ನನ್ನಪ್ಪನ ಸಾವಿನ ಪ್ರತೀಕಾರ ತೀರಿಸಿಕೊಳ್ಳುತ್ತೇನೆ: ಯೋಧನ ಮಗನ ಭಾವುಕ ನುಡಿ!
ರಾಜೌರಿ, ಆಗಸ್ಟ್ 13: "ನನ್ನಪ್ಪನನ್ನು ಕೊಂದವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ದೊಡ್ಡವನಾದ ಮೇಲೆ ಸೇನೆಗೆ ಸೇರಿ ಅವರ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ..." ಇದು ಹುತಾತ್ಮ ಸೈನಿಕಕರೊಬ್ಬರ ಮಗನ ಭಾವುಕ ನುಡಿ.
ಇತ್ತೀಚೆಗಷ್ಟೇ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ಪರ್ವೇಜ್ ಅಹ್ಮದ್ ಎಂಬ ಯೋಧನ ಇಬ್ಬರು ಮಕ್ಕಳಲ್ಲಿ ತಂದೆಯ ಸಾವು ದುಃಖ ಮೂಡಿಸಿದ್ದಕ್ಕಿಂತ ಹೆಚ್ಚು ಕಿಚ್ಚು ಹುಟ್ಟಿಸಿದೆ!
"ನಾನು ನನ್ನ ತಂದೆಯಂತೆಯೇ ಆಫೀಸರ್ ಆಗುತ್ತೇನೆ. ಅವರ ಸಾವಿನ ಪ್ರತೀಕಾರ ತೆಗೆದುಕೊಳ್ಳುತ್ತೇನೆ. ಅವರ ಬಲಿದಾನ ಜಮ್ಮು-ಕಾಶ್ಮೀರಕ್ಕೆ ಉತ್ತಮ ಫಲನೀಡಬೇಕು" ಎಂದು 12 ಅಹ್ಮದ್ ಅವರ ವರ್ಷ ವಯಸ್ಸಿನ ಮಗ ಹೇಳಿದ್ದಾನೆ.

ನನ್ನ ತಂದೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ನಾನೂ ಅವರಂತೆಯೇ ಈ ದೇಶದ ಹೆಮ್ಮೆಯ ಮಗನಾಗಲು ಬಯಸುತ್ತೇನೆ ಎಂದು ಆತ ಹೇಳಿದ್ದಾನೆ.
ಭಾನುವಾರ ಜಮ್ಮು-ಕಾಶ್ಮೀರದ ಬಾತ್ಮಲೂ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಎನ್ ಕೌಂಟರ್ ದಾಳಿಯ ಸಂದರ್ಭದಲ್ಲಿ, ಉಗ್ರರು ನಡೆಸಿದ ಪ್ರತಿದಾಳಿಯಿಂದಾಗಿ ಪರ್ವೇಜ್ ಅಹ್ಮದ್ ಹುತಾತ್ಮರಅಗಿದ್ದರು. 11 ಜನ ಸದಸ್ಯರ ಈ ಕುಟುಂಬಕ್ಕೆ ಆಸರೆಯಾಗಿದ್ದ ಅಹ್ಮದ್ ಸಾವು ಇಡೀ ಕುಟುಂಬದ ಭವಿಷ್ಯವನ್ನು ಕಂಗಾಲಾಗಿಸಿದೆ. ಇಷ್ಟಾದರೂ ಅವರ ಮಕ್ಕಳು ಮಾತ್ರ, ತಾವೂ ತಂದೆಯಂತೆಯೇ ದೇಶಸೇವೆಗೆ ತೊಡಗುವುದಾಗಿ ಹೆಮಮೆಯಿಂದ ಹೇಳಿಕೊಳ್ಳುತ್ತಾರೆ.












Click it and Unblock the Notifications