Terrorist attack: ಶ್ರೀನಗರ ಮಾರುಕಟ್ಟೆಯಲ್ಲಿ ಉಗ್ರರ ದಾಳಿ: ಸಿಎಂ ಓಮರ್ ಅಬ್ದುಲ್ಲಾ ಖಡಕ್ ವಾರ್ನಿಂಗ್
ಶ್ರೀನಗರ, ನವೆಂಬರ್ 03: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಮಿಕರ ಮೇಲೆ ದಾಳಿ ಮಾಡಿದ್ದ ಕಮಾಂಡ್ ಸೇರಿ ಮೂವರು ಉಗ್ರರರನ್ನು ಭಾರತೀಯ ಸೇನಾ ಸಿಬ್ಬಂದಿ ಹೊಡೆದುರಳಿಸಿದ್ದರು. ಇದರ ಮಾರನೇ ದಿನವೇ ಉಗ್ರರು ಶ್ರೀನಗರದ ಮಾರುಕಟ್ಟೆಯಲ್ಲಿ ಗ್ರೆನೇಡ್ ದಾಳಿ ನಡೆಸಿದ್ದಾರೆ. ಇದನ್ನು ಖಂಡಿಸಿರುವ ಜಮ್ಮು ಕಾಶ್ಮೀರದ ಸಿಎಂ ಓಮರ್ ಅಬ್ದುಲ್ಲಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕೆಲ ದಿನಗಳಿಂದ ಸೇನಾ ಪಡೆ ಮತ್ತು ಉಗ್ರ ಸಂಘಟನೆಗಳ ಮಧ್ಯೆ ಕಾಳಗ ನಡೆಯುತ್ತಲೇ ಇತ್ತು. ಇನ್ನೇನು ಎಲ್ಲವು ತಣ್ಣಗಾಯಿತು ಎನ್ನಷ್ಟುವರದಲ್ಲಿ ಭಾನುವಾರ ಮಾರುಕಟ್ಟೆಯಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಪರಿಣಾಮ ಸುಮಾರು 10 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅವರೆಲ್ಲರನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅಸಹಜ ಗೊಂದಲ ಸೃಷ್ಟಿಸಿಲು ಹೀಗೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ. ಸಾಮಾನ್ಯ ಜನರನ್ನು ಗುರಿ ಮಾಡಿಕೊಂಡು ಹೀಗೆ ದಾಳಿ ನಡೆಸುವುದು ಸಹಿಸಲು ಸಾಧ್ಯವಿಲ್ಲ ಎಂದು ಉಗ್ರ ಸಂಘಟನೆಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಣಿವೆಯ ಕೆಲವು ಭಾಗಗಳಲ್ಲಿ ದಾಳಿಗಳು ಮತ್ತು ಎನ್‌ಕೌಂಟರ್‌ಗಳ ನಡೆಯುತ್ತಿವೆ. ಈ ಕುರಿತು ಭಾನುವಾರ ಅವರು ಟ್ವೀಟ್ ಮೂಲಕ ಘಟನೆಯನ್ನು ಖಂಡಿಸಿದ್ದಾರೆ.
ಶ್ರೀನಗರದ 'ಸಂಡೇ ಮಾರ್ಕೆಟ್'ನಲ್ಲಿರುವ ಅಮಾಯಕ ವ್ಯಾಪಾರಿಗಳ, ಗ್ರಾಹಕರ ಮೇಲೆ ಗ್ರೆನೇಡ್ ದಾಳಿ ಆತಂಕಕಾರಿ ಸಂಗತಿಯಾಗಿದೆ. ಇದು ಅಮಾಯಕ ಜನರ ಮೇಲಿನ ದಾಳಿಯಾಗಿದ್ದು, ಖಂಡನೀಯ. ಇದಕ್ಕೆ ಯಾವ ಸಮರ್ಥನೆ ಕೇಳಲು ನಾವು ತಯಾರಿಲ್ಲ.

ದಾಳಿ ಕೊನೆಗೊಳಿಸಲು ಕ್ರಮ ಕೈಗೊಳ್ಳಿ: ಸಿಎಂ
ಶ್ರೀನಗರ ಹಾಗೂ ಇಡೀ ರಾಜ್ಯದಲ್ಲಿ ಜನರು ಯಾವುದೇ ಭಯವಿಲ್ಲದೆ ಉತ್ತಮ ಬದುಕು ನಡೆಸುವಂಥಾಗಬೇಕು. ಅದಕ್ಕಾಗಿ ಭದ್ರತಾ ವ್ಯವಸ್ಥೆ ಬಲಪಡಿಸುವ ಜೊತೆಗೆ ಈ ದಾಳಿಯನ್ನು ಶೀಘ್ರವಾಗಿ ಕೊನೆಗೊಳಿಸಲು ಅಗತ್ಯ ಎಲ್ಲ ಕ್ರಮ ಕೈಗೊಳ್ಳವುಂತೆ ಅವರು ಪೋಸ್ಟ್‌ನಲ್ಲಿ ಒತ್ತಾಯಿಸಿದ್ದಾರೆ. ಈ ಮೂಲಕ ಪ್ರಕರಣವನ್ನು ಕೇಂದ್ರದ ಗಮನಕ್ಕೂ ತಂದಿದ್ದಾರೆ.
ಕಣವೆ ರಾಜ್ಯದಲ್ಲಿ ವಾರಗಳಿಂದ ಭಯೋತ್ಪಾದಕರು ಹಾಗೂ ಸೇನಾ ಸಿಬ್ಬಂದಿ ನಡುವೆ ಸರಣಿ ಗುಂಡಿನ ಚಕಮಕಿ ನಡೆಯುತ್ತಿದೆ. ಶನಿವಾರ ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಸೈನಿಕರು ನೆಲ್ಲಕ್ಕುರುಳಿಸಿದ್ದಾರೆ.
ನಾಲ್ವರು ಸೇನಾ ಸಿಬ್ಬಂದಿಗೆ ಗಾಯ
ಸೇನೆಯಿಂದ ಕೊಲ್ಲಲ್ಪಟ್ಟ ಭಯೋತ್ಪಾದಕ ಉಸ್ಮಾನ್ ಲಷ್ಕರ್-ಎ-ತೊಯ್ಬಾ ಕಮಾಂಡರ್ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಧಿ ಕುಮಾರ್ ಬಿರ್ಡಿ ಅವರು ಮಾಹಿತಿ ನೀಡಿದ್ದಾರೆ. ಸದ್ಯ ಸೇನಾ ಸಿಬ್ಬಂದಿ ಕಾರ್ಯಾಚರಣೆ ಅಂತ್ಯಗೊಂಡಿದೆ. ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು, ಆತನನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಆತ ಸಹ ಉಗ್ರ ಸಂಘಟನೆಯಲ್ಲಿ ಆಕ್ಟಿವ್ ಆಗಿಲ್ಲ ಎನ್ನಲಾಗಿದೆ. ಈ ಕಾರ್ಯಾಚರಣೆ ವೇಳೆ ಒಟ್ಟು 4 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾನೆ ಎಂದು ಎಎನ್ಐ ವರದಿ ಮಾಡಿದೆ.












Click it and Unblock the Notifications