ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತೀಶ್ ಸಮ್ಮಖದಲ್ಲಿ ಮೋದಿ ಹೊಗಳಿದ ಜೆಡಿಯು ಮುಖಂಡ!

|
Google Oneindia Kannada News

ರಾಜಗಿರ್, ಅ, 29 : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕೆಂಪುಕೋಟೆ ಏರುವ ಕನಸು ನನಸಾಗುವುದಿಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ವಾಗ್ದಾಳಿ ನಡೆಸಿದ ನಂತರ, ಜೆಡಿಯು ಮುಖಂಡ ಸಿಎಂ ಸಮ್ಮುಖದಲ್ಲಿ ಮೋದಿ ಶ್ಲಾಘಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಿಹಾರದ ರಾಜಗಿರ್‌ನಲ್ಲಿ ಮಂಗಳವಾರ ಜೆಡಿಯು ಚಿಂತನ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಪಾಲ್ಗೊಂಡಿದ್ದ ಸಿಎಂ ನಿತೀಶ್ ಕುಮಾರ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ನಂತರ ಮಾತಿಗೆ ನಿಂತ ಪಕ್ಷದ ಮುಖಂಡ ಶಿವಾನಂದ ತಿವಾರಿ ಸಿಎಂ ಸಮ್ಮಖದಲ್ಲೇ ಮೋದಿ ಗುಣಗಾನ ಮಾಡುವ ಮೂಲಕ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

NITISH-MODI

ಶಿಬಿರದಲ್ಲಿ ಮಾತನಾಡಿದ ಶಿವಾನಂದ ತಿವಾರಿ, ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ ಉತ್ತಮ ಅಭಿವೃದ್ಧಿ ಕೆಲಸಗಳು ಆಗುತ್ತಿತ್ತು. ರಾಷ್ಟ್ರೀಯ ರಾಜಕಾರಣದಿಂದಾಗಿ ಉಭಯ ಪಕ್ಷಗಳ ಮೈತ್ರಿ ಮುರಿಯಿತು ಎಂದು ಹೇಳಿದರು.

ಬಿಜೆಪಿ ಬಡತನದಿಂದ ಬೆಳೆದು ಬಂದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೆ. ನರೇಂದ್ರ ಮೋದಿ ಅವರು ಈಗಿರುವ ಸ್ಥಾನಕ್ಕೆ ತಲುಪಲು ಕಠಿಣ ಪರಿಶ್ರಮ ಪಟ್ಟಿದ್ದಾರೆ ಎಂದು ತುಂಬಿದ ಜೆಡಿಯು ಸಭೆಯಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ನಾವು ನರೇಂದ್ರ ಮೋದಿ ಅವರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಆದರೆ, ಅವರ ಶಕ್ತಿ ಏನೆಂದು ನಮಗೆ ಅರಿವಿದೆ. ಸ್ವತಃ ನಿತೀಶ್ ಕುಮಾರ್ ಮತ್ತು ಇತರ ಜೆಡಿಯು ಮುಖಂಡರಿಗೆ ಅದರ ಅನುಭವವಿದೆ ಎಂದು ನಿತೀಶ್ ಕುಮಾರ್ ಸಮ್ಮುಖದಲ್ಲಿಯೇ ಶ್ಲಾಘಿಸಿದರು.

ವೇದಿಕೆ ಮೇಲಿದ್ದ ಸಿಎಂ ನಿತೀಶ್ ಕುಮಾರ್ ಉದ್ದೇಶಿಸಿ, "ನಾನು ನಿಮ್ಮ ಗೆಳೆಯ ನಿಮ್ಮ ಬೆಳವಣಿಗೆಗೆ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದ ಶಿವಾನಂದ ತಿವಾರಿ ತಮ್ಮ ಮಾತಿನ ಧಾಟಿ ಬದಲಾವಣೆ ಮಾಡಿಕೊಂಡರು.

"ಉತ್ತಮ ವ್ಯಕ್ತಿತ್ವದ ಒಬ್ಬ ವ್ಯಕ್ತಿ ಪ್ರಧಾನ ಮಂತ್ರಿ ಹುದ್ದೆ ಏರುವುದನ್ನು ನಾವು ನೋಡಿ ಸಂತಸ ಪಡೆಬೇಕು. ಅವರೊಂದಿಗೆ ಕೆಲಸ ಮಾಡುವ ಅವಕಾಶ ದೊರೆತರೆ ವಿಶಾಲ ಹೃದಯದಿಂದ ಅದನ್ನು ಒಪ್ಪಿಕೊಳ್ಳಬೇಕು". ಎಂದ ತಿವಾರಿ, ನಿತೀಶ್ ಜಿ ನಿಮಗೆ ಮೋದಿಯವರ ಬಗ್ಗೆ ಅಸೂಯೆ ಏಕೆ? ಎಂದು ಪ್ರಶ್ನಿಸಿದರು.

ಅಸಮಾಧಾನ ಕಾರಣ : ಶಿವಾನಂದ ತಿವಾರಿಯವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಕೆಲವು ದಿನಗಳ ಹಿಂದೆ ಪಕ್ಷದ ವಕ್ತಾರರ ಸ್ಥಾನದಿಂದಲೂ ಅವರನ್ನು ಕೆಳಗಿಳಿಸಲಾಗಿತ್ತು. ತಿವಾರಿ ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯೂ ಮುಗಿಯುತ್ತಾ ಬಂದಿದ್ದು, ಮರು ಆಯ್ಕೆ ಆಗುವ ಬಗ್ಗೆ ಖಾತ್ರಿ ಇಲ್ಲ. ಆದ್ದರಿಂದ ಅವರು ಬಿಜೆಪಿ ಸೇರಬಹದು ಎಂಬ ಮಾತುಗಳು ಹಬ್ಬಿವೆ.

English summary
Janata Dal United leader Shivanand Tiwari embarrassed his party by openly praising Bharatiya Janata Party prime ministerial candidate Narendra Modi at the party's convention in Rajgir on Tuesday, October 29. Tiwari said, Narendra Modi comes from a very humble ground. He has struggled a lot to reach where he is today and for this he admire him a lot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X