Jharkhand Election: ಬಿಜೆಪಿಗೆ ಜಯಭೇರಿ ಎಂದ ಪೀಪಲ್ಸ್ ಪಲ್ಸ್ ಎಕ್ಸಿಟ್‌ ಪೋಲ್‌

ಜಾರ್ಖಂಡ್ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ. ನವೆಂಬರ್ 20 ರಂದು ಎರಡನೇ ಹಂತದ ಚುನಾವಣೆಯಲ್ಲಿ 38 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿದ್ದು ಸೋಲು ಗೆಲುವಿನ ಲೆಕ್ಕಾಚಾರದಲ್ಲಿವೆ. ಎರಡನೇ ಹಂತದ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗವಾಗಿದ್ದು ಫಲಿತಾಂಶದ ಮುನ್ಸೂಚನೆ ಕೊಟ್ಟಿವೆ.

ಪೀಪಲ್ಸ್ ಪಲ್ಸ್ ಚುನಾವಣೋತ್ತರ ಸಮೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು ಎನ್‌ಡಿಎ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಆಡಳಿತಾರೂಢ ಜೆಎಂಎಂ ಪಕ್ಷಕ್ಕೆ ಚುನಾವಣೋತ್ತರ ಫಲಿತಾಂಶ ಆಘಾತ ಕೊಟ್ಟಿದೆ.

jharkhand election 2024 Peoples Pulse exit poll predicts nda win

ಪೀಪಲ್ಸ್ ಪಲ್ಸ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್‌ನಲ್ಲಿ ಎನ್‌ಡಿಎ ಮೈತ್ರಿಕೂಟ 44 ರಿಂದ 55 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಜೆಎಂಎಂ ಮೈತ್ರಿಕೂಟ 25 ರಿಂದ 37 ಸ್ಥಾನಗಳಲ್ಲಿ ಮಾತ್ರ ಗೆಲುವ ಸಾಧಿಸಲಿದೆ ಎಂದು ಹೇಳಿದೆ. ಇತರ ಅಭ್ಯರ್ಥಿಗಳು 5 ರಿಂದ 9 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ಎನ್‌ಡಿಎ ಅಧಿಕಾರಕ್ಕೆ?

ಸಮೀಕ್ಷೆಗಳು ಎನ್‌ಡಿಎ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿವೆ. 81 ಸ್ಥಾನಗಳ ಬಲ ಹೊಂದಿರುವ ಜಾರ್ಖಂಡ್‌ನಲ್ಲಿ ಬಹುಮತ ಪಡೆಯಲು 41 ಸ್ಥಾನಗಳು ಬೇಕಿದ್ದು, ಎನ್‌ಡಿಎ 44 ರಿಂದ 55 ಸ್ಥಾನಗಳಲ್ಲಿ ಗೆಲ್ಲುವ ಭವಿಷ್ಯ ನುಡಿದಿದ್ದು ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಆಡಳಿತಾರೂಢ ಜೆಎಂಎಂ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಆಘಾತ ಸಿಕ್ಕಿದೆ. 25 ರಿಂದ 37 ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.

ಪೋಲ್ ಆಫ್ ಪೋಲ್ ಅಂಕಿಅಂಶಗಳ ಪ್ರಕಾರ ಜಾರ್ಖಂಡ್‌ನಲ್ಲಿ ಅತಂತ್ರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಪೋಲ್ ಆಫ್ ಪೋಲ್ ಪ್ರಕಾರ ಎನ್‌ಡಿಎ 38 ರಿಂದ 43 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಜೆಎಂಎಂ ಕಾಂಗ್ರೆಸ್ 34 ರಿಂದ 41 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.

ಜಾರ್ಖಂಡ್‌ನಲ್ಲಿ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟ ಭರ್ಜರಿ ಪ್ರಚಾರ ನಡೆಸಿದ್ದವು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರಚಾರ ನಡೆಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+