ಅಂದಿನಿಂದ ಇಂದಿನವರೆಗೆ ನಮ್ಮ ರಾಷ್ಟ್ರಪತಿಗಳು

Posted By:
Subscribe to Oneindia Kannada

ನವದೆಹಲಿ, ಜು.22: ರಾಷ್ಟ್ರಪತಿ ಭವನದ ಸಿಂಹಾಸನ ಯಾರ ಪಾಲಾಗಲಿದೆ ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಕ್ಕಿದೆ. ದೇಶದ 14ನೇ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಕಾರ್ಯ ಸಂಸತ್ ಭವನದಲ್ಲಿ ಮುಕ್ತಾಯವಾಗಿದೆ. ಪ್ರಣಬ್ ಮುಖರ್ಜಿ ಅವರು ಸಮೀಪದ ಸ್ಪರ್ಧಿ ಪಿಎ ಸಂಗ್ಮಾ ಅವರನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದವರು ಜುಲೈ 25.2012ರಂದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಅಧಿಕಾರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಅಂದಿನಿಂದ ಭಾರತದ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಮೂಲಕವೇ ನಡೆದಿದೆ.ಡಾ. ರಾಜೇಂದ್ರ ಪ್ರಸಾದ್ ಅವರು ಕೂಡಾ ಚುನಾವಣೆ ಎದುರಿಸಿ 507,400 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದರು. ಎರಡು ಅವಧಿ ಕಾಲ ಭಾರತದ ರಾಷ್ಟ್ರಪತಿಯಾಗಿ ಕರ್ತವ್ಯ ನಿರ್ವಹಿಸಿದ ದಾಖಲೆ ಕೂಡಾ ರಾಜೇಂದ್ರ ಪ್ರಸಾದ್ ಅವರ ಹೆಸರಿನಲ್ಲಿದೆ.

Babu Rajendra Prasad

ಭಾರತದ ಮೊದಲ ಪ್ರಜೆಯನ್ನು ದೇಶದಲ್ಲಿನ ಅಷ್ಟೂ ಶಾಸಕರು ಮತ್ತು ಸಂಸದರು ಆಯ್ಕೆ ಮಾಡುತ್ತಾರೆ. ಪ್ರಸ್ತುತ ದೇಶದಲ್ಲಿ 776 ಸಂಸದರು ಮತ್ತು 4120 ಮಂದಿ ಶಾಸಕರು ಇದ್ದಾರೆ. ರಾಷ್ಟ್ರಪತಿ ಆಯ್ಕೆಗಾಗಿ ಈ ಜನಪ್ರತಿನಿಧಿಗಳಿಗೆ ನಿರ್ದಿಷ್ಟ ಮತ ಮೌಲ್ಯವನ್ನು ನಿಗದಿಪಡಿಲಾಗುತ್ತದೆ. ಎಲ್ಲ ಸಂಸದರ ಒಟ್ಟು ಮತ ಮೌಲ್ಯ 5,49,408 (776x708). ಹಾಗೆಯೇ, 4120 ಶಾಸಕರ ಒಟ್ಟು ಮತ ಮೌಲ್ಯ 5,49,474. ಇದರ ಸಂಗ್ರಹಿತ ಮೊತ್ತ 10,98, 882.

ಯಾರು ಹೆಚ್ಚು ಮತಗಳನ್ನು ಗಳಿಸುತ್ತಾರೋ ಅಥವಾ ಎಲ್ಲ ಸಂಸದರು, ಶಾಸಕರು ರಾಷ್ಟ್ರಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲು ಬಯಸಿದರೆ ಆಗ ಈ ಮತ ಮೌಲ್ಯ ಗೌಣವಾಗಿ ರಾಷ್ಟ್ರಪತಿ ಸ್ಥಾನದ ಮೌಲ್ಯ ಅಗಣಿವಾಗುತ್ತದೆ. ಭಾರತದ ರಾಷ್ಟ್ರಪತಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಅಧಿಕಾರ ಸಂಖ್ಯೆ ಹೆಸರು (ಜನನ-ಮರಣ ವರ್ಷ)
ಅಧಿಕಾರ ಅವಧಿ
14 ಪ್ರಣಬ್ ಮುಖರ್ಜಿ (ಜನನ- 1935)
ಜುಲೈ 25,2012-
13 ಪ್ರತಿಭಾ ಪಾಟೀಲ್ (ಜನನ- 1934)
ಜುಲೈ 25. 2007 ರಿಂದ ಜುಲೈ 24, 2012
12 ಎಪಿಜೆ ಅಬ್ದುಲ್ ಕಲಾಂ (ಜನನ- 1931)
ಜುಲೈ 25, 2002 ರಿಂದ ಜುಲೈ 25, 2007
11 ಡಾ. ಕೆ ಆರ್ ನಾರಾಯಣನ್ (1920-2005)
ಜುಲೈ 25, 1997 ರಿಂದ ಜುಲೈ 25, 2002
10 ಡಾ. ಶಂಕರ ದಯಾಳ ಶರ್ಮ (1918-1999)
ಜುಲೈ 25, 1992 ರಿಂದ ಜುಲೈ 25, 1997
9 ರಾಮಸ್ವಾಮಿ ವೆಂಕಟರಾಮನ್ (1910-2009)
ಜುಲೈ 25, 1987 ರಿಂದ ಜುಲೈ 25, 1992
8 ಗ್ಯಾನಿ ಜೈಲ್ ಸಿಂಗ್ (1916-1994)
ಜುಲೈ 25,1982 ರಿಂದ ಜುಲೈ 25, 1987
7 ನೀಲಂ ಸಂಜೀವ ರೆಡ್ಡಿ (1913-1996)
ಜುಲೈ 25, 1977 ರಿಂದ ಜುಲೈ 25,1982
ಹಂಗಾಮಿ ಬಿ ಡಿ ಜತ್ತಿ ಫೆಬ್ರವರಿ 11, 1977 ರಿಂದ ಜುಲೈ 25, 1977
6 ಫಕ್ರುದ್ದೀನ್ ಅಲಿ ಅಹ್ಮದ್ (1905-1977)
ಆಗಸ್ಟ್ 24, 1974 ರಿಂದ ಫೆಬ್ರವರಿ 11, 1977
5 ವರಾಹಗಿರಿ ವೆಂಕಟ ಗಿರಿ ಆಗಸ್ಟ್ 24, 1969 ರಿಂದ ಆಗಸ್ಟ್ 24, 1974
ಹಂಗಾಮಿ ಮಹಮ್ಮದ್ ಹಿದಾಯತುಲ್ಲಾ ಜುಲೈ 20, 1969 ರಿಂದ ಆಗಸ್ಟ್ 24, 1969
ಹಂಗಾಮಿ ವರಾಹಗಿರಿ ವೆಂಕಟ ಗಿರಿ (1894-1980)
ಮೇ 3, 1969 ರಿಂದ ಜುಲೈ 20, 1969
4 ಡಾ. ಜಾಕಿರ್ ಹುಸೇನ್ (1897-1969)
ಮೇ 13, 1967 ರಿಂದ ಮೇ 3, 1969
3 ಡಾ. ಸರ್ವಪಲ್ಲಿ ರಾಧಾಕೃಷ್ಣನ್ (1888-1975)
ಮೇ 13, 1962 ರಿಂದ ಮೇ 13, 1967
2 ಹಾಗೂ 1 ಡಾ. ರಾಜೇಂದ್ರ ಪ್ರಸಾದ್ (1884-1963)
ಜನವರಿ 26, 1950 ರಿಂದ ಮೇ 13, 1962

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Presidents of the Republic of India, listed. Dr Rajendra Prasad was the only president to serve for two terms. The terms of Varahagiri Venkata Giri, Muhammad Hidayatullah, and Basappa Danappa Jatti, who have functioned as acting presidents, are therefore not numbered.
Please Wait while comments are loading...