Get Updates
Get notified of breaking news, exclusive insights, and must-see stories!

ಮೇಕೆ ಮೇಲೆ ಅತ್ಯಾಚಾರ: #JusticeforGoat ಅಭಿಯಾನ

ಬೆಂಗಳೂರು, ಜುಲೈ 30: ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಕಣ್ಮುಂದೆ ಇರುವಾಗಲೇ, ಹರ್ಯಾಣದಲ್ಲಿ ಮೇಕೆಯೊಂದರ ಮೇಲೆ ಗ್ಯಾಂಗ್ ರೇಪ್ ಆಗಿರುವ ಸುದ್ದಿ ಆಘಾತದಿಂದ ಸಾಮಾಜಿಕ ಜಾಲ ತಾಣ ಟ್ವಿಟ್ ಲೋಕ ಇನ್ನೂ ಹೊರ ಬಂದಿಲ್ಲ. ಇಂಥ ಪೈಶಾಚಿಕ ಕೃತ್ಯಗಳು ಇಂದಿಗೆ ಕೊನೆಗೊಳ್ಳಲಿ ಎಂದು ಮೇಕೆಗೆ ನ್ಯಾಯ ಸಿಗಬೇಕಿದೆ ಎಂದು #JusticeforGoat ಎಂಬ ಅಭಿಯಾನ ಆರಂಭವಾಗಿದೆ.

ಗರ್ಭ ಧರಿಸಿದ್ದ ಮೇಕೆಯೊಂದರ ಮೇಲೆ 8 ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ ಬಳಿಕ, ಆ ಮೇಕೆ ಮೃತಪಟ್ಟಿದೆ. ಹರ್ಯಾಣದ ಮೇವತ್​​ ಜಿಲ್ಲೆಯಲ್ಲಿ ನಡೆದ ಈ ಕೃತ್ಯದ ಬಗ್ಗೆ ಮೇಕೆಯ ಮಾಲೀಕರಿಂದ ತಿಳಿದು ಬಂದಿದ್ದು, ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದಾರೆ.

ಮೇಕೆ ಕಾಣೆಯಾಗಿದೆ ಎಂದು ಮೇಕೆಯ ಮಾಲೀಕ ದೂರು ನೀಡಿದ್ದರು. ಮೇಕೆಯ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ವರದಿ ಕೈಗೆ ಬರಬೇಕಾಗಿದೆ, ಮೇಕೆಗೆ ಲೈಂಗಿಕ ದೌರ್ಜನ್ಯವಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ನಾಗಿನ ಪೊಲೀಸ್​ ಠಾಣೆಯ ಎಸ್​ಐ ರಾಜಬೀರ್ ಸಿಂಗ್​ ಹೇಳಿದ್ದಾರೆ.

ಜುಲೈ 25ರ ರಾತ್ರಿ ಮೇಕೆಯನ್ನು ಕದ್ದುಕೊಂಡು ಹೋಗಿದ್ದ ಸಾವ್ಕಾರ್​, ಹರೂನ್​, ಜಾಫರ್​ ಮತ್ತು ಉಳಿದ ಐವರು ಆ ಮೇಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಆರೋಪಿಗಳ ವಿರುದ್ಧ ಸೆಕ್ಷನ್​ 34, 377 ಮತ್ತು 429 ಹಾಗೂ 1960ರ ಪ್ರಿವೆನ್ಷನ್​ ಆಫ್​ ಕ್ರೂಯೆಲ್ಟಿ ಟು ಅನಿಮಲ್​ ಕಾಯ್ದೆ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ.

#JusticeforGoat ಅಭಿಯಾನ

ಮಾಧ್ಯಮ ಪ್ರತಿನಿಧಿಗಳು, ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಯ ಪ್ರಮುಖರ ನಡುವೆ ತಿಕ್ಕಾಟ, ಟ್ವೀಟ್ ಯುದ್ಧಕ್ಕೆ ನಾಂದಿ ಹಾಡಿದ ಮೇಕೆ ಉಳಿಸಿ ಅಭಿಯಾನ.

ಟ್ವೀಟ್ ಯುದ್ಧಕ್ಕೆ ನಾಂದಿ ಹಾಡಿದ ಮೇಕೆ

ಮಾಧ್ಯಮ ಪ್ರತಿನಿಧಿಗಳು, ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಯ ಪ್ರಮುಖರ ನಡುವೆ ತಿಕ್ಕಾಟ, ಟ್ವೀಟ್ ಯುದ್ಧಕ್ಕೆ ನಾಂದಿ ಹಾಡಿದ ಮೇಕೆ ಉಳಿಸಿ ಅಭಿಯಾನ.

ಮೇಕೆ ಉಳಿಸಿ ಅಭಿಯಾನದ ಟ್ವೀಟ್

ಮೇಕೆ ಉಳಿಸಿ ಅಭಿಯಾನದಲ್ಲಿ ಟ್ರಾಲ್, ಮೀಮ್ಸ್, ಟೀಕೆ ಎಲ್ಲವೂ ಸೇರಿದೆ. ಇದೆಲ್ಲಕ್ಕಿಂತ ಪೈಶಾಚಿಕ ಕೃತ್ಯದ ಬಗ್ಗೆ ಖಂಡನೆ, ಪ್ರಾಣಿಗಳ ಬಗ್ಗೆ ಕಾಳಜಿ.

ಮೇಕೆ ರಕ್ಷಕರು ಬೇಕಾಗಿದ್ದಾರೆ

ಹರ್ಯಾಣದಲ್ಲಿ ಗೋರಕ್ಷಕರಿಗಿಂತ, ಮೇಕೆರಕ್ಷಕರು ಬೇಕಿದ್ದಾರೆ.

ಆತ್ಮರಕ್ಷಣೆ ಮಾಡಿಕೊಳ್ಳುವುದನ್ನು ಕಲಿಸಿ

ಪ್ರಾಣಿಗಳಿಗೆ ಆತ್ಮರಕ್ಷಣೆ ಮಾಡಿಕೊಳ್ಳುವುದನ್ನು ಕಲಿಸಬೇಕಿದೆ.

ಈ ಬಗ್ಗೆ ಮುಸ್ಲಿಮರು ದನಿ ಎತ್ತಬೇಕು

ಈ ಬಗ್ಗೆ ಮುಸ್ಲಿಮರು ದನಿ ಎತ್ತಬೇಕು, ಮೇಕೆ ಮೇಲೆ ಈ ರೀತಿ ದೌರ್ಜನ್ಯ ಎಸಗಿದವರು ಯಾರೇ ಆದರೂ ಕಠಿಣ ಶಿಕ್ಷೆಯಾಗಬೇಕು.

ಬರ್ಖಾ ದತ್ ಗೆ ಪ್ರಶ್ನೆ

ಹಿರಿಯ ಪತ್ರಕರ್ತೆ ಬರ್ಖಾ ದತ್ ಗೆ ನೇರವಾಗಿ ಪ್ರಶ್ನೆ ಎಸೆದ ಸಾರ್ವಜನಿಕರು.

ಆತ್ಮರಕ್ಷಣೆ ಮಾಡಿಕೊಳ್ಳುವುದು ಹೇಗೆ?

ಆತ್ಮರಕ್ಷಣೆ ಮಾಡಿಕೊಳ್ಳುವುದು ಹೇಗೆ? ಗನ್ ಗಳನ್ನು ನೀಡಿ ಯುದ್ಧಕ್ಕೆ ಸಜ್ಜುಗೊಳಿಸಿ

ಮೇಕೆಯೊಳಗೆ ಬಾಂಬ್ ಇಟ್ಟುಬಿಡಿ

ಮೇಕೆ ದೇಹದೊಳಗೆ ಸ್ಫೋಟಕಗಳನ್ನು ಇಟ್ಟುಬಿಡಬೇಕು. ಲೈಂಗಿಕ ದೌರ್ಜನ್ಯ ಎಸಗಲು ಬಂದರೆ, ಬಾಂಬ್ ಸ್ಫೋಟಗೊಂಡು ಪುರುಷರ ಗರ್ವ ಅಡಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+