ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಭಾರತ ವಿಮಾನ

Posted By:
Subscribe to Oneindia Kannada

ಕರಾಚಿ, ನವೆಂಬರ್, 8: ಪ್ರಯಾಣಿಕರೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಭಾರತದ ಜೆಟ್ ಏರ್ ವೇಸ್ ವಿಮಾನ ಪಾಕಿಸ್ತಾನದ ಕರಾಚಿಯಲ್ಲಿ ಮಂಗಳವಾರ ತುರ್ತು ಭೂ ಸ್ಪರ್ಶ ಮಾಡಿದೆ.

ಪಾಕಿಸ್ತಾನದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಪೈಲಟ್ ಪರವಾನಗಿ ಪಡೆದಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಜಿಯೋ ನ್ಯೂಸ್ ವರದಿ ಮಾಡಿದೆ.

ಅಸ್ವಸ್ಥಗೊಂಡ ಪ್ರಯಾಣಿಕನನ್ನು ಸೋಹನ್ ಸಿಂಗ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನದ ವೈದ್ಯರು ಪರೀಕ್ಷೆ ಮಾಡಿ, ಪ್ರಯಾಣದ ವೇಳೆ ಆತ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ.

Jet Airways flight makes an emergency landing at Karachi

ಜೆಟ್ ಏರ್ ವೇಸ್ ನ 9w 202 ವಿಮಾನವು ನವದೆಹಲಿಯಿಂದ ದೋಹಾ ಕಡೆಗೆ ಹೊರಟಿತ್ತು ಪ್ರಯಾಣಿಕ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಜೆಟ್ ಏರ್ ಲೈನ್ಸ್ ಸಂಸ್ಥೆ ತಿಳಿಸಿದೆ.

"ಪ್ರಯಾಣಿಕರಲ್ಲಿ ಒಬ್ಬರು ತೀವ್ರ ಅಸ್ವಸ್ಥಗೊಂಡಿದ್ದರಿಂದ ತುರ್ತಾಗಿ ಹತ್ತಿರದ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸಲು ಕ್ಯಾಪ್ಟನ್ ನಿರ್ಧರಿಸಿದ್ದರು ಎಂದು ಸಂಸ್ಥೆ ಮಾಧ್ಯಮಗಳಿಗೆ ತಿಳಿಸಿದೆ. ವಿಮಾನವು ಮಂಗಳವಾರ ಬೆಳಿಗ್ಗೆ ದೆಹಲಿಗೆ ಹಿಂತಿರುಗಲಿದೆ ಎಂದು ಸಂಸ್ಥೆ ಹೇಳಿದೆ.

ವಿಮಾನದಲ್ಲಿ ಒಟ್ಟು 141 ಜನ ಪ್ರಯಾಣಿಕರಿದ್ದರು, ವಿಮಾನ ಇಳಿಯುವುದಕ್ಕೂ ಮುಂಚೆ ಪ್ರಯಾಣಿಕರಿಗೆ ಸೋಹನ್ ಸಿಂಗ್ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗಿತ್ತು. ಆದರೆ ಕರಾಚಿಯಲ್ಲಿ ಇಳಿಯುವ ಮೊದಲೇ ಅವರು ಮರಣಿಸಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A passenger travelling in a Jet Airways flight from New Delhi to Doha passed away onboard despite the plane being diverted to Karachi following the medical emergency.
Please Wait while comments are loading...