ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲಾಂ ಆಶಯದಂತೆ ಕರ್ನಾಟಕದಲ್ಲಿ ಸರ್ಕಾರಿ ರಜೆ ಇಲ್ಲ

|
Google Oneindia Kannada News

ಬೆಂಗಳೂರು, ಜುಲೈ 28 : ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 7 ದಿನಗಳ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಆದರೆ, ಜುಲೈ 28ರ ಮಂಗಳವಾರ ಸರ್ಕಾರಿ ರಜೆ ಇರುವುದಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹೇಳಿದ್ದಾರೆ. [ಡಾ.ಕಲಾಂ ಸ್ಫೂರ್ತಿ ತುಂಬುವ ಹೇಳಿಕೆಗಳು]

ಅಬ್ದುಲ್ ಕಲಾಂ ಅವರು ಭಾರತ ರತ್ನ ಪ್ರಶಸ್ತಿ ಪುರಸ್ಕೃತರೂ ಆಗಿರುವುದರಿಂದ ಕೇಂದ್ರ ಸರ್ಕಾರದ ಶಿಷ್ಟಾಚಾರದ ಅನ್ವಯ ಏಳು ದಿನಗಳ ಕಾಲ ರಾಜ್ಯದಲ್ಲಿಯೂ ಶೋಕಾಚರಣೆ ಮಾಡಲಾಗುತ್ತದೆ. ಆದರೆ, ಮಂಗಳವಾರ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಸಬೇಕು ಎಂದು ಕೌಶಿಕ್ ಮುಖರ್ಜಿ ಆದೇಶ ಹೊರಡಿಸಿದ್ದಾರೆ. ['ಕ್ಷಿಪಣಿ ಮಾನವ' ಎಪಿಜೆ ಅಬ್ದುಲ್ ಕಲಾಂ ವಿಧಿವಶ]

abdul kalam

"In case of my death don't do a National Holiday but work a day extra". ಎಂದು ಅಬ್ದುಲ್ ಕಲಾಂ ಹೇಳಿದ್ದರು. ಅವರ ಆಶಯದಂತೆ ರಾಜ್ಯದಲ್ಲಿ ಸರ್ಕಾರಿ ರಜೆ ನೀಡುವುದಿಲ್ಲ ಎಂದು ಕೌಶಿಕ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ. [ಗಣ್ಯರ ನಿಧನಕ್ಕೆ ರಜೆ ಘೋಷಿಸುವ ಗೀಳು ಸರಕಾರಕ್ಕೆ ಯಾಕೆ?]

ಆದರೆ, ಖಾಸಗಿ ಶಾಲೆಗಳು ಇಂದು ರಜೆ ಘೋಷಿಸಲು ತೀರ್ಮಾನ ಕೈಗೊಂಡಿವೆ. ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಬುಧವಾರ ಶಾಲೆಗಳಲ್ಲಿ ಶೋಕಾಚರಣೆ ನಡೆಸಲು ನಿರ್ಧರಿಸಿದ್ದು, ಮಂಗಳವಾರ ರಜೆ ಘೋಷಿಸಲಿವೆ.

ಸೋಮವಾರ ಸಂಜೆ 6.30ರ ಸಮಯದಲ್ಲಿ ಅಬ್ದುಲ್ ಕಲಾಂ ಅವರು ಮೇಘಾಲಯದ ಶಿಲಾಂಗ್ ಐಐಎಂನಲ್ಲಿ ಉಪನ್ಯಾಸ ಮಾಡುತ್ತಿದ್ದಾಗ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾದರು. ತಮಿಳುನಾಡಿನ ರಾಮೇಶ್ವರಂನಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.

English summary
No official holiday has been declared for schools and colleges on Tuesday, July 28 said Karnataka Chief Secretary Kaushik Mukherjee. He claimed that the former President A.P.J. Abdul Kalam had said earlier that he did not want a holiday to be declared on the day after he died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X