ಜಯಾ ಹೃದಯಸ್ಥಂಭನ ಸುದ್ದಿ ಕೇಳಿ ಅಭಿಮಾನಿಗೆ ಹೃದಯಾಘಾತ

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 5: ತಮಿಳುನಾಡು ಸಿಎಂ ಜಯಲಲಿತಾ ಹೃದಯಸ್ಥಂಭನದ ವಾರ್ತೆಯನ್ನು ಕೇಳಿದ ತಮಿಳುನಾಡಿನ ಕಡಲೂರು ಜಿಲ್ಲೆಯ ಸನ್ಯಾಸಿಪೇಟೆಯ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರಾದವರು ಎಐಎಡಿಎಂಕೆ ಕಾರ್ಯಕರ್ತ ನೀಲಕಂಠ ಎನ್ನಲಾಗಿದೆ. ಜಯಲಲಿತಾ ಇನ್ನು ಕೆಲವೇ ದಿನಗಳಲ್ಲಿ ಮನೆಗೆ ಬರುತ್ತಾರೆ. ರಾಜ್ಯದ ಎಲ್ಲ ಕೆಲಸಗಳಲ್ಲಿ ಸಕ್ರಿಯರಾಗುತ್ತಾರೆ ಎಂದುಕೊಂಡಿದ್ದ ನೀಲಕಂಠರವರಿಗೆ ಸುದ್ದಿವಾಹಿನಿಯಲ್ಲಿ ಜಯಾಹೃದಯಸ್ಥಂಭನ( ಹೃದಯಾಘಾತ) ಎಂಬ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾರೆ. ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗುವ ಸಮಯದಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.[ಜಯಲಲಿತಾಗೆ ಚಿಕಿತ್ಸೆ ನೀಡುತ್ತಿರುವ 'ಎಕ್ಮೋ ಯಂತ್ರ' ಏನಿದು?]

Nilakantan

ಎಐಎಡಿಎಂಕೆಯ ಕಾರ್ಯಕರ್ತ ನೀಲಕಂಠ ಅವರು ಚೆನ್ನೈನ ಅಪೋಲೋ ಆಸ್ಪತ್ರೆಯ ಬಳಿ ಅಮ್ಮ ಆರೋಗ್ಯ ಸುಧಾರಿಸಲೆಂದು ವಿಶೇಷ ಪೂಜಾ ಕಾರ್ಯಕ್ರಮಗಳು, ಅನೇಕ ಧರ್ಮಕಾರ್ಯಗಳನ್ನು ಮಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu Chief Minister who suffered a cardiac arrest has been put on a heart assist device. The follower of jaya, sanyasipete Nilakanta listen to news to shock to dead heart attack
Please Wait while comments are loading...