ಜಮ್ಮು ಕಾಶ್ಮೀರದ ಸ್ಥಿತಿ ಸುಧಾರಿಸುತ್ತಿಲ್ಲ, ಹದಗೆಡುತ್ತಿದೆ: ಚಿದು

ನವದೆಹಲಿ, ಜುಲೈ 19: ಜಮ್ಮು ಕಾಶ್ಮೀರದ ಸ್ಥಿತಿ ಸುಧಾರಿಸುತ್ತಿಲ್ಲ, ನದಲಾಗಿ ಮತ್ತಷ್ಟು ಹದಗೆಡುತ್ತಿದೆ. ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದ ಸ್ಥಿತಿ ಸುಧಾರಿಸುತ್ತಿದೆ ಎನ್ನುತ್ತಿರುವ ಮಾತಿಗೆ ಅರ್ಥವಿಲ್ಲ ಎಂದು ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಹೇಳಿದರು.

ಕಾಶ್ಮೀರದ ಸ್ಥಿತಿ ಸುಧಾರಿಸುತ್ತಿದೆ ಎಂಬ ಬಿಜೆಪಿ ಹೇಳಿಕೆಯ ವಿರುದ್ಧ ಅವರು ನವದೆಹಲಿಯಲ್ಲಿಂದು (ಜುಲೈ 19) ಪ್ರತಿಕ್ರಿಯೆ ನೀಡಿದರು.

Jammu Kashmir situation is worsening, not improving: P Chidambaram

ಜುಲೈ 10 ರಿಂದ ಕಣಿವೆ ರಾಜ್ಯದಲ್ಲಿ ಒಂದಲ್ಲ ಒಂದು ಸಾವಿನ ಸುದ್ದಿ ವರದಿಯಾಗುತ್ತಲೇ ಇದೆ. ಸೇನೆ ಮತ್ತು ನಾಗರಿಕರ ನಡುವೆ ಘರ್ಷಣೆ ನಡೆಯುತ್ತಿದೆ. ಇಷ್ಟಾದರೂ ಸರ್ಕಾರ ಮಾತ್ರ ಜಮ್ಮು-ಕಾಶ್ಮೀರದಲ್ಲಿ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ, ಇಲ್ಲಿನ ಸ್ಥಿತಿ ಸುಧಾರಿಸುತ್ತಿದೆ ಎನ್ನುತ್ತಿದೆ. ಸರ್ಕಾರ ಸುಳಲ್ಳು ಹೇಳಿಕೆ ನೀಡಿ ಜನರ ಹಾದಿತಪ್ಪಿಸುತ್ತಿದೆ ಎಂದು ಮಾಜಿ ಹಣಕಾಸು ಸಚಿವ ಚಿದಂಬರಂ ಹೇಳಿದರು.

ಕೇಂದ್ರ ಸರ್ಕಾರದ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುವುದಿಲ್ಲ ಮತ್ತು ಕಣಿವೆ ರಾಜ್ಯ ಸಹಜ ಸ್ಥಿತಿಗೆ ಮರಳುವಂತೆ ಮಾಡಲು ದೇಶದ ಜನರ ವಿಶ್ವಾಸವನ್ನು ಗಳಿಸಿಕೊಂಡು ಕೇಂದ್ರ ಸರ್ಕಾರ ಮುನ್ನಡೆಯಬೇಕಿದೆ ಎಂದು ಚಿದಂಬರಂ ನುಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+