ಕಾಂತಾರ ರಿಷಬ್ ಶೆಟ್ಟಿ ಜೊತೆ ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾ?

ಕಾಂತಾರ ಸಿನಿಮಾ ಬಳಿಕ ನಟ ರಿಷಬ್ ಶೆಟ್ಟಿ ಇದೀಗ, ವರ್ಲ್ಡ್ ಲೆವೆಲ್ ಸ್ಟಾರ್ ಆಗಿದ್ದಾರೆ. ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾ ಕೂಡ ಸಾಕಷ್ಟು ಗಮನ ಸೆಳೆದಿದೆ. ತೆರೆಯ ಮೇಲೆ ಮತ್ತೆ ಕಮಾಲ್ ಮಾಡಲು ರಿಷಬ್ ಶೆಟ್ಟಿ ಸಜ್ಜಾಗಿದ್ದಾರೆ. ಹೀಗಿದ್ದಾಗ, ರಿಷಬ್ ಶೆಟ್ಟಿ ಅವರ ಜೊತೆಗೆ ನಿಖಿಲ್ ಕುಮಾರಸ್ವಾಮಿ ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಭಾರಿ ಕುತೂಹಲ ಮೂಡಿದೆ.

ರಿಷಬ್ ಶೆಟ್ಟಿ ಅವರು ಏನೇ ಮಾಡಿದ್ರೂ ವಿಶಿಷ್ಟವಾಗಿ ಮಾಡ್ತಾರೆ. ಹೀಗಾಗಿ ಅವರ ಸಕ್ಸಸ್ ರೇಟ್ ಹೆಚ್ಚಾಗಿದೆ. ಪ್ರತಿ ಹೆಜ್ಜೆಯಲ್ಲೂ ಅವರು ಅದ್ಭುತ ಆಯ್ಕೆ ಎದುರು ನೋಡುತ್ತಾರೆ. ಇಂತಿಪ್ಪ, ರಿಷಬ್ ಶೆಟ್ಟಿ ಈಗ ನಿಖಿಲ್ ಕುಮಾರಸ್ವಾಮಿ ಜೊತೆಗೆ ಸಿನಿಮಾ ಮಾಡ್ತಾರಾ? ಅನ್ನೋ ಡೌಟ್ & ಕುತೂಹಲ ಕೆರಳಿದೆ. ಅದರಲ್ಲೂ ನಟ ನಿಖಿಲ್ ಕುಮಾರಸ್ವಾಮಿ ಜೊತೆಗಿನ ರಿಷಬ್ ಶೆಟ್ಟಿ ಫೋಟೋ ಈಗ ಫುಲ್ ವೈರಲ್ ಆಗಿದೆ. ಹಾಗಾದ್ರೆ ಈ ಫೋಟೋ ಹಿಂದಿನ ಅಸಲಿ ಕಹಾನಿ ಏನು? ಬನ್ನಿ ತಿಳಿಯೋಣ.

Kantara Star Rishab Shetty Meets Nikhil Kumaraswamy In The Ayodhya

ರಿಷಬ್ ಶೆಟ್ಟಿ ಜೊತೆಗೆ ನಿಖಿಲ್!

ಎಲ್ಲಿ ಕೇಳಿದರೂ ಶ್ರೀರಾಮನ ಹೆಸರೇ ಕಿವಿಗೆ ಬೀಳುತ್ತಿದೆ. ಈ ವೇಳೆ, ಇಡೀ ದೇಶಕ್ಕೆ ದೇಶವೇ ರಾಮನ ಹೆಸರಲ್ಲಿ ಮಿಂದು ಹೋಗಿದೆ. 'ರಾಮ ಬಂದರೆ ದೀಪಾವಳಿ' ಅಂತಾ ಇಂದು ದೀಪ ಬೆಳಗಿಸಿ ಸಂಭ್ರಮಿಸಲು ಜನ ಕೂಡ ಸಿದ್ಧತೆ ನಡೆಸಿದ್ದಾರೆ. ಅಯೋಧ್ಯೆಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಜನ ಕಾದಿದ್ದರು. ಇದೀಗ ಅದೆಲ್ಲವೂ ಅದ್ಧೂರಿಯಾಗಿ ನಡೆದು ಹೋಗಿದೆ. ಇದೇ ಸಮಯದಲ್ಲಿ ನಟ ರಿಷಬ್ ಶೆಟ್ಟಿ & ನಿಖಿಲ್ ಕುಮಾರಸ್ವಾಮಿ ಕೂಡ ಭೇಟಿ ಮಾಡಿದ್ದಾರೆ!

ಹೌದು, ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಹಲವು ಬಾಲಿವುಡ್ & ಭಾರತದ ವಿವಿಧ ಸಿನಿಮಾ ರಂಗದ ನಟ ಮತ್ತು ನಟಿಯರು ಹಾಜರಿದ್ದರು. ಅದೇ ರೀತಿ, ಕನ್ನಡಿಗರ ರಿಷಬ್ ಶೆಟ್ಟಿ ಕೂಡ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ಈ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ತಮ್ಮ ತಾತ ದೇವೇಗೌಡರು ಸೇರಿದಂತೆ ತಮ್ಮ ತಂದೆ ಕುಮಾರಸ್ವಾಮಿ ಅವರ ಜೊತೆ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದಾರೆ.

Kantara Star Rishab Shetty Meets Nikhil Kumaraswamy In The Ayodhya

ರಾಮನ ಜನ್ಮಸ್ಥಳದಲ್ಲಿ ಇಬ್ಬರ ಭೇಟಿ

ಹೀಗೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯಲು ರಿಷಬ್ ಶೆಟ್ಟಿ ಅವ್ರು ಬಂದಿದ್ದರು. ಈ ವೇಳೆ ಇಬ್ಬರು ಕನ್ನಡ ಸಿನಿಮಾ ರಂಗದ ನಟರ ಭೇಟಿ ಆಗಿದೆ. ಹೀಗೆ ಭೇಟಿ ಆದ ಇಬ್ಬರು ಫೋಟೋಗು ಪೋಸ್ ಕೊಟ್ಟಿದ್ದಾರೆ. ಇದೀಗ ರಿಷಬ್ ಶೆಟ್ಟಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರ ಫೋಟೋ ವೈರಲ್ ಆಗುತ್ತಿದೆ. ಹಾಗೇ ಈ ಫೋಟೋ ಬಗ್ಗೆ ಚರ್ಚೆ ಜೋರಾಗುತ್ತಿದ್ದು, ಅಭಿಮಾನಿಗಳು ಇಬ್ಬರೂ ಒಟ್ಟಿಗೆ ಸಿನಿಮಾ ಮಾಡ್ತಾರಾ? ಅಂತಾ ಚರ್ಚಿಸುತ್ತಿದ್ದಾರೆ.

ಕಾಂತಾರ ಅಬ್ಬರಕ್ಕೆ ಜಗತ್ತು ತತ್ತರ!

2022ರಲ್ಲಿ ರಿಲೀಸ್ ಆದ ರಿಷಬ್ ಶೆಟ್ಟಿ ಅಭಿನಯಿಸಿ & ನಿರ್ದೇಶನ ಮಾಡಿದ್ದ ಕಾಂತಾರ ಸಿನಿಮಾ ದೊಡ್ಡ ಸಕ್ಸಸ್ ಕಂಡಿದೆ. ಈ ಸಿನ್ಮಾ ಮೂಲಕ ರಿಷಬ್ ಈಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದಾರೆ. ಸದ್ಯಕ್ಕೆ ರಿಷಬ್ 'ಕಾಂತಾರಾ ಎ ಲೆಜೆಂಡ್: ಅಧ್ಯಾಯ 1'ರ ನಿರ್ಮಾಣದಲ್ಲಿ ಬ್ಯುಸಿ. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ರಿಷಬ್ & ನಿಖಿಲ್ ಭೇಟಿ ಕೂಡ ಕುತೂಹಲ ಕೆರಳಿಸಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಕನ್ನಡದ ಇಬ್ಬರು ನಟರು ಭೇಟಿ ಮಾಡಿ ಕುತೂಹಲವನ್ನ ಕೆರಳಿಸಿದ್ದಾರೆ. ಹಾಗೇ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಸಾಲು ಸಾಲು ಚಿತ್ರಗಳನ್ನು ತೆರೆ ಮೇಲೆ ತರಲು ಸಜ್ಜಾಗಿದ್ದಾರೆ. ಹೀಗಿದ್ದಾಗ ಕಾಂತಾರ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಹಾಗೇ ನಿಖಿಲ್ ಅವರು ಕೂಡ 2024ರಲ್ಲಿ ಹಲವಾರು ಪ್ರಾಜೆಕ್ಟ್‌ಗಳನ್ನ ತಮ್ಮ ಕೈಗೆತ್ತಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+