ಕದನ ವಿರಾಮ ಉಲ್ಲಂಘಿಸಿದ ಪಾಕ್ ನಿಂದ ಗುಂಡಿನ ದಾಳಿ

ನವದೆಹಲಿ, ಜೂ. 11: ಭಾರತದ ಸೈನಿಕರನ್ನು ಹತ್ಯೆಮಾಡಿದ್ದ ಉಗ್ರರನ್ನು ಕೊಂದು ಹಾಕಿದ್ದ ಪರಿಣಾಮವೆಂಬಂತೆ ಪಾಕಿಸ್ತಾನ ಮತ್ತೆ ಗಡಿ ತಂಟೆ ಶುರು ಮಾಡಿದ್ದು ಕದನ ವಿರಾಮ ಉಲ್ಲಂಘನೆ ಮಾಡಿ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನದ ಸೈನಿಕರು ಗುರುವಾರ ಕದನ ವಿರಾಮ ಉಲ್ಲಂಘಿಸಿದ್ದಾರೆ. ಮಯನ್ಮಾರ್ ಗೆ ನುಗ್ಗಿ ಉಗ್ರರನ್ನು ಹತಮಾಡಿದಕ್ಕೆ ಪಾಕ್ ಪ್ರತೀಕಾರ ಆರಂಭಿಸಿದೆ ಎಂದೇ ಹೇಳಲಾಗಿದೆ.[ಮ್ಯಾನ್ಮಾರ್ ಗಡಿಯಲ್ಲಿ ಎಷ್ಟು ಉಗ್ರರು ಹತರಾದರು?]

india

ಪೂಂಚ್‌ ಜಿಲ್ಲೆಯ ಸಾವ್ಜನ್‌ ವಲಯದ ಬಳಿ ಗಡಿ ಬಳಿ ಕಾರಣವಿಲ್ಲದೇ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಜಮ್ಮು ವಲಯದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮನಿಶ್ ಮೆಹ್ತಾ ತಿಳಿಸಿದ್ದಾರೆ. 15 ನಿಮಿಷಗಳ ಕಾಲ ಪಾಕ್ ಸೈನಿಕರು ನಿರಂತರವಾಗಿ ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಕೃತ್ಯಕ್ಕೆ ಭಾರತದ ಯಾವ ಸೈನಿಕರು ಬಲಿಯಾಗಿಲ್ಲ.[ಕಾಂಗ್ರೆಸ್ಸನ್ನು ಹಿಂದಿಕ್ಕಿದ ಬಿಜೆಪಿಯ ವಿದೇಶಾಂಗ ನೀತಿ]

ಇದಕ್ಕೆ ಭಾರತ ಸೇನೆ ಸಹ ತಕ್ಕ ಪ್ರತ್ಯುತ್ತರ ನೀಡಿದ್ದು ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿದೆ. ಒಟ್ಟಿನಲ್ಲಿ ಉಗ್ರರನ್ನು ಬಿಟ್ಟು ಕುತಂತ್ರದ ಮೂಲಕ ಸೈನಿಕರ ಹತ್ಯೆ ಮಾಡಿದ್ದ ಪಾಕಿಸ್ತಾನ ಈಗ ವಿನಾ ಕಾರಣ ತಂಟೆ ತೆಗೆದು ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+