ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Joshimath : 5.4 ಸೆಂ.ಮೀ. ವರೆಗೂ ಮುಳುಗಿದ ಜೋಶಿಮಠ: ಇಸ್ರೋ ಮಾಹಿತಿ

|
Google Oneindia Kannada News

ಉತ್ತರಖಂಡದ ಜೋಶಿಮಠದ ಬಗ್ಗೆ ಮತ್ತೊಂದು ಅಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‌ಆರ್‌ಎಸ್‌ಸಿ) ಜೋಶಿಮಠದ ಉಪಗ್ರಹ ಚಿತ್ರಗಳು ಮತ್ತು ಭೂ ಕುಸಿತದ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ಇದು ಇಡೀ ಪಟ್ಟಣ ಮುಳುಗಬಹುದು ಎಂದು ತೋರಿಸುತ್ತದೆ. ಇದರಿಂದಾಗಿ ಜೋಶಿಮಠದ ಸ್ಥಳೀಯರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ವರದಿಯ ಪ್ರಕಾರ, ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ ಭೂಮಿಯ ಕುಸಿತವು ನಿಧಾನವಾಗಿತ್ತು. ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಮುಳುಗಿದೆ. ಆದರೆ ಡಿಸೆಂಬರ್ 27, 2022 ಮತ್ತು ಜನವರಿ 8, 2023 ರ ನಡುವೆ ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳಲ್ಲಿ ಜೋಶಿಮಠ 5.4 ಸೆಂ.ಮೀ. ವರೆಗೂ ಮುಳುಗಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ. ಹೈದರಾಬಾದ್ ಮೂಲದ NRSC ಮುಳುಗುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇಸ್ರೋದ ಪ್ರಾಥಮಿಕ ವರದಿಯ ಆಧಾರದ ಮೇಲೆ ಉತ್ತರಾಖಂಡ ಸರ್ಕಾರ ಅಪಾಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ ಮತ್ತು ಈ ಪ್ರದೇಶಗಳಲ್ಲಿರುವ ಜನರನ್ನು ಆದ್ಯತೆಯ ಮೇಲೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ಕುಸಿಯಲಿದೆ ಎಂದು ಉಪಗ್ರಹ ಚಿತ್ರಗಳು ತೋರಿಸುತ್ತವೆ.

Joshimath crisis: Joshimath sank by 5.4 cm: ISRO information

ಪಟ್ಟಣದಲ್ಲಿ ಭೂಮಿ ಕುಸಿತದಿಂದಾಗಿ ಮನೆ, ರಸ್ತೆಗಳಲ್ಲಿ ಕಾಣಿಸಿಕೊಂಡ ಬಿರುಕುಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸುತ್ತಿದ್ದರೂ ಇಸ್ರೋದ ಪ್ರಾಥಮಿಕ ವರದಿಯಲ್ಲಿ ಕಂಡು ಬಂದಿರುವ ದೃಶ್ಯಗಳು ಭಯ ಹುಟ್ಟಿಸುವಂತಿದೆ.

ಜೋಶಿಮಠದಲ್ಲಿ ಇಸ್ರೋ ಮಾಡಿದ ಪ್ರಮುಖ ಅವಲೋಕನಗಳು

ಜೋಶಿಮಠ ಪಟ್ಟಣದಲ್ಲಿ 9 ಸೆಂ.ಮೀ ವರೆಗಿನ ನಿಧಾನ ಕುಸಿತ ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ 7 ತಿಂಗಳ ಅವಧಿಯಲ್ಲಿ ದಾಖಲಾಗಿದೆ.

Joshimath crisis: Joshimath sank by 5.4 cm: ISRO information

27ನೇ ಡಿಸೆಂಬರ್ 2022 ಮತ್ತು 8ನೇ ಜನವರಿ 2023ರ ನಡುವೆ (ಬಹುಶಃ 2ನೇ ಜನವರಿ 2022 ರಂದು ಪ್ರತ್ಯಕ್ಷದರ್ಶಿ ವರದಿಗಳಂತೆ) ಕ್ಷಿಪ್ರ ಕುಸಿತದ ಘಟನೆಯನ್ನು ಪ್ರಚೋದಿಸಲಾಗಿದೆ.

ಕೆಲವು ದಿನಗಳ ಅವಧಿಯಲ್ಲಿ ಈ ಪ್ರದೇಶ ಸುಮಾರು 5 ಸೆಂಟಿಮೀಟರ್‌ಗಳಷ್ಟು ಕುಸಿದಿದೆ ಮತ್ತು ಕುಸಿತದ ಪ್ರದೇಶದ ವ್ಯಾಪ್ತಿಯು ಸಹ ಹೆಚ್ಚಾಗಿದೆ. ಆದರೆ ಇದು ಜೋಶಿಮಠ ಪಟ್ಟಣದ ಕೇಂದ್ರ ಭಾಗಕ್ಕೆ ಸೀಮಿತವಾಗಿದೆ.

ಕುಸಿತದ ವಲಯವನ್ನು ಗುರುತಿಸಲಾಗಿದೆ. 2180 ಮೀ ಎತ್ತರದಿಂದ ಜೋಶಿಮಠ-ಔಲಿ ರಸ್ತೆಯ ಬಳಿ ಭೂ ಕುಸಿತ ಉಂಟಾಗಿರುವ ದೃಶ್ಯವನ್ನು ಗುರುತಿಸಲಾಗಿದೆ.

English summary
Between December 27, 2022 and January 8, 2023, the intensity of land subsidence increased and the joshimath sank by 5.4 cm in these 12 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X