಿಫಿಕೇಶನ್ ಭೂತದಿಂದ ಮುಕ್ತರಾದಂತೆ ತೋರುತ್ತಿದೆ.


Click it and Unblock the Notifications
