ಕೆ.ಶಿವನ್ ಗೆ ವಿಮಾನದಲ್ಲಿ ಹೃದಯಸ್ಪರ್ಶಿ ಸ್ವಾಗತ: ವಿಡಿಯೋ ವೈರಲ್
ಅಂದು ಇಂಡಿಗೋ ವಿಮಾನದ ಎಕಾನಮಿ ಕ್ಲಾಸ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆಲ್ಲ ಅಚ್ಚರಿ ಕಾದಿತ್ತು.... ಕೆಲವೇ ದಿನಗಳ ಮುಂಚೆ ಚಂದ್ರಯಾನ 2 ಎಂಬ ಹೆಮ್ಮೆಯ ಬಾಹ್ಯಾಕಾಶ ಯೋಜನೆಯ ಯಶಸ್ಸಿನ ಭಾಷ್ಯ ಬರೆದಿದ್ದ ಕೆ.ಶಿವನ್ ಅಂದು ಸಾಮಾನ್ಯ ಜನರಂತೆ ಎಕಾನಮಿ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸಿದ್ದರು!
ಸರಳತೆಗೆ ಹೆಸರಾದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ)ದ ಅಧ್ಯಕ್ಷ ಕೆ.ಶಿವನ್ ಅವರಿಗೆ ಈ ಸಂದರ್ಭದಲ್ಲಿ ವಿಮಾನದಲ್ಲಿ ಹೃದಯಸ್ಪರ್ಶಿ ಸ್ವಾಗತ ದೊರೆತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Great to see a non-movie, non-cricket personality being recognized. #ISRO #Sivan pic.twitter.com/d54DdgrYnG
— Lenin Thiru (@lenin_thiru) October 4, 2019
ಶಿವನ್ ಅವರು ವಿಮಾನದೊಳಗೆ ಬರುತ್ತಿದ್ದಂತೆಯೇ ಅವರನ್ನು ಏರ್ ಹಾಸ್ಟೆಸ್ ಗಳು ಸ್ವಾಗತಿಸಿ, ಅವರಿಗೆ ಹಸ್ತಲಾಘವ ನೀಡಿದರೆ, ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಎದ್ದುನಿಂತು ಚಪ್ಪಾಳೆ ತಟ್ಟಿದರು. ಕೆಲವರು ಶಿವನ್ ಜೊತೆ ಸೆಲ್ಫಿ ತೆಗೆದುಕೊಂಡರು.

ತಮಗೆ ಸಿಕ್ಕ ಈ ಹೃದಯಸ್ಪರ್ಶಿ ಸ್ವಾಗತವನ್ನುಸೌಜನ್ಯ ಮತ್ತು ಸಂಕೋಚದಿಂದಲೇ ಶಿವನ್ ಸ್ವೀಕರಿಸಿದರು.
ಇತ್ತೀಚೆಗೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ತಂದೆ-ತಾಯಿಗೆ ವಿಮಾನದಲ್ಲಿ ಇಂಥದೇ ಸ್ವಾಗತ ಸಿಕ್ಕಿತ್ತು.












Click it and Unblock the Notifications