ಕನ್ನಡಿಗ ವೈದ್ಯರಿಂದ ಮೆಟ್ರೋದಲ್ಲಿ "ಜೀವಂತ ಹೃದಯ"ದ ಸಾಗಾಟ ದೇಶದಲ್ಲೇ ಮೊದಲು!
ದೇಶದಲ್ಲೇ ಮೊದಲ ಬಾರಿ ಹೈದರಾಬಾದ್‌ನ ಮೆಟ್ರೋದಲ್ಲಿ ಗ್ರೀನ್ ಕಾರಿಡಾರ್ ರಚನೆ ಮಾಡಿ ಜೀವಂತ ಹೃಯವನ್ನು ತೆಗೆದುಕೊಂಡು ಹೋಗಲಾಗಿದೆ. ಈ ರೀತಿ ಜೀವಂತ ಹೃದಯವನ್ನು ಮೆಟ್ರೋದಲ್ಲಿ ಸಾಗಿಸಿರುವುದು ಇದೇ ಮೊದಲ ಬಾರಿ. ಈ ವಿಶೇಷ ಬೆಳವಣಿಗೆ ಕನ್ನಡಿಗ ವೈದರ ನೇತೃತ್ವದ ನಡೆದಿದೆ. ಕರ್ನಾಟಕದ ವೈದರ ಮುಂದಾಳತ್ವದಲ್ಲಿ ಹೈದರಾಬಾದ್‌ನಲ್ಲಿ ಈ ರೀತಿ ಜೀವಂತ ಹೃದಯವನ್ನು ಸಾಗಿಸಲಾಗಿದ್ದು. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಜನರ ಮನಸ್ಸು ಗೆದ್ದಿದೆ. ಜೀವಂತ ಹೃದಯವನ್ನು ಜೋಪಾನವಾಗಿ ಮೆಟ್ರೋದಲ್ಲಿ ತೆಗೆದುಕೊಂಡು ಹೋಗಲಾಗಿದೆ. ಈ ವೈದ್ಯರ ತಂಡದಲ್ಲಿ ಕನ್ನಡಿಗರೂ ಇದ್ದರು ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಅಮೂಲ್ಯ ಜೀವವೊಂದನ್ನು ಉಳಿಸಲಾಗಿದೆ.
ಅಪಘಾತವೊಂದರಲ್ಲಿ ಮೆದುಳುನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಅಂಗಾಂಗವನ್ನು ದಾನ ಮಾಡಲಾಗಿದೆ. ಜೀವಂತ ಹೃದಯವನ್ನು ಧಾರವಾಡ ಮೂಲದ ವೈದ್ಯರಾದ ಡಾ. ಅಜಯ್ ಜೋಶಿ ಅವರು 13 ಕಿ.ಮೀಟರ್ ದೂರದ ಆಸ್ಪತ್ರೆಗೆ ಕೇವಲ 13 ನಿಮಿಷದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಮೆಟ್ರೋದಲ್ಲಿ ಈ ರೀತಿ ಅಂಗಾಂಗವನ್ನು ತೆಗೆದುಕೊಂಡು ಹೋಗುತ್ತಿರುವುದು ಇದೇ ಮೊದಲು. ಈ ರೀತಿ ಅಂಗಾಂಗವನ್ನು ಮೆಟ್ರೋದಲ್ಲಿ ತೆಗೆದುಕೊಂಡು ಹೋಗಿರುವುದು ಅಚ್ಚರಿ ಹಾಗೂ ಹೆಮ್ಮೆಗೆ ಕಾರಣವಾಗಿದೆ.

ನೆರೆಯ ತೆಲಂಗಾಣದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಕುಟುಂಬಸ್ಥರು ಅವರ ಅಂಗಾಂಗವನ್ನು ದಾನ ಮಾಡುವುದಕ್ಕೆ ನಿರ್ಧರಿಸಿದ್ದರು. ಡಾ.ಅಜಯ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ಗ್ಲೇನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯ ರೋಗಿಯೊಬ್ಬರಿಗೆ ಹೃದಯ ಕಸಿ ಮಾಡುವುದು ಅವಶ್ಯವಾಗಿತ್ತು. ಕೂಡಲೇ ಡಾ.ಅಜಯ್ ಅವರು ಕಾಮಿನೇನಿ ಆಸ್ಪತ್ರೆಯಿಂದ ತಮ್ಮ ಆಸ್ಪತ್ರೆಗೆ ಜೀವಂತ ಹೃದಯ ತೆಗೆದುಕೊಂಡು ಹೋಗುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಕೇವಲ 13 ನಿಮಿಷದಲ್ಲಿ ಹೈದರಾಬಾದ್‌ನಲ್ಲೇ ಇರುವ 13 ಕಿ. ಮೀಟರ್ ದೂರದ ಆಸ್ಪತ್ರೆಗೆ ಹೃದಯವನ್ನು ತೆಗೆದುಕೊಂಡು ಹೋಗಲಾಗಿದೆ. ಮೆಟ್ರೊ ಮಾರ್ಗದಲ್ಲಿ ಗ್ರೀನ್ ಕಾರಿಡಾರ್ ನಿರ್ವಹಿಸಿ ಮೆಟ್ರೊ ಮುಖಾಂತರವೇ ಹೃದಯವನ್ನು ತಮ್ಮ ಆಸ್ಪತ್ರೆಗೆ ತೆಗದುಕೊಂಡು ಹೋಗಲಾಗಿದೆ. ಆ ಮೂಲಕ ದೇಶದಲ್ಲೇ ಮೊದಲ ಬಾರಿಗೆ ಮೆಟ್ರೊದಲ್ಲಿ ಹೃದಯ ಸಾಗಾಟ ಮಾಡಿದ ಹೆಗ್ಗಳಿಕೆಗೆ ಹೈದರಾಬಾದ್ ಮೆಟ್ರೋ ಪಾತ್ರವಾಗಿದ್ದಾರೆ.
ಧಾರವಾಡ ಮೂಲದ ವೈದ್ಯರಾದ ಡಾ.ಅಜಯ್ ಜೋಶಿ ಅವರ ನೇತೃತ್ವದಲ್ಲಿ ಈ ಕೆಲಸ ಆಗಿದೆ. ಅಜಯ್ ಅವರು ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್‌ನ ಗ್ಲೇನ್ ಗೆಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಹೃದಯ ಮತ್ತು ಶ್ವಾಸಕೋಶ ಕಸಿ ತಜ್ಞರಾಗಿದ್ದಾರೆ. ಅವರ ಪತ್ನಿ ಕೂಡ ಹೈದರಾಬಾದ್‌ನಲ್ಲಿ ಸ್ತ್ರೀರೋಗ ತಜ್ಞೆಯಾಗಿ ಕೆಲಸ ಮಾಡುತ್ತಿದ್ದಾರೆ.
ಅಲ್ಲದೇ ಈ ರೀತಿ ಜೀವಂತ ಹೃದಯವನ್ನು ತೆಗೆದುಕೊಂಡು ಹೋಗಿರುವ ವಿಷಯ ದೇಶಮಟ್ಟದಲ್ಲಿ ಗಮನಸೆಳೆದಿದೆ. ಹುಬ್ಬಳ್ಳಿ, ಧಾರವಾಡದಲ್ಲೇ ಶಿಕ್ಷಣ ಪೂರೈಸಿರುವ ಡಾ.ಅಜಯ್, ಯುಕೆಯಲ್ಲಿ ಶ್ವಾಸಕೋಶ ಮತ್ತು ಹೃದಯ ಕಸಿ ಚಿಕಿತ್ಸೆ ಕುರಿತು ಉನ್ನತ ಶಿಕ್ಷಣ ಪಡೆದಿದ್ದಾರೆ. ಡಾ.ಅಜಯ್ ಅವರ ಪಾಲಕರು ಹುಬ್ಬಳ್ಳಿಯ ನವನಗರದಲ್ಲಿ ವಾಸವಿದ್ದಾರೆ.
ದೇಶದ ಗಮನ ಸೆಳೆದ ಘಟನೆ: ಇನ್ನು ಈ ರೀತಿ ಹೈದರಾಬಾದ್‌ನಲ್ಲಿ ಜೀವಂತ ಹೃದಯವನ್ನು ಮೆಟ್ರೋದಲ್ಲಿ ಸಾಗಿಸಿರುವುದು ದೇಶದ ಗಮನ ಸೆಳೆದಿದೆ.












Click it and Unblock the Notifications