ಭ್ರಷ್ಟಾಚಾರ: 16 ಕೋಟಿ ಲಂಚ ಕೊಟ್ಟ ಬೆಂಗಳೂರಿಗರು!

ಬೆಂಗಳೂರು ಮೂಲದ ಜನಾಗ್ರಹ ಎಂಬ ಸಂಸ್ಥೆ ಪ್ರಕಾರ ಅದು ಪ್ರಾರಂಭವಾದಾಗಿನಿಂದ (2011) ಇದುವರೆಗೂ ಇಲ್ಲಿನ ಜನ 16 ಕೋಟಿ ರೂ ಲಂಚ ನೀಡಿದ್ದಾರಂತೆ. ಅದನ್ನು ಖುದ್ದು ಲಂಚ ನೀಡಿರುವ ವ್ಯಕ್ತಿಗಳೆ ಜನಾಗ್ರಹ ವೆಬ್ ಸೈಟಿಗೆ ಬರೆದು ತಿಳಿಸಿದ್ದಾರೆ.
ನಂತರದ ಸ್ಥಾನದಲ್ಲಿ ಚೆನ್ನೈ ಮಹಾಜನತೆ ಕಂಡುಬಂದಿದ್ದಾರೆ. ಚೆನ್ನೈನವರೂ 7.08 ಕೋಟಿ ರೂ ಲಂಚ ನೀಡಿದ್ದಾರಂತೆ. 1,100 ಮಂದಿ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿ ಕೃತಾರ್ಥರಾಗಿದ್ದಾರೆ. ಅಂದರೆ ಸರಾಸರಿ ಒಬ್ಬೊಬ್ಬರೂ 19,968 ರೂಪಾಯಿ ಲಂಚ ನೀಡಿದ್ದಾರೆ.
www.ipaidabribe.com ಪ್ರಕಾರ ಭೂ ದಾಖಲಾತಿ, ನೀರು, ಒಳಚರಂಡಿ, ವಿದ್ಯುತ್ ಸಂಪರ್ಕ, ಆರೋಗ್ಯ, ಶಿಕ್ಷಣ ಇವೇ ಮುಂತಾದ ಜನಸಾಮಾನ್ಯ/ ಜನಾವಶ್ಯಕ ಸೇವೆಗಳನ್ನು ಪಡೆಯುವ ಸಂಬಂಧ ಜನ ಹೆಚ್ಚಾಗಿ ಚಂಲ ಪಾವತಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ 22,378 ಮಂದಿ 57.61 ಕೋಟಿ ರೂ. ಲಂಚ ನೀಡಿದ್ದಾರೆ. ಮುಂಬೈವಾಲಾಗಳು ಮೂರನೇ ಸ್ಥಾನದಲ್ಲಿದ್ದು 6.97 ಕೋಟಿ ರೂ. ಲಂಚ ಕೊಟ್ಟಿದ್ದಾರೆ. ದೇಶದಾದ್ಯಂತ 544 ಸ್ಥಳಗಳಿಂದ ನಮ್ಮ ಸೈಟಿಗೆ ಪ್ರತಿದಿನ 12,000 ಮಂದಿ ಭೇಟಿ ನೀಡುತ್ತಾರೆ. ದಿನಾಲೂ ಸುಮಾರು 20 ಲಂಚಾನುಭವಗಳು ದಾಖಲಾಗುತ್ತವೆ.
ಅಂದಹಾಗೆ ಬೆಂಗಳೂರಿನ ಜನಕ್ಕೆ ನಮ್ಮ ವೆಬ್ ಸೈಟ್ ಬಗ್ಗೆ ಚೆನ್ನಾಗಿ ತಿಳಿವಳಿಕೆ ಇದೆ. ಹಾಗಾಗಿ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದಾರೆ. ಚೋದ್ಯವೆಂದರೆ ವ್ಯವಸ್ಥೆಯ ವಿರುದ್ಧ ಕಿಡಿಕಾರುತ್ತಲೇ ಇವರೆಲ್ಲಾ ಲಂಚ ತೆತ್ತು ಕೈತೊಳೆದುಕೊಂಡಿದ್ದಾರೆ ಎನ್ನುತ್ತಾರೆ ಜನಾಗ್ರಹದ ಜೋಯಲಿತಾ. ಆಶಾದಾಯಕ ಸಂಗತಿಯೆಂದರೆ 'ಅಧಿಕಾರಿಗಳು ಲಂಚರುಶುವತ್ತುಗಳನ್ನು ಕೇಳಿದರೂ ನಾವು ಅದಕ್ಕೆ ಸೊಪ್ಪು ಹಾಕಿಲ್ಲ' ಎಂದು ನೂರಾರು ಮಂದಿ ವೆಬ್ ಸೈಟಿನಲ್ಲಿ ಹೇಳಿಕೊಂಡಿದ್ದಾರೆ.












Click it and Unblock the Notifications