Ram Mantra Chant: ನೀವು ಶ್ರೀರಾಮ ಮಂತ್ರ ಪಠಿಸಿ 'ಜೋಶ್' ಪ್ರಶಂಸನೀಯ ಪತ್ರ ಪಡೆಯಿರಿ, ಲಿಂಕ್, ಮಾಹಿತಿ ಇಲ್ಲಿದೆ
ಬೆಂಗಳೂರು, ಜನವರಿ 22: ಚಿಕ್ಕ ಚಿಕ್ಕ ಶಾರ್ಟ್ ನ್ಯೂಸ್, ಟ್ರೆಂಡಿಂಗ್ಸ್ ಮತ್ತು ವೈರಲ್ ವಿಡಿಯೋ ಮೂಲಕ ಬಹುಭಾಷೆಯಲ್ಲಿ ನಿಮಗೆ ಮಾಹಿತಿ ಒದಗಿಸುವ ಜೋಶ್ (Josh) ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ''ಶ್ರೀರಾಮ ಮಂತ್ರ ಪಠಣ ರೂಮ್ ಲಿಂಕ್'' ಕ್ರಿಯೇಟ್ ಮಾಡಿ ಬಿಡುಗಡೆ ಗೊಳಿಸಿದೆ.
ಈ ಲಿಂಕ್ ಮೂಲಕ ನೀವು ರಾಮ ಮಂದಿರ ಉದ್ಘಾಟನೆ ಸಮಾರಂಭದ ಈ ಸುದಿನದಲ್ಲಿ ಪಾಲ್ಗೊಳ್ಳಬಹುದು. ಅಲ್ಲದೇ ನಿಮಗೆ ಪಾಲ್ಗೊಂಡಿದ್ದಕ್ಕೆ ಜೋಶ್ ಕಡೆಯಿಂದ ಪ್ರಶಂಸನೀಯ ಪ್ರಮಾಣಪತ್ರ (Certificate) ಸಹ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ನೀವು ಸಹ ಶ್ರೀರಾಮೋತ್ಸವದಲ್ಲಿ ಪಾಲ್ಗೊಳ್ಳಲು, ಪ್ರಮಾಣಪತ್ರ ಪಡೆಯಲು ಏನು ಮಾಡಬೇಕು ಎಂಬ ಮೂರು ಹಂತದ ಮಾಹಿತಿ ಇಲ್ಲಿದೆ.

ಜೋಶ್ ಕೊಟ್ಟಿರುವ ಲಿಂಕ್ ಕ್ಲಿಕ್ (https://share.myjosh.in/webview/ram-mandir-event) ಮಾಡಿದರೆ ಶ್ರೀರಾಮ ಚಾಂಟ್ ರೂಮ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೂರು ಹಂತಗಳನ್ನು ಪೂರೈಸಬೇಕಾಗುತ್ತದೆ. ಮೊದಲ ಹಂತದಲ್ಲಿ ನೀವು ನಿಮ್ಮ ಹೆಸರು ನಮೂದಿಸಬೇಕು.
ನಂತರ ನೀವು ಎಷ್ಟು ಬಾರಿ ಶ್ರೀರಾಮ ಮಂತ್ರ ಪಠಣ ಮಾಡಲು ಇಷ್ಟಪಡುತ್ತೀರಿ ಎಂದು ಆಯ್ಕೆ ಬರುತ್ತದೆ. ಅದರಲ್ಲಿ 11, 108 ಎಂಬ ಆಯ್ಕೆ ಬರುತ್ತದೆ. ಅದರಲ್ಲಿ ಒಂದನ್ನು ನೀವು ಆಯ್ಕೆ ಮಾಡಿದ ಬಳಿಕ 'ಶ್ರೀರಾಮ್ ಜೈರಾಮ್ ಜೈ ಜೈ ರಾಮ್' ಎಂಬ ಮಂತ್ರ ಪಠನೆ ಆರಂಭವಾಗುತ್ತದೆ. ನೀವು ಸಹ ಅದನ್ನು ಅನುಸರಿಸಬೇಕಿದೆ.
ಇದು ಪೂರ್ಣಗೊಂಡ ನಂತರ ಮೂರನೇ ಹಂತದಲ್ಲಿ ಪರದೆ ಮೇಲೆ ನಿಮ್ಮ 'ಪ್ರಮಾಣಪತ್ರ' ಕಾಣಿಸುತ್ತದೆ. ಅದನ್ನು ನೀವು ಡೌನ್‌ಲೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು. ಈ ಮೂಲಕ ನೀವು ಇಂದಿನ ಶ್ರೀರಾಮೋತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದು 'ಜೋಶ್', 'ಡೈಲಿ ಹಂಟ್' ಮತ್ತು 'ಒನ್‌ಇಂಡಿಯಾ' ತಿಳಿಸಿದೆ.












Click it and Unblock the Notifications