ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕ್ಷಿಪಣಿ ಮಾನವ' ಎಪಿಜೆ ಅಬ್ದುಲ್ ಕಲಾಂ ವಿಧಿವಶ

By Mahesh
|
Google Oneindia Kannada News

ಶಿಲ್ಲಾಂಗ್, ಜುಲೈ 27 : ಭಾರತರತ್ನ, ಕ್ಷಿಪಣಿ ಮಾನವ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಸೋಮವಾರ ಸಂಜೆ ವಿಧಿವಶವಾಗಿದ್ದಾರೆ.. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದರು. [ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]

"I love teaching and I love to be a teacher" ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಹೇಳುತ್ತಿದ್ದ ಕಲಾಂ ಅವರು ತಾವು ಬಯಸಿದ್ದಂತೆ ಮರಣವನ್ನಪ್ಪಿದ್ದಾರೆ.

Former President Missile Man Bharat Ratna APJ Abdul Kalam Passes Away

'ನಾನು ಯಾವುದೇ ಕಾಯಿಲೆಗೆ ತುತ್ತಾಗಿ ಸಾವು ಕಾಣಬಾರದು' ಎಂದು ಬಯಸಿದ್ದರು. ಅದರಂತೆ, ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನ ಐಐಎಂನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವಾಗ ಕುಸಿದು ಬಿದ್ದರು.[ಅಂದಿನಿಂದ ಇಂದಿನವರೆಗೆ ನಮ್ಮ ರಾಷ್ಟ್ರಪತಿಗಳು]

ಅಬ್ದುಲ್ ಕಲಾಂ ಅವರ ನಿಧನಕ್ಕೆ ದೇಶದೆಲ್ಲೆಡೆಯಿಂದ ಸಂತಾಪ ಸಂದೇಶಗಳು ಹರಿದು ಬರುತ್ತಿವೆ. ತಮಿಳುನಾಡಿನ ರಾಮೇಶ್ವರಂನಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಅಬ್ದುಲ್ ಅವರು ಇಸ್ರೋ, ಡಿಆರ್ ಡಿಒ ವಿಜ್ಞಾನಿಯಾಗಿ ಭಾರತದ ಕ್ಷಿಪಣಿ ನಿರ್ಮಾತೃವಾಗಿ, ಗುರುವಾಗಿ ಬೆಳೆದರು. ಭಾರತವನ್ನು ವೈಜ್ಞಾನಿಕವಾಗಿ ಶೈಕ್ಷಣಿಕವಾಗಿ ಬೆಳೆಸಿದರು.

ಶೋಕಾಚರಣೆ: ದೇಶದ ಜನತೆಗೆ ಆದರ್ಶಪ್ರಾಯವಾಗಿದ್ದ ಅಬ್ದುಲ್ ಕಲಾಂ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ದೇಶದೆಲ್ಲೆಡೆ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಮಂಗಳವಾರ (ಜುಲೈ 28) ಸರ್ಕಾರಿ ಶಾಲಾ, ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಿದ್ದನ್ನು ರದ್ದುಪಡಿಸಲಾಯಿತು. ಕಲಾಂ ಆಶಯದಂತೆ ರಜೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಲಾಗಿದೆ. [ವಿವರ ಇಲ್ಲಿದೆ ನೋಡಿ]

ಅಂತ್ಯ ಸಂಸ್ಕಾರ: ಅಬ್ದುಲ್ ಕಲಾಂ ಅವರ ಪಾರ್ಥೀವ ಶರೀರವನ್ನು ಶಿಲ್ಲಾಂಗ್ ನಿಂದ ಮಂಗಳವಾರ ಬೆಳಗ್ಗೆ 6.30ಕ್ಕೆ ನವದೆಹಲಿಗೆ ಕರೆ ತರಲಾಗುತ್ತದೆ. ದೆಹಲಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಕಲಾಂ ಅವರ ಹುಟ್ಟೂರು ರಾಮೇಶ್ವರಂನಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಜನ ಸಾಮಾನ್ಯರ ಪ್ರಥಮ ಪ್ರಜೆ: 1998ರಲ್ಲಿ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ಯಶಸ್ಸು ಪಡೆದ ಅಬ್ದುಲ್ ಕಲಾಂ ಅವರು 2002 ರಿಂದ 2007 ರ ತನಕ ದೇಶದ 11 ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದರು. ಕಲಾಂ ಅವರ ಕಟ್ಟಕಡೆಯ ಟ್ವೀಟ್:

ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ಸದಾ ಕಾಲ ತಮ್ಮ ಗುರು ಶಿವಶಂಕರ್ ಅಯ್ಯರ್, ರೆ. ಫಾದರ್ ಚಿನ್ನದೊರೈ ಅವರನ್ನು ಹಾಗೂ ಭಾರತದ ಸರ್ವಧರ್ಮ ಸಹಿಷ್ಣುತೆಯ ಶಕ್ತಿಯನ್ನು ಎಲ್ಲೆಡೆ ಸ್ಮರಿಸುತ್ತಿದ್ದರು.

ವೀಣಾವಾದನ, ಸಂಗೀತ, ಕನಸು ಹೀಗೆ ಸದಭಿರುಚಿಯ ಕಲೆ ಅರಿತಿದ್ದ ನಗುಮುಖದ ಕಲಾಂ ಅವರು ಮಕ್ಕಳ ಅಚ್ಚುಮೆಚ್ಚಿನ ಅಜ್ಜನಾಗಿ ಸದಾ ಸ್ಮರಣೀಯರಾಗಿ ಅಜರಾಮರವಾಗಿರುತ್ತಾರೆ. (ಒನ್ ಇಂಡಿಯಾ ಸುದ್ದಿ)

English summary
Former president, Bharat Ratna Dr. A.P.J. Abdul Kalam on Monday(July 27,2015) passed away after he was admitted to a private hospital here in Meghalaya in a critical condition. Kalam collapsed at the Indian Institute of Management-Shillong while delivering a lecture to the students of the B-school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X