ನ್ಯಾಯಮೂರ್ತಿ ಕರ್ಣನ್ ಗೆ ಸುಪ್ರೀಂ ಆರು ತಿಂಗಳು ಜೈಲು

ಹಾಲಿ ನ್ಯಾಯಮೂರ್ತಿಯೊಬ್ಬರು ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ದೇಶದ ಮೊದಲ ಪ್ರಕರಣ ಇದಾಗಿದೆ.ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಈ ಶಿಕ್ಷೆ ನೀಡಿದೆ.

ನವದೆಹಲಿ, ಮೇ 9: ಅಚ್ಚರಿಯ ಪ್ರಕರಣವೊಂದರಲ್ಲಿ ಕೊಲ್ಕೊತ್ತಾ ಹೈಕೋರ್ಟಿನ ನ್ಯಾಯಮೂರ್ತಿ ಸಿಎಸ್ ಕರ್ಣನ್ ಗೆ ಸುಪ್ರೀಂ ಕೋರ್ಟ್ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಹಾಲಿ ನ್ಯಾಯಮೂರ್ತಿಯೊಬ್ಬರು ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ದೇಶದ ಮೊದಲ ಪ್ರಕರಣ ಇದಾಗಿದೆ.ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನ್ಯಾ. ಸಿಎಸ್ ಕರ್ಣನ್ ಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ನೇತೃತ್ವದ ಸಪ್ತ ನ್ಯಾಯಾಧೀಶರ ನ್ಯಾಯಪೀಠ ಈ ಆದೇಶ ನೀಡಿದೆ.

Justice Karnan held guilty of contempt, sentenced to 6 months in jail by SC

"ನ್ಯಾಯಾಂಗ ನಿಂದನೆ ನ್ಯಾಯಾಂಗ ನಿಂದನೆಯೇ. ಹಾಲಿ ನ್ಯಾಯಮೂರ್ತಿಗಳೋ ಅಲ್ವೋ ಎನ್ನುವ ಪ್ರಶ್ನೆ ಇಲ್ಲಿ ಬರುವುದಿಲ್ಲ," ಎಂದು ಶಿಕ್ಷೆ ನೀಡುವಾಗ ನ್ಯಾಯಾಪೀಠ ಅಭಿಪ್ರಾಯಪಟ್ಟಿದೆ.. ಮಾತ್ರವಲ್ಲ ಕೊಲ್ಕೊತ್ತಾ ಪೊಲೀಸರಿಗೆ ಕರ್ಣನ್ ರನ್ನು ಬಂಧಿಸುವಂತೆ ನ್ಯಾಯಪೀಠ ಸೂಚನೆ ನೀಡಿದೆ.

ಸೋಮವಾರವಷ್ಟೇ ಸಿಎಸ್ ಕರ್ಣನ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿ ಈ ಪೀಠದಲ್ಲಿದ್ದ ಏಳೂ ಜನರಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ನ್ಯಾಯಮೂರ್ತಿಗಳ ನಡವಳಿಕೆ ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ 1989 ಹಾಗೂ ತಿದ್ದುಪಡಿ ಕಾಯ್ದೆ 2015ರ ಅಡಿಯಲ್ಲಿ ಶಿಕ್ಷಾರ್ಹವಾಗಿದೆ ಎಂದು ಹೇಳಿ ಈ ಶಿಕ್ಷೆ ನೀಡಿದ್ದರು. ಇದೀಗ ಸುಪ್ರೀಂ ಕೋರ್ಟ್ ನ ಇದೇ ಪೀಠ ನ್ಯಾ. ಕರ್ಣನ್ ಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+