ಜೂನ್ 23 ವಿಶ್ವ ವಿಧವೆಯರ ದಿನ, ಬನ್ನಿ ಅವರಿಗೆ ಧೈರ್ಯ ತುಂಬೋಣ
ನವ ದೆಹಲಿ, ಜೂನ್ 23: ಪುರುಷರು ಮರು ಮದುವೆ ಆಗುವುದಾದರೆ ಮಹಿಳೆಯರು ಏಕೆ ಆಗುವಂತಿಲ್ಲ ಹೀಗೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಹೀಗೆ ಹೇಳುವುದಕ್ಕೆ ಕಾರಣ ಇಂದು ಅಂತರರಾಷ್ಟ್ರೀಯ ವಿಧವೆಯರ ದಿನ.
ಹೌದು ಜೂನ್ 23 ಅಂತರಾಷ್ಟ್ರೀಯ ವಿಧವೆಯರ ದಿನ. ಪತಿಯನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿರುವವರಿಗಾಗಿಯೇ ಈ ದಿನ ಮೀಸಲು.
ಪತಿಯನ್ನು ಕಳೆದು ಒಂಟಿಯಾದ ಮಹಿಳೆಯರಿಗೆ ಮತ್ತು ಅವರ ಮಕ್ಕಳಿಗೆ ಧೈರ್ಯ ತುಂಬಲೆಂದೇ ಅಂತರಾಷ್ಟ್ರೀಯ ವಿಧವೆಯರ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

ಜೂನ್ 23ರಂದೇ ಆಚರಣೆ ಏಕೆ
1954 ರಲ್ಲಿ ಮೊದಲ ಬಾರಿಗೆ ವಿಶ್ವ ವಿಧವೆಯರ ದಿನ ಆಚರಿಸಲಾಯಿತು. ಲೂಂಬಾ ಫೌಂಡೇಶನ್ ಮೊದಲ ಬಾರಿಗೆ ಇದನ್ನು ಚಾಲ್ತಿಗೆ ತಂದಿತು. ಇದೇ ದಿನದಂದು ಆಚರಿಸಲು ಕಾರಣ ಇದೇ ದಿನ ಲೂಂಬಾ ಫೌಂಡೇಶನ್ ಸಂಸ್ಥಾಪಕರ ತಾಯಿ ವಿಧವೆಯಾಗಿದ್ದರು ಹಾಗಾಗಿ ಜೂನ್ 23ರನ್ನೇ ವಿಶ್ವ ವಿಧವೆಯರ ದಿನ ಆಚರಿಸಲಾಗುತ್ತಿದೆ.

ಭಾರತೀಯರಿಂದ ಆಚರಣೆಗೆ ಬಂದ ದಿನ
ವಿಶ್ವ ವಿಧವೆಯರ ದಿನ ಆಚರಣೆಯ ಹಿಂದೆ ಇರುವುದು ಭಾರತೀಯರ ಇಚ್ಛಾಶಕ್ತಿ ಮತ್ತು ಕಳಕಳಿ. ಹೌದು ವಿಧವೆಯರ ದಿನ ಆಚರಣೆಗೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಲೂಂಬಾ ಫೌಂಡೇಶನ್ನ ಮುಖ್ಯಸ್ಥ ಲಾರ್ಡ್ ಲೂಂಬಾ ಪಂಜಾಬ್‌ನವರು. ಅವರ ತಾಯಿ ಪುಷ್ಪವತಿ ಲೂಂಬಾ ಅವರು ವಿಧವೆಯಾದ ದಿನವೇ ವಿಧವೆಯರ ದಿನ ಆಚರಿಸಲಾಗುತ್ತದೆ.

ಸೇನೆಯಲ್ಲಿ ತಪ್ಪದೆ ಆಚರಣೆ
ಭಾರತೀಯ ಸೇನೆಯಲ್ಲಿ ವಿಶ್ವ ವಿಧವೆಯರ ದಿನವನ್ನು ತಪ್ಪದೆ ಆಚರಿಸಲಾಗುತ್ತದೆ. ದೇಶಕ್ಕಾಗಿ ಪತಿಯನ್ನು ಕಳೆದುಕೊಂಡು ಒಂಟಿಯಾದ ಮಹಿಳೆಯರನ್ನು ಅಂದು ಸೇನೆ ನೆನೆಸಿಕೊಳ್ಳುತ್ತದೆ. ವಿಧವೆಯರನ್ನು ಕರೆಸಿ ಉಡುಗೊರೆಗಳನ್ನು ಕೊಡುವ ವಾಡಿಕೆ ಇದೆ.

ಬೃಂದಾವನದ ವಿಧವೆಯರು
ಮಥುರಾ ಪ್ರಮುಖವಾಗಿಸಿಕೊಂಡು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬೃಂದಾವನದ ವಿಧವೆಯರು ಎಂಬ ಆಚರಣೆಯನ್ನೇ ಮಾಡಿಕೊಂಡು ಬರಲಾಗಿದೆ. ಇದು ವಿಧವೆಯರ ದಿನದಂದು ಮಾಡದಿದ್ದರೂ ಸಹಿತ ಅವರನ್ನೂ ಸಂಸ್ಕೃತಿಯ ಭಾಗವಾಗಿಸಿಕೊಳ್ಳುವ ಪ್ರಯತ್ನದಿಂದ ಈ ಆಚರಣೆ ಚಾಲ್ತಿಯಲ್ಲಿದೆ.

ಸುಖಗಳಿಂದ ದೂರ ಇಟ್ಟಿದ್ದೇವೆ
ವಿಧವೆಯರನ್ನು ಎಲ್ಲಾ ರೀತಿಯ ಸುಖಗಳಿಂದ ದೂರವೇ ಇಟ್ಟಿದೆ ನಮ್ಮ ಸಂಸ್ಕೃತಿ. ಅಲಂಕಾರ, ಸಂಸರ ಸುಖ, ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳದಂತೆ ಮಾಡುವ ಸಂಪ್ರದಾಯಗಳು ನಮ್ಮಲ್ಲಿ ಈಗಲೂ ಚಾಲ್ತಿಯಲ್ಲಿವೆ. ನಮ್ಮೊಳಗೆ ನೀವು ಒಬ್ಬರು ಎಂದು ಅವರಿಗೆ ಧೈರ್ಯ ತುಂಬುವ ಉದ್ದೇಶದಿಂದಲೇ ವಿಶ್ವ ವಿಧವೆಯರ ದಿನ ಅವಶ್ಯಕ.

ಇಂದು ನಡೆದಿದೆ ಕಾರ್ಯಕ್ರಮ
ಇಂದು (ಜೂನ್ 23) ನವ ದೆಹಲಿಯಲ್ಲಿ ಲೂಂಬಾ ಫೌಂಡೇಶನ್ ವತಿಯಿಂದ ನಡೆದ ವಿಧವೆಯರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭಾಗವಹಿಸಿದ್ದರು. ಸೇರಿದ್ದ ನೂರಾರು ವಿಧವೆಯರನ್ನುದ್ದೇಶಿಸಿ ಧೈರ್ಯದ ಮಾತುಗಳನ್ನಾಡಿದರು. ಪುರುಷರು ಮರುವಿವಾಹ ಆಗುವುದಾದರೆ ಮಹಿಳೆಯರೇಕೆ ಆಗುವಂತಿಲ್ಲ ಎಂದರು ಅವರು.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications