Karnataka CM: ನಿಮ್ ಹತ್ರ ಮಾತಾಡಲ್ಲ: ಮಾಧ್ಯಮಗಳ ವಿರುದ್ಧ ಡಿಕೆಶಿ ಮುನಿಸಿಕೊಂಡಿದ್ದೇಕೆ?

ಸಿಎಂ ಖುರ್ಚಿಗಾಗಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಣ ತಿಕ್ಕಾಟ ಜೋರಾಗಿದೆ. ಇಬ್ಬರೂ ನಾಯಕರು ಸಿಎಂ ಗಾದಿಗಾಗಿ ಭಾರಿ ಹೋರಾಟ ಮಾಡುತ್ತಿದ್ದರೂ, ಅದರ ಬಗ್ಗೆ ಎಲ್ಲಿಯೂ ಬಾಯ್ಬಿಟ್ಟಿಲ್ಲ. ಅದರಲ್ಲೂ ಸಿದ್ದರಾಮಯ್ಯ ಅಂತೂ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುವ ಗೋಜಿಗೆ ಹೋಗಿಲ್ಲ, ಪತ್ರಕರ್ತರು ಏನು ಕೇಳಿದ್ರೂ ಅದಕ್ಕೂ ನಂಗೂ ಸಂಬಂಧವೇ ಇಲ್ಲ ಎನ್ನುವಂತೆ ಸಿದ್ದರಾಮಯ್ಯ ವರ್ತಿಸಿದ್ದಾರೆ.

ಇನ್ನು ಡಿಕೆ ಶಿವಕುಮಾರ್ ಕೂಡ ಹತ್ತು ಪ್ರಶ್ನೆ ಕೇಳಿದ್ರ ಒಂದೇ ಉತ್ತರ ಅಷ್ಟೆ ಕೊಡ್ತಾ ಇದ್ದಾರೆ. ನಿನ್ನೆ ಅವರನ್ನು ಯಾರು ಏನೇ ಪ್ರಶ್ನೆ ಮಾಡಿದ್ರು, ನಾನು ಪಕ್ಷದ ದೇವಸ್ಥಾನಕ್ಕೆ ಬಂದಿದ್ದೇನೆ ಎಂದಷ್ಟೆ ಉತ್ತರ ನೀಡಿ ಸುಮ್ಮನಾಗಿದ್ದರು. ನಂತರ ಮಾಧ್ಯಮಗಳು ಕೂಡ ಸಿದ್ದರಾಮಯ್ಯ ಅವರೇ ಸಿಎಂ ಎಂದು ಸುದ್ದಿ ಬಿತ್ತರ ಮಾಡಿದ್ದವು.

Karnataka CM: DK Shivakumar Expresses Displeasure With The Media

ಸಿದ್ದರಾಮಯ್ಯ ಅವರೇ ಸಿಎಂ ಎನ್ನುವ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ, ಡಿಕೆ ಶಿವಕುಮಾರ್ ಹೈಕಮಾಂಡ್‌ ಮುಂದೆ ಬೇಡಿಕೆ ಇಟ್ಟಿದ್ದಾರೆ, ಡಿಕೆಶಿ ಯಾವುದಕ್ಕೂ ಬಗ್ತಿಲ್ಲ ಎನ್ನುವ ವರದಿಗಳು ಕೂಡ ಅವರನ್ನು ಕೆರಳುವಂತೆ ಮಾಡಿವೆ, ಇಂದು ಮಾಧ್ಯಮಗಳು ಅವರ ಬಳಿ ಪ್ರಶ್ನೆಗಳ ಸುರಿಮಳೆಗೈದರೂ ಡಿಕೆ ಶಿವಕುಮಾರ್ ಒಂದೇ ಮಾತಿನಲ್ಲಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ಸತ್ಯ ಬರೆಯಲ್ಲ ಎಂದ ಡಿಕೆಶಿ

ನೀವು ಯಾವುದು ಸತ್ಯ ಬರೆಯಲ್ಲ, ಎಲ್ಲಾ ಬೋಗಸ್ ಯಾವ್ದೋ ಫ್ರಾಡ್‌ಗಳು ಹೇಳಿದ್ದನ್ನೆಲ್ಲಾ ನ್ಯೂಸ್ ಮಾಡಿ ಮರ್ಯಾದೆ ಎಲ್ಲಾ ಕಳಿತಿದಿರಾ, ನಾನ್ ಏನೂ ಮಾತನಾಡಲ್ಲ ಎಂದು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಸಿದ್ದರಾಮಯ್ಯ ಅವರೆ ಸಿಎಂ ಎಂದ ಕಾಂಗ್ರೆಸ್ ಶಾಸಕರ ವಿರುದ್ಧವೂ ಅವರು ಗರಂ ಆಗಿದ್ದಾರೆ. ಹಲವು ಶಾಸಕರು ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೇಳಿಕೆ ನೀಡಿದ್ದು ಗೊಂದಲಕ್ಕೆ ಕಾರಣವಾಗಿತ್ತು, ಅಧಿಕೃತ ಹೇಳಿಕೆ ನೀಡುವ ಮುನ್ನವೇ ಯಾರೂ ಈ ವಿಚಾರದ ಬಗ್ಗೆ ಮಾತನಾಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ತಾಕೀತು ಮಾಡಿದೆ.

ಇನ್ನೂ ಎರಡು ದಿನ ಸಿಎಂ ಆಯ್ಕೆ ಪ್ರಹಸನ

ಸಿಎಂ ಆಯ್ಕೆ ಕಗ್ಗಂಟು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ, ರಣದೀಪ್ ಸಿಂಗ್ ಸುರ್ಜೆವಾಲಾ ಈ ಬಗ್ಗೆ ಮಾತನಾಡಿ ಇನ್ನು 48 ದಿನಗಳಲ್ಲಿ ಸಿಎಂ ಹೆಸರು ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಇನ್ನು 74 ಗಂಟೆಯ ಒಳಗೆ ಸಚಿವ ಸಂಪುಟ ವಿಸ್ತರಣೆ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+