Pahalgam Terror Attack: ಮೃತ ಹೃದಯಗಳಿಗೆ ಮಿಡಿದ RCB, ದೆಹಲಿ ಕ್ಯಾಪಿಟಲ್ಸ್ ತಂಡ..IPL 2025
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಾಗದಲ್ಲಿ ನೆರೆದಿದ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರು ಹಲವರನ್ನು ಅಮಾನುಷವಾಗಿ ಹತ್ಯೆಗೈದಿದ್ದಾರೆ. ಈ ಘಟನೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಫ್ರಾಂಚೈಸಿ ತಂಡಗಳು ಸಂತಾಪ ಸೂಚಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ದೆಹಲಿ ಕ್ಯಾಪಿಟಲ್ಸ್ (Delhi Capitals) ತಂಡಗಳ ಪ್ರಾಂಚೈಸಿಗಳು ಉಗ್ರ ದಾಳಿ ಖಂಡಿಸಿವೆ.
ಪ್ರವಾಸಿಗರ ಮೇಲಿನ ಈ ದಾಳಿ ಆಘಾತ ಮತ್ತು ದುಃಖ ಉಂಟು ಮಾಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಮುಗ್ಧ ಜೀವಗಳಿಗೆ ಶಾಂತಿ ಸಿಗಲಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಶೋಕ ವ್ಯಕ್ತಪಡಿಸಿದೆ.

ಇದೇ ರೀತಿ ದೆಹಲಿ ಕ್ಯಾಪಿಟಲ್ ಸಹ ಘಟನೆಯನ್ನು ತೀತ್ರವಾಗಿ ಖಂಡಿಸಿದೆ. ಪಹಲ್ಗಾಮ್‌ನಲ್ಲಿ ನಡೆದ ದುರಂತ ಹೃದಯ ಹಿಂಡುವಂತಿದೆ. ಉಗ್ರರ ದಾಳಿಗೆ ಹತ್ಯೆಗೀಡಾದ ಬಲಿಪಶುಗಳು, ಮತ್ತವರ ಕುಟುಂಬಗಳು ಹಾಗೂ ಘಟನೆಯಿಂದ ಹಾನಿಗೀಡಾದ ಎಲ್ಲ ದೃಹಯಗಳೊಂದಿಗೆ ನಾವಿದ್ದೇವೆ. ನಿಮ್ಮ ದುಃಖದ ಸಂದರ್ಭದಲ್ಲಿ ನಾವು ಜೊತೆಯಾಗಲಿದ್ದೇವೆ, ನಿಮ್ಮ ಪರ ನಿಲ್ಲುತ್ತೇವೆ ಎಂದು ದೆಹಲಿ ಕ್ಯಾಪಿಟಲ್ಸ್ ತಂಡ ತಿಳಿಸಿದೆ.
Shocked and Saddened! We offer our deepest condolences and prayers to the innocent lives lost in the horrific Pahalgam terror attack. 🙏
— Royal Challengers Bengaluru (@RCBTweets) April 23, 2025
ಭಾರತದಲ್ಲಿ ಪ್ರಸಕ್ತ ವರ್ಷ 18ನೇ ಐಪಿಎಲ್ ಆವೃತ್ತಿ ಶುರುವಾಗಿದೆ. ಎಲ್ಲೆಲ್ಲೂ ಐಪಿಎಲ್ ಹವಾ ಶುರುವಾಗಿದೆ. ಮತ್ತೊಂದೆಡೆ ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯವರು ಸೇರಿದಂತೆ ರಾಜತಾಂತ್ರಿಕೆ ಕೆಲಸಗಳಲ್ಲಿ ತೊಡಗಿದೆ. ಅಮರಿಕಾ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿದ ಹೊತ್ತಿನಲ್ಲಿ ಇಂಥದ್ದೊಂದು ದಾಳಿ ನಡೆದಿದೆ. ಇದನ್ನು ಇಡೀ ಭಾರತೀವೆ ಖಂಡಿಸಿದ್ದು, ಮೃತರು, ಅವರೊಂದಿಗೆ ಪಹಲ್ಗಾಮ್‌ನಲ್ಲಿದ್ದ ಕುಟುಂಬಸ್ಥರ ಯಾತನೆಗೆ ಮರುಕು ವ್ಯಕ್ತವಾಗಿದೆ. ಈ ಘಟನೆಗೆ ಐಪಿಎಲ್ ಕೆಲವು ತಂಡಗಳು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಇನ್ನೂ ಸೌದಿ ಅರೇಬಿಯಾದ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಾರತಕ್ಕೆ ಮರಳುತ್ತಿದ್ದ ವಿಮಾಣದಲ್ಲಿಯೇ ವಿದೇಶಾಂಗ ಸಚಿವ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್, ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳು ಸಭೆಯಲ್ಲಿದ್ದರು.
ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಪಹಲ್ಗಾಮ್‌ನಲ್ಲಿ ಪ್ರಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಕನಿಷ್ಠ 26 ಮಂದಿ ಸವನ್ನಪ್ಪಿದ್ದಾರೆ ಎಂದು ಬುಧವಾರ ಭಾರತಕ್ಕೆ ಮರಳಿದ ಪ್ರಧಾನಿ ಮೋದಿಯವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈಗಾಗಲೇ ಅಮಿತ್ ಶಾ ಕಾಶ್ಮೀರದಲ್ಲಿದ್ದಾರೆ. ಇತ್ತರ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಅಧಿಕಾರಿಗಳ ತಂಡ ಕಾಶ್ಮೀರದಲ್ಲಿದೆ. ಮೃತರ ಕುಟುಂಬಸ್ಥರನ್ನು ಮರಳಿ ಕರೆ ತರಲು ಸರ್ಕಾರಗಳು ಸಜ್ಜಾಗಿವೆ.












Click it and Unblock the Notifications