ಸಿಎಂ ವಿಜಯ್ ಹಗ್ ಮಾಡ್ಬೇಕು:ಸಿಜೆಪಿ ಪ್ರತಿಭಟನೆಯಲ್ಲಿ ಮಹಿಳೆಯ ವಿಚಿತ್ರ ಬೇಡಿಕೆ, ರಸ್ತೆ ಮಧ್ಯೆ ಮಲಗಿ ರಂಪಾಟ
Jantar Mantar Protest: ನೀಟ್ ಅಕ್ರಮದ ವಿರುದ್ಧ ಪ್ರತಿಭಟನೆ ಆರಂಭವಾದ ಬಳಿಕ ದೆಹಲಿಯ ಜಂತರ್ ಮಂತರ್ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿದೆ. ನೀಟ್ ಅಕ್ರಮದ ಬಳಿಕ, ಕೇಂದ್ರ ಚುನಾವಣಾ ಆಯೋಗದ ವಿರುದ್ಧವೂ ಜಂತರ್ ಮಂತರ್ ನಲ್ಲಿ ಬೇರೆ ಬೇರೆ ಪಕ್ಷಗಳ ವಿದ್ಯಾರ್ಥಿ ಘಟಕಗಳಿಂದ ನಿರಂತರ ಪ್ರತಿಭಟನೆಗಳು ನಡೆದಿವೆ. ಇದು ದೇಶಾದ್ಯಂತ ಸುದ್ದಿಯಲ್ಲಿದೆ ಹಾಗೂ ಚರ್ಚೆ ನಡೆಯುತ್ತಿದೆ.

Jantar Mantar Protest ಪೊಲೀಸರ ಮುಂದೆ ವಿಚಿತ್ರ ಬೇಡಿಕೆ
ಇದರ ನಡುವೆ, ಶುಕ್ರವಾರ ಜಂತರ್ ಮಂತರ್ ಒಂದು ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಪ್ರತಿಭಟನೆಗೆಂದು ಬಂದಿರುವ ಮಹಿಳೆಯೊಬ್ಬರು ರಸ್ತೆ ಮೇಲೆ ಮಲಗಿ, ಒಂದು ವಿಚಿತ್ರವಾದ ಬೇಡಿಕೆಯನ್ನ ಮುಂದಿಟ್ಟಿದ್ದರು. ಅದರ ವಿಡಿಯೋ ಒಂದು ಈಗ ಸಖತ್ ಟ್ರೆಂಡ್ ಆಗ್ತಾ ಇದೆ. ಆ ವಿಡಿಯೋವನ್ನು ನೋಡಿದ್ರೆ, ಅದ್ರಲ್ಲಿ ಓರ್ವ ಮಹಿಳೆ ರಸ್ತೆ ಮೇಲೆ ಅಂಗಾತ ಮಲಗಿದ್ದಾರೆ. ಆ ಮಹಿಳೆ ಅಕ್ಕಪಕ್ಕದಲ್ಲಿ ಇಬ್ಬರು ಮಹಿಳಾ ಪೊಲೀಸರಿದ್ದಾರೆ. ಮಹಿಳಾ ಪೊಲೀಸರು ರಸ್ತೆ ಮೇಲೆ ಮಲಗಿರುವ ಮಹಿಳೆಯನ್ನು ಎಬ್ಬಿಸಿ ಕಳುಹಿಸಲು ಯತ್ನಿಸುತ್ತಿದ್ದಾರೆ. ಆ ಮಹಿಳೆಯನ್ನು ಎಬ್ಬಿಸಲು ಹೋದಾಗ 'ನನ್ನನ್ನ ಮುಟ್ಟ ಬೇಡಿ' ಅಂತ ಮಹಿಳೆ ಬೊಬ್ಬೆ ಹಾಕ್ತಾಳೆ. ಪೊಲೀಸರು ಬಲ ಪ್ರಯೋಗಿಸಲು ಹೋದಾಗ, ಮಹಿಳೆ ಅಲ್ಲಿಂದ ಕದಲಲ್ಲ. ಪೊಲೀಸರು ಇನ್ನಷ್ಟು ಒತ್ತಡ ಹಾಕಿದಾಗ ಆ ಮಹಿಳೆ ತನ್ನ ವಿಚಿತ್ರ ಬೇಡಿಕೆ ಮುಂದಿಡ್ತಾರೆ. ಅವರ ಬೇಡಿಕೆ ಅಂದರೆ ನನಗೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರನ್ನು ಭೇಟಿ ಮಾಡ್ಬೇಕು. ಭೇಟಿ ಮಾಡಿ ಅವರನ್ನು ಹಗ್ ಮಾಡಬೇಕು. ಇದು ನನ್ನ ಜೀವನದ ಕೊನೆಯ ಆಸೆ. ವಿಜಯ ದಳಪತಿಯ ಅಪ್ಪುಗೆ ಸಿಕ್ಕ ಬಳಿಕ ನಾನು ಬದುಕಲು ಇಷ್ಟ ಪಡಲ್ಲ ಎಂದು ಆ ಮಹಿಳೆ ಬೊಬ್ಬೆ ಹಾಕ್ತಾರೆ.
ಟ್ರಾಫಿಕ್ ಸರ್ಕಲ್ ನಲ್ಲಿ ಹೈ ಡ್ರಾಮಾ :
ಜಂತರ್ ಮಂತರ್ ಬಳಿ ಇರುವ ಒಂದು ಟ್ರಾಫಿಕ್ (traffic) ಸರ್ಕಲ್ ನಲ್ಲಿ ಇಷ್ಟೊಂದು ಡ್ರಾಮಾ ನಡೆದಿದೆ. ಹೇಗೆ ಮನವೊಲಿಸಿದ್ರೂ ಆ ಮಹಿಳೆ ಒಪ್ಪಲ್ಲ. ಕೊನೆಗೆ ಇನ್ನಷ್ಟು ಪೊಲೀಸರು ಬಂದು, ಆ ಮಹಿಳೆಯನ್ನು ಅಲ್ಲಿಂದ ಎತ್ಹಾಕಿ ಕೊಂಡು ರಸ್ತೆಯ ಮತ್ತೊಂದು ಕಡೆ ಹೋಗ್ತಾರೆ. ಈ ವಿಡಿಯೋ ಈ ಎಲ್ಲಾ ಕಡೆ ವೈರಲ್ ಆಗ್ತಿದೆ. ಜೊತೆ ಈ ಬಗ್ಗೆ ಚರ್ಚೆ ಕೂಡಾ ನಡೀತಾ ಇದೆ.
ನೋಡಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ದೆಹಲಿಯ ಜಂತರ್ ಮಂತರ್ ಎಂಬ ಪ್ರದೇಶದಲ್ಲಿ ನೂರಾರು ಪ್ರತಿಭಟನೆಗಳು ನಡೆಯುತ್ತದೆ. ದಿನವೂ ಅಲ್ಲಿ ಪ್ರತಿಭಟನಾಕಾರರು ಸೇರ್ತಾರೆ. ಕೆಲವೊಂದು ಪ್ರತಿಭಟನೆಗಳು ದೇಶಾದ್ಯಂತ ಸುದ್ದಿಯಾಗುತ್ತವೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ ಕೂಡಾ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದೆ.
ಎಲ್ಲವೂ ಪ್ರಚಾರಕ್ಕಾಗಿ :
ಇಂಥ ಪ್ರತಿಭಟನೆ (protest) ನಡೆಯುವ ವೇಳೆಯೇ ನಡೆದ ಮಹಿಳೆಯ ವಿಚಿತ್ರ ಪ್ರತಿಭಟನೆಯ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗಿವೆ. ಮಾಧ್ಯಮಗಳಲ್ಲಿ ಸುದ್ದಿಯಾಗುವ ನಿಟ್ಟಿನಲ್ಲಿ ಕೆಲವರು ಇಂಥಹ ಪ್ರತಿಭಟನೆಗೆ ಮುಂದಾಗ್ತಾರೆ. ಸಮಾಜದ ಹಿತ ಕಾಯುವ ಯಾವ ಸದುದ್ದೇಶ ಕೂಡಾ ಅವರಲ್ಲಿರುವುದಿಲ್ಲ. ಒಟ್ಟಾರೆ, ದಿನ ಬೆಳಗಾದ್ರೆ, ಟೀವಿಗಳಲ್ಲಿ ಕಾಣಿಸಿಕೊಳ್ಳಬೇಕು. ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಬೇಕು ಎಂಬ ಕಾರಣಕ್ಕೆ ಮಾತ್ರ ಇಂಥ ಪ್ರತಿಭಟನೆ ನಡೆಯುತ್ತವೆ. ಅಂದ ಹಾಗೆ, ಆ ಮಹಿಳೆಗೆ ತಮಿಳುನಾಡು ಸಿಎಂ ವಿಜಯ್ ಭೇಟಿ ಆಗೋಕೆ ಅವಕಾಶ ಸಿಗ್ತಾ, ಅಥವಾ ಲಾಕಪ್ ನಲ್ಲಿ ಪೊಲೀಸರ ಗೆಸ್ಟ್ ಆದ್ರಾ ಅನ್ನೋದು ಮಾತ್ರ ಇನ್ನೂ ಸ್ಪಷ್ಟ ಆಗಿಲ್ಲ.
A woman lay down on the street at Jantar Mantar, making an unusual demand ... she says her last wish is to hug CM Vijay Thalapathy. 😭 pic.twitter.com/zfZGiwGbaL
— Sachin Unfiltered (@TheSachinView) September 30, 2026


Click it and Unblock the Notifications
