Jharkhand Exit Poll: ಜಾರ್ಖಂಡ್‌ನಲ್ಲಿ ಜೆಎಂಎಂ ಪಕ್ಷಕ್ಕೆ ಶಾಕ್‌; ಎನ್‌ಡಿಎ ಕೈಹಿಡಿದ ಮತದಾರ

ಜಾರ್ಖಂಡ್ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆದಿದ್ದು, ಇಂದು ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. ಒಟ್ಟು 81 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಬಹುಮತ ಪಡೆಯಲು 41 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ. ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಇಂದು 38 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ ಮುಗಿದ ಬಳಿಕ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಟೈಮ್ಸ್ ನೌ - ಜೆವಿಸಿ ಸಮೀಕ್ಷೆ ನಡೆಸಿದ್ದು ಫಲಿತಾಂಶ ಬಿಡುಗಡೆ ಮಾಡಿದೆ.

ಟೈಮ್ಸ್ ನೌ- ಜೆವಿಸಿ ಸಮೀಕ್ಷೆ ಪ್ರಕಾರ ಜಾರ್ಖಂಡ್‌ನಲ್ಲಿ ಎನ್‌ಡಿಎ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 40 ರಿಂದ 44 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಜೆಎಂಎಂ ಮೈತ್ರಿಕೂಟವು 30 ರಿಂದ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದೆ. ಇತರರು ಒಂದು ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ.

jharkhand assembly election 2024 times now jvc exit poll

ಎನ್‌ಡಿಎಗೆ ಜೈ ಎಂದ ಮತದಾರ!

ಸಮೀಕ್ಷಾ ಫಲಿತಾಂಶದ ಪ್ರಕಾರ ಮತದಾರ ಎನ್‌ಡಿಎ ಒಕ್ಕೂಟಕ್ಕೆ ಒಲವು ತೋರಿಸಿದ್ದಾನೆ. ಸರ್ಕಾರ ರಚನೆ ಮಾಡಲು 41 ಸ್ಥಾನಗಳು ಗೆಲ್ಲಬೇಕಿದ್ದು ಎನ್‌ಡಿಎ ಸರಳ ಬಹುಮತ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಫಲಿತಾಂಶ ಸ್ವಲ್ಪ ಆಚೀಚೆ ಆದರೂ ಅತಂತ್ರ ಪರಿಸ್ಥಿತಿ ಉಂಟಾಗುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.

ಆಡಳಿತಾರೂಢ ಜೆಎಂಎಂ ಪಕ್ಷಕ್ಕೆ ಈ ಎಕ್ಸಿಟ್ ಪೋಲ್ ಫಲಿತಾಂಶಗಳು ಆಘಾತ ಕೊಟ್ಟಿವೆ. ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ಉತ್ಸಾಹದಲ್ಲಿದ್ದ ಸಿಎಂ ಹೇಮಂತ್ ಸೊರೇನ್‌ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದೆ.

ಬಾಂಗ್ಲಾದೇಶಿ ನುಸುಳುಕೋರರ ಸಮಸ್ಯೆ ಈ ಚುನಾವಣೆಯ ಪ್ರಚಾರದ ವಿಷಯವಾಗಿತ್ತು. ಬಿಜೆಪಿ ತಾವು ಅಧಿಕಾರಕ್ಕೆ ಬಂದರೆ ಬಾಂಗ್ಲಾದೇಶಿ ನುಸುಳುಕೋರರನ್ನು ಗುರುತಿಸಿ ರಾಜ್ಯದಿಂದ ಹೊರ ಹಾಕುವುದಾಗಿ ಭರವಸೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು.

ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್ ಜೆಡಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಕಾಂಗ್ರೆಸ್ ರಾಜ್ಯದಲ್ಲಿ ಸರಿಯಾಗಿ ಪ್ರಚಾರ ನಡೆಸಿಲ್ಲ ಎಂದು ಜೆಎಂಎಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ನವೆಂಬರ್ 23ರಂದು ಶನಿವಾರ ಮತ ಎಣಿಕೆ ನಡೆಯಲಿದೆ. ಎಕ್ಸಿಟ್ ಪೋಲ್‌ ಫಲಿತಾಂಶಗಳು ಎಷ್ಟು ನಿಖರವಾಗಿವೆ ಎನ್ನುವುದು ತಿಳಿಯಲಿದೆ. ಮತದಾರ ಯಾವ ಪಕ್ಷದ ಪರ ಒಲವು ಹೊಂದಿದ್ದಾನೆ ಎನ್ನುವುದು ಇನ್ನು ಎರಡು ದಿನಗಳ ಬಳಿಕ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+