ಕಾರ್ಗಿಲ್ ವಿಜಯ ದಿವಸ: ಟ್ವಿಟ್ಟರ್ ನಲ್ಲಿ ರೋಚಕ ದಿನದ ಮೆಲುಕು

Posted By:
Subscribe to Oneindia Kannada

"ನಾನೊಬ್ಬ ಅಪರಿಚಿತನಿಗಾಗಿ ನನ್ನ ಪ್ರಾಣವನ್ನು ಅರ್ಪಿಸಿದ್ದೇನೆ. ಆ ಅಪರಿಚಿತ ಬೇರಾರೂ ಅಲ್ಲ, ನೀನೇ!" ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನೊಬ್ಬನ ಸಮಾಧಿಯ ಮೇಲೆ ಬರೆದಿದ್ದ ಸಾಲುಗಳಿವು! ಆ ಸಾಲನ್ನು ಓದಿದ ಯಾರಿಗೆ ತಾನೇ ದುಃಖ ಉಮ್ಮಳಿಸದಿರಲು ಸಾಧ್ಯ?

ಕಾರ್ಗಿ‌ಲ್‌ ವಿಶೇಷ: ಕಾರ್ಗಿಲ್‌ ಯುದ್ಧ ಶಾಲೆ ವಿಶೇಷ ಏನು?

ನನಗಾಗಿ, ನನ್ನ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ರಾತ್ರಿ-ಹಗಲೆನ್ನದೆ ಶತ್ರು ರಾಷ್ಟ್ರದ ವೈರಿಗಳೊಂದಿಗೆ ಸೆಣೆಸಾಡುತ್ತಾನೆ, ಮಳೆ-ಚಳಿ ಎನ್ನದೆ ಗಡಿ ಕಾಯುತ್ತಾನೆ, ಹೊಟ್ಟೆಗೆ ಸರಿಯಾಗಿ ಆಹಾರವೇ ಸಿಕ್ಕದಿದ್ದರೂ ದೇಶಕ್ಕಾಗಿ ಹಪಹಪಿಸುತ್ತಾನೆ! ಕೊನೆಗೊಂದು ದಿನ ಮಡಿಯುತ್ತಾನೆ! ಎಂಥ ವಿಚಿತ್ರ? ಇಂಥವರ ಋಣ ತೀರಿಸುವುದಕ್ಕೆ ಯಾರಿಂದ ಸಾಧ್ಯ?

ಇಂದು(ಜುಲೈ 26) ಕಾರ್ಗಿಲ್ ವಿಜಯ ದಿವಸ. 1999 ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಯುದ್ಧದಲ್ಲಿ ಭಾರತ ದಿಗ್ವಿಜಯ ಸಾಧಿಸಿದ ದಿನ ಇದು. 1999 ರ ಮೇ ತಿಂಗಳಿನಿಂದ ಜುಲೈವರೆಗೆ ಸುಮಾರು 60 ದಿನಗಳ ಕಾಲ ನಡೆದ ಯುದ್ಧದಲ್ಲಿ ಭಾರತದ 527 ಸೈನಿಕರು ಹತರಾಗಿದ್ದರು.

'ದಿಕ್ಕೆಟ್ಟು ಓಡುತ್ತಿದ್ದ ನನ್ನನ್ನು ಜವಾನ ತಡೆಗಟ್ಟಿದ್ದ'

ಪಾಕಿಸ್ತಾನ ತನ್ನ 357 ಸೈನಿಕರು ಹತರಾಗಿದ್ದರೆಂದು ವರದಿ ನೀಡಿದ್ದರೂ, ಇದು ಸುಳ್ಳು ಎಂದು ಭಾರತ ತಳ್ಳಿಹಾಕಿತ್ತು. ಏಕೆಂದರೆ ಭಾರತೀಯ ಸೈನಿಕರೇ ಹೇಳುವ ಪ್ರಕಾರ ಪಾಕಿಸ್ತಾನದ ಕನಿಷ್ಠ1 ಸಾವಿರ ಸೈನಿಕರು ಈ ಯುದ್ಧದಲ್ಲಿ ಹತರಾಗಿದ್ದರು.

ಜಮ್ಮು ಕಾಶ್ಮೀರದ ಲಡಾಕ್ ಜಿಲ್ಲೆಯಲ್ಲಿರುವ ಕಾರ್ಗಿಲ್ ನಲ್ಲಿ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಸೇನೆಯನ್ನು ಬಗ್ಗುಬಡಿಯಯವ ಕಾರ್ಯಾಚರಣೆಗೆ ಭಾರತ ಇಟ್ಟಿದ್ದ ಹೆಸರು 'ಆಪರೇಶನ್ ವಿಜಯ'. ಅದಕ್ಕೆಂದೇ ಈ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಿದ ದಿನವಾದ ಜುಲೈ 26 ಅನ್ನು ಕಾರ್ಗಿಲ್ ವಿಜಯ ದಿವಸ ಎಂದು ಕರೆಯಲಾಗುತ್ತದೆ.

ಬೇಗನೆ ಔಷಧಿ ಹಚ್ಚಿ, ಯುದ್ದಕ್ಕೆ ಹೋಗಬೇಕು

ಕಾರ್ಗಿಲ್ ಯುದ್ಧದ ನಂತರ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಸಂಪೂರ್ಣ ಹದಗೆಟ್ಟಿತ್ತು. ವಿಶ್ವದ ಬಹುಪಾಲು ದೇಶಗಳು ಭಾರತದ ಬೆಂಬಲಕ್ಕೇ ನಿಂತಿದ್ದವು. ಕಾರ್ಗಿಲ್ ಯುದ್ಧ ಗೆದ್ದು ಈಗಾಗಲೇ 18 ವರ್ಷ ಕಳೀದಿದೆ. ಆದರೂ ಪ್ರತಿ ವರ್ಷ ಜುಲೈ 26 ರಂದು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿ, ನಮ್ಮ ನಮನ ಸಲ್ಲಿಸುತ್ತೇವೆ. ದೇಶದ ಗಣ್ಯಾತಿಗಣ್ಯರೂ ಇಂದು ಕಾರ್ಗಿಲ್ ವಿಜಯ ದಿವಸವನ್ನು ನೆನಪಿಸಿಕೊಂಡು ಸೈನಿಕರ ಬಲಿದಾನವನ್ನು ಕೊಂಡಾಡಿ, ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ನಮ್ಮ ಸೈನಿಕರು ನಮ್ಮ ಹೆಮ್ಮೆ

ಕಾರ್ಗಿಲ್ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಮತ್ತು ಭಾರತೀಯರ ರಕ್ಷಣೆಗೆ ಕಟಿಬದ್ಧರಾದ ನಮ್ಮ ಸೈನಿಕರು ನಮ್ಮ ದೇಶದ ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ.

ಮಹಾ ಬಲಿದಾನವನ್ನು ನೆನಪಿಸಿಕೊಳ್ಳುತ್ತೇನೆ

ಈ ದೇಶಕ್ಕಾಗಿ ಶೌರ್ಯದಿಂದ ಹೋರಾಡಿದವರಿಗೆ ನಾನು ನಮಸ್ಕರಿಸುತ್ತೇನೆ, ಮತ್ತು ಕಾರ್ಗಿಲ್ ವಿಜಯ ದಿವಸದ ಈ ದಿನ ಅವರ ಮಹಾ ಬಲಿದಾನವನ್ನು ನೆನಪಿಸಿಕೊಳ್ಳುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ವಿಶ್ವಾಸ ತುಂಬಿದಕ್ಕೆ ಕೃತಜ್ಞತೆಗಳು

ಭಾರತೀಯ ಸೇನೆಯ ತ್ಯಾಗ ಮತ್ತು ಶೌರ್ಯವನ್ನು ನಾನಿಂದು ನೆನಪಿಸಿಕೊಳ್ಳುತ್ತೇನೆ. ಹಾಗೆಯೇ ಶತ್ರುಗಳನ್ನು ಹಿಮ್ಮೆಟ್ಟಿಸಿ, ನಮ್ಮಲ್ಲಿ ವಿಶ್ವಾಸ ತುಂಬಿದ ಅವರಿಗೆ ಕೃತಜ್ಞತೆಗಳು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಟ್ವೀಟ್ ಮಾಡಿದ್ದಾರೆ.

ಸೇನಾ ಇತಿಹಾಸದ ಪರ್ವಕಾಲ

ಕಾರ್ಗಿಲ್ ವಿಜಯ ದಿವಸ ಎಂಬುದು ಭಾರತೀಯ ಸೇನಾ ಇತಿಹಾಸದ ಪರ್ವಕಾಲ. ಎಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ಯುದ್ಧ ಗೆದ್ದ ನಮ್ಮವರ ಶೌರ್ಯಕ್ಕೆ ಸಲಾಂ ಎಂದು ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಅವರು ಟ್ವೀಟ್ ಮಾಡಿದ್ದಾರೆ.

India Salutes Martyrs 18 th Kargil Vijay Diwas | Oneindia Kannada

ಸೈನಿಕರ ನೆನೆಯೋಣ

ದೇಶ ಸೇವೆಗಾಗಿ ಬಲಿದಾನ ಮಾಡಿದ ನಮ್ಮ ವೀರ ಸೈನಿಕರನ್ನು ಈ ದಿನ ನೆನೆಯೋಣ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನಹಾಜ್ ಹುಸೇನ್ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Kargil Vijay Diwas reminds us of India’s military prowess & the great sacrifices our armed forces make while steadfastly keeping India safe." Prime minister Narendra Modi tweeted. Many famous personalities salute our brave sodliers on the occation of Kargil Vijay Diwas on July 26th.
Please Wait while comments are loading...