ಸೂಪರ್ ಸ್ಟಾರ್ ರಜನಿಕಾಂತ್ ಜೈಲರ್‌ ಸಿನಿಮಾದ ಬಾಲನಟ ರಿತ್ವಿಕ್ ಈಗ ಟೆಕ್ ಉದ್ಯಮಿ: 13ನೇ ವಯಸ್ಸಿಗೆ ಕಂಪನಿ ಸ್ಥಾಪನೆ

ಕೋಯಮತ್ತೂರು: 13 ವರ್ಷದ ಪೋರನೊಬ್ಬ ಈಗ ಕೇವಲ ಸಿನಿಮಾ ರಂಗ ಮಾತ್ರವಲ್ಲದೆ, ತಂತ್ರಜ್ಞಾನ ಮತ್ತು ಉದ್ಯಮ ಲೋಕದಲ್ಲೂ ಭಾರಿ ಸಂಚಲನ ಸೃಷ್ಟಿಸುತ್ತಿದ್ದಾನೆ. ಆತ ಬೇರಾರೂ ಅಲ್ಲ, ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬ್ಲಾಕ್ ಬಸ್ಟರ್ ಹಿಟ್ ಜೈಲರ್ ಮತ್ತು ಜೈಲರ್ 2 ಸಿನಿಮಾದಲ್ಲಿ ರಜನಿ ಮೊಮ್ಮಗನಾಗಿ ನಟಿಸಿರುವ ರಿತ್ವಿಕ್ ಜ್ಯೋತಿ ರಾಜ್.

ಹೌದು, ಕೇವಲ 13 ವರ್ಷದ ಈ ಬಾಲನಟ ಕ್ಯಾಮೆರಾ ಮುಂದೆ ಮಾತ್ರವಲ್ಲ, ಕಂಪ್ಯೂಟರ್ ಮುಂದೆಯೂ ಸೈ ಎನಿಸಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ತನ್ನ ಸ್ನೇಹಿತರ ತಂಡದೊಂದಿಗೆ ಸ್ವಂತ ಟೆಕ್ ಕಂಪನಿಯೊಂದನ್ನ ಸ್ಥಾಪಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

Jailer Fame Child Actor Rithvik Jothi Raj Becomes Tech Entrepreneur At Just 13 With New Startup

ಸಿನಿಮಾದಿಂದ ಟೆಕ್ ಉದ್ಯಮದತ್ತ ಜೈಲರ್ ಬಾಲನಟ

ಸಾಮಾನ್ಯವಾಗಿ 13 ವರ್ಷದ ಮಕ್ಕಳು ವಿಡಿಯೋ ಗೇಮ್, ಮೊಬೈಲ್, ಆಟೋಟಗಳಲ್ಲಿ ಕಾಲ ಕಳೆಯುತ್ತಾರೆ. ಆದರೆ ರಿತ್ವಿಕ್ ಜ್ಯೋತಿ ರಾಜ್ ಅವರ ಆಲೋಚನಾ ಲಹರಿಯೇ ಬೇರೆ. ನಟನೆಯ ಮೂಲಕ ಈಗಾಗಲೇ ಅಪಾರ ಜನಪ್ರಿಯತೆ ಗಳಿಸಿರುವ ಜೈಲರ್ ಬಾಲನಟ ರಿತ್ವಿಕ್, ತನಗೆ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಇತರ ಕ್ಷೇತ್ರಗಳಲ್ಲೂ ಆಸಕ್ತಿ ಇದೆ ಎಂಬುದನ್ನು ಸಾಬೀತುಪಡಿಸಿದ್ದಾನೆ.

ಬಾಲ್ಯದಲ್ಲೇ ಉದ್ಯಮಶೀಲತೆಯ ಕನಸು ಕಂಡಿರುವ ಈ ಬಾಲಕ, ತಂತ್ರಜ್ಞಾನದ ಮೇಲಿನ ತನ್ನ ಅಪಾರ ಒಲವನ್ನ ಈಗ ಒಂದು ವ್ಯವಹಾರವಾಗಿ ಪರಿವರ್ತಿಸಿದ್ದಾನೆ. ನಟನೆ ಮತ್ತು ಶಿಕ್ಷಣದ ಜೊತೆಗೆ ಕೋಡಿಂಗ್ ಕಲಿತು, ಅದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ರಿತ್ವಿಕ್ ಸಾಧನೆ ನಿಜಕ್ಕೂ ಮೆಚ್ಚುವಂತದ್ದು.

ವಿಡಿಯೋ ಕಾಲ್ ಬೋರ್‌ಡಮ್‌ನಿಂದ ಹುಟ್ಟಿದ ಸ್ಟಾರ್ಟ್ಅಪ್ ಐಡಿಯಾ

ಈ ಕಂಪನಿ ಸ್ಥಾಪನೆಯ ಹಿಂದಿನ ಕಥೆ ಕೂಡ ಬಹಳ ಸ್ವಾರಸ್ಯಕರವಾಗಿದೆ. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ರಿತ್ವಿಕ್ ಮತ್ತು ಆತನ ಗೆಳೆಯರಿಗೆ ವಿಪರೀತ ಬೋರ್ ಆಗಿತ್ತಂತೆ. ಈ ಬೇಸರ ಕಳೆಯಲು ಏನಾದರೂ ಹೊಸದನ್ನು ಮಾಡಬೇಕು ಎಂದು ಯೋಚಿಸಿದ ಈ ಬಾಲಕರ ತಂಡ, ತಾವೇ ಸ್ವತಃ ಒಂದು ವೆಬ್‌ಸೈಟ್ ನಿರ್ಮಾಣ ಮಾಡಲು ಮುಂದಾಯಿತು.

ಕೇವಲ ತಮಾಷೆಗೆ ಅಥವಾ ಸಮಯ ಕಳೆಯಲು ಆರಂಭಿಸಿದ ಈ ವೆಬ್‌ಸೈಟ್ ರಚನೆಯ ಕೆಲಸ, ದಿನ ಕಳೆದಂತೆ ಒಂದು ಉದ್ಯಮದ ಸ್ವರೂಪ ಪಡೆದುಕೊಂಡಿತು. ತಮಗಿದ್ದ ಕೋಡಿಂಗ್ ಜ್ಞಾನವನ್ನು ಬಳಸಿಕೊಂಡು, ಧೈರ್ಯವಾಗಿ ಹೆಜ್ಜೆ ಇಟ್ಟ ಈ ಗೆಳೆಯರ ಬಳಗ ಅಂತಿಮವಾಗಿ ತಮ್ಮದೇ ಆದ ಒಂದು ಕಂಪನಿಯನ್ನ ಹುಟ್ಟುಹಾಕಿದ್ದಾರೆ.

ಪೈಥಾನ್ ಕೋಡಿಂಗ್ ಮತ್ತು ರೊಬೊಟಿಕ್ಸ್ ಬಗ್ಗೆ ಅಪಾರ ಒಲವು

ರಿತ್ವಿಕ್ ಜ್ಯೋತಿ ರಾಜ್‌ಗೆ ಪ್ರೋಗ್ರಾಮಿಂಗ್ ಭಾಷೆಯಾದ ಪೈಥಾನ್ ಕೋಡಿಂಗ್ ಬಗ್ಗೆ ಒಳ್ಳೇಯ ಜ್ಞಾನವಿದೆ. ಕೇವಲ ಕೋಡಿಂಗ್ ಮಾತ್ರವಲ್ಲದೆ, ರೋಬೋಟ್‌ಗಳನ್ನ ತಯಾರಿಸುವ ಬಗ್ಗೆಯೂ ಈತನಿಗೆ ವಿಪರೀತ ಆಸಕ್ತಿ ಇದೆ. ಸ್ನೇಹಿತರೊಂದಿಗೆ ಸೇರಿ ನಿರ್ಮಿಸಿರುವ ವೆಬ್‌ಸೈಟ್ ಮೂಲಕ ಇವರು ವಿವಿಧ ಆನ್‌ಲೈನ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ.

ಅಷ್ಟೇ ಅಲ್ಲದೆ, ಆಸಕ್ತರಿಗಾಗಿ ವಿಶೇಷ ಕೋರ್ಸ್‌ಗಳನ್ನ ಸಹ ಈ ವೆಬ್‌ಸೈಟ್ ಮೂಲಕ ಒದಗಿಸುತ್ತಿದ್ದಾರೆ. ಒಂದು ಪ್ರಬುದ್ಧ ಟೆಕ್ ಕಂಪನಿಯ ಮಾದರಿಯಲ್ಲೇ ಈ ಬಾಲಕರು ತಮ್ಮ ಆನ್‌ಲೈನ್ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

10 ಮಕ್ಕಳ ತಂಡ, 5 ಮುಖ್ಯ ಪಾಲುದಾರರು

ಈ ಯುವ ಸ್ಟಾರ್ಟ್‌ಅಪ್‌ನಲ್ಲಿ ಒಟ್ಟು ಹತ್ತು ಜನ ಸದಸ್ಯರಿದ್ದಾರೆ. ಇದರಲ್ಲಿ ರಿತ್ವಿಕ್ ಸೇರಿದಂತೆ ಐದು ಜನ ಮುಖ್ಯ ಪಾಲುದಾರರಾಗಿದ್ದರೆ, ಉಳಿದ ಐದು ಜನ ಸದಸ್ಯರು ಕಂಪನಿಯ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುತ್ತಾರೆ. ಬಾಲ್ಯದಲ್ಲೇ ಬ್ಯುಸಿನೆಸ್ ಪಾರ್ಟ್‌ನರ್ಸ್ ಆಗಿರುವ ಈ ಮಕ್ಕಳು, ಭವಿಷ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ.

ಓರ್ವ ಸೂಪರ್‌ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುವುದರಿಂದ ಹಿಡಿದು, ಸ್ವಂತ ಕಂಪನಿ ಕಟ್ಟಿ ಬೆಳೆಸುವವರೆಗೆ ರಿತ್ವಿಕ್ ನಡೆದುಬಂದಿರುವ ಹಾದಿ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ. ಸ್ವಂತವಾಗಿ ಏನನ್ನಾದರೂ ಸಾಧಿಸಲು ವಯಸ್ಕರಾಗುವವರೆಗೂ ಕಾಯಬೇಕಿಲ್ಲ, ಆಸಕ್ತಿ ಮತ್ತು ಶ್ರಮವಿದ್ದರೆ ಯಾವ ವಯಸ್ಸಿನಲ್ಲಾದರೂ ಸಾಧನೆ ಮಾಡಬಹುದು ಎಂಬುದನ್ನು ರಿತ್ವಿಕ್ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+