• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜಸ್ಥಾನದಲ್ಲಿ ಬಿಜೆಪಿಗೆ ಹಿನ್ನಡೆ, ಪಕ್ಷ ತೊರೆದ ಜಸ್ವಂತ್ ಸಿಂಗ್ ಪುತ್ರ

|

ಜೈಪುರ, ಸೆಪ್ಟೆಂಬರ್ 23: ವಿಧಾನಸಭೆ ಚುನಾವಣೆಗೂ ಮುನ್ನ ರಾಜಸ್ಥಾನದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯುಂಟಾಗಿದೆ. ಬಿಜೆಪಿಯ ಸಂಸ್ಥಾಪಕ ಸದಸ್ಯ, ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರ​ ಪುತ್ರ, ಶಾಸಕ ಮಾನವೇಂದ್ರ ಸಿಂಗ್ ಅವರು ಬಿಜೆಪಿ ತೊರೆದಿದ್ದಾರೆ.

ರಾಜಸ್ಥಾನದ ಬರ್ಮೆರ್ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪಾಚ್​ಪಾದ್ರ ಎಂಬಲ್ಲಿ ಶನಿವಾರದಂದು ನಡೆದ ಸ್ವಾಭಿಮಾನಿ ಸಮಾವೇಶದ ನಂತರ ಪತ್ರಿಕಾಗೋಷ್ಠಿ ನಡೆಸಿದ ಮಾನವೇಂದ್ರ,'ನಾನು ಬಿಜೆಪಿ ಸೇರಿದ್ದು ನನ್ನ ಅತಿ ದೊಡ್ಡ ಪ್ರಮಾದ, ನಾನು ಪಕ್ಷ ತೊರೆಯುತ್ತಿದ್ದೇನೆ ಎಂದು ಘೋಷಿಸಿದರು.

ಶಿಯೋ ಕ್ಷೇತ್ರದ ಶಾಸಕರೂ ಆಗಿರುವ ಮಾನವೇಂದ್ರ ತಮ್ಮ ಮುಂದಿನ ನಡೆಯ ಕುರಿತು ಸ್ಪಷ್ಟನೆ ನೀಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಹೀಗಾಗಿ, ಜಸ್ವಂತ್ ಸಿಂಗ್ ಪ್ರತಿನಿಧಿಸುತ್ತಿದ್ದ ಬರ್ಮರ್- ಜೈಸ್ಮಲೇರ್ ಲೋಕಸಭಾ ಕ್ಷೇತ್ರದಿಂದ ಅವರ ಪುತ್ರ ಕಣಕ್ಕಿಳಿಯಲಿದ್ದಾರೆ.

ಕಾಂಗ್ರೆಸ್ ಸೇರುವ ಇರಾದೆ ಇಲ್ಲ: ನನ್ನನ್ನು ಯಾವೊಬ್ಬ ಕಾಂಗ್ರೆಸ್ ನಾಯಕರು ಸಂಪರ್ಕಿಲ್ಲ. ನಾನು ಕಾಂಗ್ರೆಸ್ ಸೇರುವ ಯಾವುದೇ ಯೋಜನೆ ಹಾಕಿಕೊಂಡಿಲ್ಲ ಎಂದು ಹೇಳಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಂತೂ ಖಚಿತ. ಈ ಬಗ್ಗೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ, ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸ್ವಾಭಿಮಾನಿ ಯಾತ್ರೆ: ಇದೆಲ್ಲವೂ ಶುರುವಾಗಿದ್ದು 2014ರಲ್ಲಿ ಎನ್ನಬಹುದು. ಮೋದಿ ನೇತೃತ್ವದ ಬಿಜೆಪಿ ಚುನಾವಣೆ ಎದುರಿಸುವಾಗ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಬಗ್ಗೆ ಮೋದಿ ಅವರು ನನಗೆ ಕರೆ ಮಾಡಿ, ಅಂದು ಟಿಕೆಟ್ ಆಯ್ಕೆ ಬಗ್ಗೆ ನಡೆದ ಸಭೆಯಲ್ಲಿ ತಾವೂ ಪಾಲ್ಗೊಂಡಿರಲಿಲ್ಲ. ಹೀಗಾಗಿ ನನಗೇನು ಗೊತ್ತಿಲ್ಲ ಎಂದಿದ್ದರು.

ನನ್ನ ತಂದೆ ಜಸ್ವಂತ್​ಸಿಂಗ್​ವಿರುದ್ಧದ ನಡೆದ ಪಿತೂರಿಯಲ್ಲಿ ಜೈಪುರದ ಒಬ್ಬರು ಮತ್ತು ದೆಹಲಿಯ ಇಬ್ಬರ ಕೈವಾಡವಿದೆ. ಅವರ ಹೆಸರುಗಳನ್ನು ನಾನು ಬಹಿರಂಗಪಡಿಸಲಾರೆ ಎಂದು ಮಾನ್ವೇಂದ್ರ ಸಿಂಗ್ ಹೇಳಿದ್ದಾರೆ.

ಸಿಎಂ ವಸುಂಧರಾ ರಾಜೇ ಅವರ ಗೌರವ್ ಯಾತ್ರಾ ಸಮಾರಂಭದಲ್ಲೂ ಮಾನ್ವೇಂದ್ರ ಅವರು ಪಾಲ್ಗೊಂಡಿರಲಿಲ್ಲ.

English summary
Manvendra Singh, BJP MLA from Sheo, Rajasthan and son of former external affairs minister Jaswant Singh , quit the BJP on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X