ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ನೀರಾ ಮತ್ತೆ ಯಾರ ಫೋಟೋಕ್ಕೂ ಹಾರ ಹಾಕ್ಬೇಡಮ್ಮ"

By Mahesh
|
Google Oneindia Kannada News

ರಾಂಚಿ, ಜುಲೈ 28: ಜಾರ್ಖಂಡ್ ರಾಜ್ಯದ ಶಿಕ್ಷಣ ಸಚಿವೆ ನೀರಾ ಯಾದವ್ ಅವರು ಕಳೆದ ವಾರ ದೊಡ್ಡ ಪ್ರಮಾದ ಎಸಗಿದ್ದು ಎಲ್ಲರಿಗೂ ನೆನಪಿರಬಹುದು. ಕಾರ್ಯಕ್ರಮವೊಂದರಲ್ಲಿ ಡಾ. ಅಬ್ದುಲ್ ಕಲಾಂ ಅವರು ಬದುಕಿದ್ದಾಗಲೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು. ಈಗ ಕಲಾಂ ಅಗಲಿಕೆಯ ನಂತರವೂ ಆಕೆಯನ್ನು ಟ್ವಿಟ್ಟರ್ ಲೋಕದಲ್ಲಿ ಕಾಡಲಾಗುತ್ತಿದೆ.[ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

ಮೇಡಂ ನೀರಾ ಯಾದವ್ ಅವರೇ ದಯವಿಟ್ಟು ಯಾರ ಭಾವಚಿತ್ರಕ್ಕೂ ಇನ್ಮುಂದೆ ಮುಂಚಿತವಾಗಿ ಹಾರ ಹಾಕಬೇಡಿ. ನೀವು ಶಿಕ್ಷಣ ಸಚಿವೆಯೋ ಅಥವಾ ಜ್ಯೋತಿಷಿಯೋ ಗೊತ್ತಾಗುತ್ತಿಲ್ಲ. ಭವಿಷ್ಯದ ಬಗ್ಗೆ ನಿಮಗೆ ಮೊದಲು ತಿಳಿದಿರುವಂತಿದೆ ಎಂದು ಹಲವಾರು ಮಂದಿ ಟ್ವೀಟ್ ಮಾಡಿದ್ದಾರೆ. [ಸರಳ ವ್ಯಕ್ತಿತ್ವದ ಅಬ್ದುಲ್ ಕಲಾಂ ಸಂಕ್ಷಿಪ್ತ ಪರಿಚಯ]

ಜುಲೈ22 ರಂದು ಜಾರ್ಖಂಡ್ ನ ಹಜಾರಿಬಾಗ್ ಜಿಲ್ಲೆಯ ಶಾಲಾ ಕಾರ್ಯಕ್ರಮವೊಂದರಲ್ಲಿ ಸಚಿವೆ ನೀರಾ ಅವರು ಕಲಾಂ ಅವರ ಚಿತ್ರಕ್ಕೆ ತಿಲಕ ಇಟ್ಟು, ಶ್ರದ್ಧಾಂಜಲಿ ಅರ್ಪಿಸಿದ್ದರು. ['ಕ್ಷಿಪಣಿ ಮಾನವ' ಎಪಿಜೆ ಅಬ್ದುಲ್ ಕಲಾಂ ವಿಧಿವಶ]

ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಸತ್ತವರ ಚಿತ್ರಕೆಕ್ ಮಾತ್ರ ತಿಲಕ ಇಟ್ಟು ಹಾರ ಹಾಕಿ ಶ್ರದ್ಧಾಂಜಲಿ ನೀಡಲಾಗುತ್ತದೆ. ಅದರೆ, ಈ ಘಟನೆ ನಡೆದಾಗ ಕಲಾಂ ಅವರು ಇನ್ನೂ ಆರೋಗ್ಯದಿಂದ ಇದ್ದರು. ಕಳೆದ ವಾರವೇ ನೀರಾ ಅವರ ವಿರುದ್ಧ ಟ್ವೀಟ್ ಲೋಕ ತಿರುಗಿ ಬಿದ್ದಿತ್ತು. ಈಗ ಮತ್ತೊಮ್ಮೆ ನೀರಾರನ್ನು ಹಿಗ್ಗಾ ಮುಗ್ಗಾ ಟ್ವೀಟ್ ನಿಂದ ಥಳಿಸಲಾಗುತ್ತಿದೆ.

ಕ್ಷಮೆಯಾಚಿಸಿದರೂ ಸಮರ್ಥನೆ ಕೊಟ್ಟಿದ್ದ ಮೀರಾ

ಕ್ಷಮೆಯಾಚಿಸಿದರೂ ಸಮರ್ಥನೆ ಕೊಟ್ಟಿದ್ದ ಮೀರಾ

ತಾವು ಮಾಡಿದ ಪ್ರಮಾದಕ್ಕೆ ಕ್ಷಮೆಯಾಚಿಸಿದರೂ, ಸಮರ್ಥನೆ ಕೊಟ್ಟಿದ್ದ ಮೀರಾ ಅವರು, ಹಿರಿಯರಿಗೆ ಈ ರೀತಿ ಗೌರವ ಕೊಡುವುದರಲ್ಲಿ ತಪ್ಪೇನಿಲ್ಲ ಎಂದಿದ್ದರು.

ಟ್ವಿಟ್ಟರ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಚಿತ್ರ

ಟ್ವಿಟ್ಟರ್ ನಲ್ಲಿ ಮೊದಲಿಗೆ ಕಾಣಿಸಿಕೊಂಡ ಚಿತ್ರ ಸ್ಥಳೀಯ ಪತ್ರಿಕೆ ಪ್ರಭಾತ್ ಕಬರ್ ನಲ್ಲಿ ಪ್ರಕಟವಾಗಿದ್ದಾಗಿದೆ.

ಹಿಂದೂ, ಮುಸ್ಲಿಂ ಶ್ರದ್ಧಾಂಜಲಿ ವಿಧಾನ

ಹಿಂದೂ, ಮುಸ್ಲಿಂ ಶ್ರದ್ಧಾಂಜಲಿ ವಿಧಾನಗಳನ್ನು ವಿವರಿಸಿದ ಸಾರ್ವಜನಿಕರು.

ದೇಶದ ಶಿಕ್ಷಣ ವ್ಯವಸ್ಥೆ ಹೇಗಿದೆ

ದೇಶದ ಶಿಕ್ಷಣ ವ್ಯವಸ್ಥೆ ಹೇಗಿದೆ ನೋಡಿ, ಶಿಕ್ಷಣ ಸಚಿವೆ ಮಾಡಿದ ಕೃತ್ಯಕ್ಕೆ ಜೈ ಹೋ

ಮೋದಿ ಸಂಪುಟದಲ್ಲಿ ಆಕೆಗೆ ಸ್ಥಾನ ಕಲ್ಪಿಸಿ

ಮೋದಿ ಸಂಪುಟದಲ್ಲಿ ಆಕೆಗೆ ಸ್ಥಾನ ಕಲ್ಪಿಸಿ, ಜ್ಯೋತಿಷ್ಯ ಖಾತೆ ಕೊಟ್ಟುಬಿಡಿ.

ಯಾರದು ಕಲಾಂಗೆ ಹಾರ ಹಾಕಿ ನಮಿಸಿದ್ದು

ಯಾರದು ಕಲಾಂಗೆ ಹಾರ ಹಾಕಿ ನಮಿಸಿದ್ದು, ಆಕೆಗೆ ಹೇಳಿ ಯಾರಿಗೂ ಬದುಕಿದ್ದಾಗ ಹಾರ ಹಾಕ್ಬೇಡ ಎಂದು.

ಛೇ ಎಂಥಾ ಪ್ರಮಾದ ಮಾಡಿಬಿಟ್ಟರು

ಛೇ ಎಂಥಾ ಪ್ರಮಾದ ಮಾಡಿಬಿಟ್ಟರು, ಆರು ದಿನಗಳಲ್ಲೇ ಕಲಾಂ ಅವರು ಇಹಲೋಕ ತ್ಯಜಿಸಿದರು.

ಯಾರಾದ್ರು ನೀರಾ ಅವರ ಸಂದರ್ಶನ ಮಾಡುತ್ತೀರಾ?

ಯಾರಾದ್ರು ನೀರಾ ಅವರ ಸಂದರ್ಶನ ಮಾಡುತ್ತೀರಾ? ಆಕೆ ಈಗ ಏನು ಹೇಳುತ್ತಾರೆ ಕೇಳಬೇಕು.

English summary
Twitterati Calls Jharkhand Education Minister Neera yadav as Astrology Minister for Paying Homage to APJ Abdul Kalam in advance. Here are the tweets about this incidence and reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X