• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಮ್ಮು, ಕಾಶ್ಮೀರದಲ್ಲಿ 30 X 40 ಸೈಟ್ ಮಾರಾಟಕ್ಕಿದೆ!

|

ಸಾಮಾಜಿಕ ಜಾಲತಾಣ ಅದೆಷ್ಟು ಪ್ರಭಾವಿ ಮಾಧ್ಯಮವಾಗಿ, ಹೆಮ್ಮರವಾಗಿ ಬೆಳೆದು ನಿಂತಿದೆ ಎನ್ನುವುದಕ್ಕೆ ಸೋಮವಾರದ (ಆ 5) ಜಮ್ಮು ಮತ್ತು ಕಾಶ್ಮೀರದ ಘೋಷಣೆ ಒಂದು ಉದಾಹರಣೆ.

ಸುಮಾರು ಆರು ದಶಕಗಳ ಕಾಲದಿಂದಲೂ ಜಾರಿಯಲ್ಲಿದ್ದ, ಕಣಿವೆ ರಾಜ್ಯದಲ್ಲಿನ ಆರ್ಟಿಕಲ್ 370 ರದ್ದುಗೊಳಿಸುವ ನಿರ್ಧಾರವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರಸ್ತಾವಿಸಿದ ಸುದ್ದಿ, ಮಿಂಚಿನ ವೇಗದಲ್ಲಿ ದೇಶದಲ್ಲಿ ಹರಿದಾಡಿ, ಇದರ ಪರ, ವಿರೋಧ ಚರ್ಚೆಗಳು ತಾರಕಕ್ಕೇರಿವೆ.

ಅಮಿತ್ ಶಾ ಮಂಡಿಸಿದ ವಿಧೇಯಕಕ್ಕೆ ಮಾಯಾವತಿಯ ಬಿಎಸ್ಪಿ ಬೆಂಬಲಅಮಿತ್ ಶಾ ಮಂಡಿಸಿದ ವಿಧೇಯಕಕ್ಕೆ ಮಾಯಾವತಿಯ ಬಿಎಸ್ಪಿ ಬೆಂಬಲ

ಇದರ ಜೊತೆಗೆ, ಪುಂಖಾನುಪುಂಖವಾಗಿ ಮೆಮೆಗಳು ಹರಿದಾಡುತ್ತಿವೆ. ಕಳೆದ ಮೂರು ವಾರಗಳಲ್ಲಿ ಮೋದಿ ಸರಕಾರದ ಮೂರು ಪ್ರಮುಖ ನಿರ್ಧಾರದ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಅದರ ಕೆಲವೊಂದು ಸ್ಯಾಂಪಲ್ ಗಳು..

ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ಹೊರತಾಗಿ ಬೇರೆ ಯಾರೂ ಅಲ್ಲಿ ಆಸ್ತಿಯನ್ನು ಹೊಂದಿರುವಂತಿಲ್ಲ. ಈಗ ಅನುಚ್ಛೇದ 370 ರದ್ದಾದ ನಂತರ ಬಂದ ಒಂದು ಮೆಮೆ ಹೀಗಿದೆ, ' 30 X 40 ಸೈಟ್ ಜಮ್ಮು, ಕಾಶ್ಮೀರದಲ್ಲಿ ಮಾರಾಟಕ್ಕಿದೆ!'

ಇನ್ನು, 'ಜಮ್ಮು ಕಾಶ್ಮೀರದಲ್ಲಿ ಉಡುಪಿ ಹೊಟೇಲ್, ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್, ಪಂಜಾಬಿ ಢಾಬಾ, ವೀರಶೈವ ಲಿಂಗಾಯತ ಖಾನಾವಳಿ, ಧಾರವಾಡ ಠಾಕೂರ್ ಪೇಡಾ ಅಂಗಡಿಗಳು ತಲೆಯತ್ತಲಿವೆ'

ಕಣಿವೆ ರಾಜ್ಯದಲ್ಲಿ 370 ಮತ್ತು 35ಎ ರದ್ದು : 10 ಪ್ರಮುಖ ಸಂಗತಿಗಳು ಕಣಿವೆ ರಾಜ್ಯದಲ್ಲಿ 370 ಮತ್ತು 35ಎ ರದ್ದು : 10 ಪ್ರಮುಖ ಸಂಗತಿಗಳು

'ಜುಲೈ 22 ಸೋಮವಾರ ಚಂದ್ರಾಯನ 2, ಜುಲೈ 27 ಸೋಮವಾರ ತ್ರಿವಳಿ ತಲಾಖ್, ಆಗಸ್ಟ್ 5 ಸೋಮವಾರ ಆರ್ಟಿಕಲ್ 370, ಮುಂದಿನ ಸೋಮವಾರ ಇನ್ನೇನು? ಜೈ ಸೋಮನಾಥ್'.

'ಒಂದು ದೇಶ, ಒಂದು ಕಾನೂನು, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದು ಮಾಡಿದ ಮೋದಿ ಸರಕಾರ'.

English summary
Announcement of scrapping Article 370 in Jammu And Kashmir. Memes, Discussions Spreading Out In Social Media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X